ಬೆನ್ನುಮೂಳೆಯ ಸ್ನಾಯು ಬಲಪಡಿಸುವ ಯೋಗ

 1. ನನಗೆ ಬೆನ್ನುನೋವು ಇದೆ. ಎಷ್ಟೇ ಚಿಕಿತ್ಸೆ, ಮುಲಾಮು, ಔಷಧಿಗಳಿಂದ ಪ್ರಯೋಜನವಾಗಲಿಲ್ಲ. ಆದ್ದರಿಂದ ತಾವು ಪರಿಹಾರಕ್ಕಾಗಿ ಮುದ್ರೆಗಳನ್ನು ಮತ್ತು ಯೋಗವನ್ನು ತಿಳಿಸಿ.
  | ಸಾಜಿದಾ ಮ. ಕಂದಗಲ್

  ಸುದೀರ್ಘ ಕೆಲಸದ ಸಮಯ, ದೈನಂದಿನ ಒತ್ತಡವು ಬೆನ್ನುನೋವನ್ನು ಬಹಳ ಸಾಮಾನ್ಯ ಸಮಸ್ಯೆಯನ್ನಾಗಿ ಮಾಡುತ್ತದೆ. ಬೆನ್ನುಮೂಳೆಯ ಸ್ನಾಯುಗಳನ್ನು ಹಿಗ್ಗಿಸಲು ಮತ್ತು ಮತ್ತು ಬಲಪಡಿಸಲು ಸಹಾಯ ಮಾಡುವ ಕೆಲವು ಭಂಗಿಗಳಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ಆಸನಗಳ ಸ್ಟ್ರೆಚಿಂಗ್ ಸ್ನಾಯುವಿನ ಸೆಳೆತವನ್ನು ಕಡಿಮೆ ಮಾಡುತ್ತದೆ. ಮಗುವಿನ ಭಂಗಿಯ ಯೋಗವು ಬೆನ್ನಿನ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಕರಾಸನ ಭಂಗಿಯಲ್ಲಿ ಬೆನ್ನಿಗೆ ವಿಶ್ರಾಂತಿ ದೊರಕುತ್ತದೆ. ಮುದ್ರಾ ಅಥವಾ ಯೋಗ ಮಾನವದೇಹಕ್ಕೆ ಮತ್ತು ಜೀವನಶೈಲಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಬೆನ್ನುನೋವು ಇದ್ದವರು ಮಕರಾಸನ ಭಂಗಿಯನ್ನು ದಿನಕ್ಕೆ ಮೂರು ಬಾರಿ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ (ತಲಾ 5 ನಿಮಿಷದಂತೆ) ಹಾಗೂ ಹಿಪ್​ಲಿಸ್ಟ್ ಭಂಗಿ (ಸೇತುಬಂಧ ಸರ್ವಾಂಗಾಸನ) ಅಂದರೆ ಮಲಗಿ ಬೆನ್ನು ನೆಲದಲ್ಲಿದ್ದು ಮೊಣಕಾಲುಗಳನ್ನು ಭಾಗಿಸಿ ಕೈಗಳನ್ನು ಹಿಮ್ಮಡಿ ಹತ್ತಿರ ಇರಿಸಿ, ನಿಮ್ಮ ಸೊಂಟವನ್ನು ನೆಲದಿಂದ ಒಂದೆರಡು ಇಂಚುಗಳಷ್ಟು ನಿಧಾನವಾಗಿ ಮೇಲಕ್ಕೆತ್ತಿ ಸ್ವಲ್ಪ ಇದ್ದು ವಿಶ್ರಮಿಸಿ. ಈ ರೀತಿ ಐದರಿಂದ ಹತ್ತು ಬಾರಿ ಪುನರಾವರ್ತಿಸಿ. ಯೋಗಚಿಕಿತ್ಸಕರ ಸಮ್ಮುಖದಲ್ಲಿ ಕಲಿತು ಅಭ್ಯಾಸ ಮಾಡಿ. ಸಾಧ್ಯವಾದರೆ ತಾಡಾಸನ, ವಜ್ರಾಸನ, ಮಾರ್ಜಾಲಾಸನ, ಕ್ಯಾಟ್, ಕ್ಯಾಮೆಲ್ ಭಂಗಿ, ಕಟಿಚಕ್ರಾಸನ, ಶಲಭಾಸನ ಮಾಡಿ. ಕೊನೆಯಲ್ಲಿ ಶವಾಸನ ಮಾಡಿ ಹಾಗೂ ಧ್ಯಾನ ಮತ್ತು ನಾಡಿಶುದ್ಧಿ ಪ್ರಾಣಾಯಾಮ ಅಭ್ಯಾಸ ಮಾಡಿ (ತಲಾ ಹತ್ತು ನಿಮಿಷದಂತೆ). ದಿನವಿಡೀ ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳಿ. ಬೆನ್ನಿಗೆ ಒತ್ತಡವಾಗುವ ಕೆಲಸ ಬೇಡ. ಉತ್ತಮವಾಗಿ ಕುಳಿತುಕೊಳ್ಳುವ ಭಂಗಿಯನ್ನು (ಕುರ್ಚಿಯಲ್ಲಿ) ಮುಂದುವರಿಸಿ. ಯೋಗವನ್ನು ಮುಂಜಾನೆ ಖಾಲಿ ಹೊಟ್ಟೆಗೆ ಅಭ್ಯಾಸ ಮಾಡಬೇಕು. ಮುದ್ರೆಗಳನ್ನು ಸಾಮಾನ್ಯವಾಗಿ ಬಿಡುವಿನ ವೇಳೆಯಲ್ಲಿ ಯಾವುದೇ ಹೊತ್ತಿಗೆ ಅಭ್ಯಾಸ ಮಾಡಬಹುದು. ಮುದ್ರೆಗಳು: ಮೇರುದಂಡ ಮುದ್ರೆ ಆರು ನಿಮಿಷದಂತೆ ಮೂರು ಬಾರಿ, ಅಪಾನವಾಯುಮುದ್ರೆ ಹತ್ತು ನಿಮಿಷ, ವಾಯುಮುದ್ರೆ ಹತ್ತರಿಂದ ಇಪ್ಪತ್ತು ನಿಮಿಷ, ಪ್ರಾಣಮುದ್ರೆ ಹತ್ತು ನಿಮಿಷ ಅಭ್ಯಾಸ ಮಾಡಿ.

  2.ಯೋಗಮುದ್ರೆಗಳನ್ನು ಬೆಳಗಿನ ವೇಳೆ ಅಭ್ಯಾಸ ಮಾಡಬಹುದೆ ಅಥವಾ ಸುಖಾಸನದಲ್ಲಿ ಕುಳಿತೇ ಅಭ್ಯಾಸ ಮಾಡಬೇಕೆ? ಒಂದೇ ಕೈಯಲ್ಲಿ ಮಾಡುವುದರಿಂದ ವ್ಯತಿರಿಕ್ತ ಪರಿಣಾಮಗಳೇನಾದರೂ ಆಗಬಹುದಾ?
  | ನಾರಾಯಣ ರಾವ್ ಮೈಸೂರು
  ಮುದ್ರೆಗಳನ್ನು ಯಾವುದೇ ಹೊತ್ತಲ್ಲೂ ಅಭ್ಯಾಸ ಮಾಡಬಹುದು. ಮುಂಜಾನೆ ಅಭ್ಯಾಸ ವಿಶೇಷ. ಯಾವುದೇ ಆಸನದಲ್ಲಿ (ಪದ್ಮಾಸನ, ವಜ್ರಾಸನ, ಸುಖಾಸನ, ಸ್ವಸ್ತಿಕಾಸನ, ವೀರಾಸನ ಅಥವಾ ಕುರ್ಚಿಯಲ್ಲಿ) ಕುಳಿತು ಮಾಡಬಹುದು. ಒಂದು ಹಸ್ತದಲ್ಲಿ ಅಭ್ಯಾಸ ಮಾಡಿದರೆ ಶೇ. 50 ಪ್ರಯೋಜನ ಸಿಗುತ್ತದೆ. ನಡಿಗೆ ವೇಳೆ ಪ್ರಾಣಮುದ್ರೆ, ಚಿನ್ಮುದ್ರೆ ಮಾಡಬಹುದು. ಕಷ್ಟಪಟ್ಟು ಮುದ್ರೆ ಅಭ್ಯಾಸ ಬೇಡ. ನೋವು ಮಾಡಿಕೊಂಡು ಬೇಡ.

Leave a Reply

Your email address will not be published. Required fields are marked *