Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಬೆನ್ನುಮೂಳೆಗೆ ಬಲ ನೀಡುವ ಆಸನಗಳು

Friday, 13.07.2018, 3:01 AM       No Comments

ಹಿರಿಯ ನಾಗರಿಕರಿಗೆ ಬೆನ್ನುಮೂಳೆಯ ಬಲ ಕಡಿಮೆಯಾಗಿ ನೋವು ಬರುವುದು ಸಹಜ. ಎರಡು ಆಸನಗಳ ಮೂಲಕ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳೋಣ.

ಮಾರ್ಜಾಲಾಸನ

ವಿಧಾನ: ಜಮಖಾನದ ಮೇಲೆ ಮೊಣಕಾಲು ಮತ್ತು ಕೈಗಳನ್ನು ಸಮಾನಾಂತರವಾಗಿ ಊರಿ. ಸ್ವಲ್ಪ ಹೊತ್ತು ಈ ಸ್ಥಿತಿಯಲ್ಲಿದ್ದು, ಆಮೇಲೆ ಉಸಿರನ್ನು ತೆಗೆದುಕೊಳ್ಳುತ್ತ ನಿಧಾನವಾಗಿ ಬಲಕಾಲನ್ನು ಮೇಲಕ್ಕೆತ್ತಿ ನೇರವಾಗಿಸಿ. ಈ ಸಂದರ್ಭದಲ್ಲಿ ಶಿರಸ್ಸನ್ನು ಸ್ವಲ್ಪ ಮೇಲಕ್ಕೆತ್ತಿ ದೃಷ್ಟಿಯನ್ನು ನೇರವಾಗಿರಿಸಿ. ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತ ಸ್ವಲ್ಪ ಹೊತ್ತು ನೆಲೆಸಿದ್ದು, ಆಮೇಲೆ ಉಸಿರನ್ನು ಬಿಡುತ್ತ ನಿಧಾನವಾಗಿ ವಿಶ್ರಾಂತಿ ಪಡೆಯಿರಿ. ಹಾಗೆಯೇ ಎಡಗಾಲಿನಲ್ಲಿಯೂ ಅಭ್ಯಾಸ ನಡೆಸಿ. ಈ ರೀತಿ ಎರಡರಿಂದ ಮೂರು ಬಾರಿ ಮಾರ್ಜಾಲಾಸನದ ಅಭ್ಯಾಸ ನಡೆಸಿ ವಿಶ್ರಾಂತಿ ಪಡೆಯಿರಿ.

ಪ್ರಯೋಜನ: ಬೆನ್ನು ಮತ್ತು ಸೊಂಟನೋವಿನ ಬಿಗಿತ ನಿವಾರಣೆ. ಬೆನ್ನು, ಭುಜ ಹಾಗೂ ಕಾಲಿನ ಮಾಂಸಖಂಡಗಳು ಬಲಗೊಳ್ಳುತ್ತವೆ. ಹೃದಯದ ಭಾಗದ ನರಗಳಲ್ಲಿ ರಕ್ತಸಂಚಾರವು ಸರಾಗ. ಕಾಲುಗಳಿಗೂ ಹೆಚ್ಚಿನ ಸಾಮರ್ಥ್ಯವು ದೊರಕಿದಂತಾಗುತ್ತದೆ. ಕೈಗಳಿಗೆ, ಸೊಂಟಕ್ಕೆ, ಉತ್ತಮ ವ್ಯಾಯಾಮ ಲಭ್ಯ.

ವಜ್ರಾಸನದಲ್ಲಿ ಧ್ಯಾನ

ಹಿರಿಯ ನಾಗರಿಕರು ನಿಯತವಾಗಿ ಧ್ಯಾನದ ಅಭ್ಯಾಸ ಮಾಡಿದಾಗ ದೈಹಿಕ, ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ.

ವಿಧಾನ: ಜಮಖಾನದ ಮೇಲೆ ಎರಡೂ ಕಾಲುಗಳನ್ನು ಹಿಂದಕ್ಕೆ ನಿಧಾನವಾಗಿ ಮಡಚಿ ಕುಳಿತುಕೊಳ್ಳಿ. ಕಾಲಿನ ಹೆಬ್ಬೆರಳು ಒಟ್ಟಿಗಿರಲಿ. ಎಡಗೈ ಮೇಲೆ ಬಲಗೈಯನ್ನು ಇರಿಸಿ ಧ್ಯಾನಮುದ್ರೆ ಮಾಡಿ ಕಣ್ಣು ಮುಚ್ಚಿಕೊಂಡಿರಿ. ಸುಮಾರು 5ರಿಂದ 10 ನಿಮಿಷಗಳ ಕಾಲ ಧ್ಯಾನದ ಸ್ಥಿತಿಯಲ್ಲಿದ್ದು, ಶ್ವಾಸೋಚ್ಛಾ್ವಸವನ್ನು ಗಮನಿಸುತ್ತಿರಿ. ಆಮೇಲೆ ವಿಶ್ರಮಿಸಿ.

ಪ್ರಯೋಜನ: ಮನಸ್ಸಿಗೆ ಆಳ ವಿಶ್ರಾಂತಿ ಮತ್ತು ನೆಮ್ಮದಿ ದೊರಕುತ್ತದೆ. ಮನಸ್ಸು ಪರಿಶುದ್ಧವಾಗುತ್ತದೆ. ಸೆಳೆತ ಇತ್ಯಾದಿ ನಿವಾರಣೆ. ಬೆನ್ನು, ಕೈ-ಕಾಲುಗಳಿಗೆ ಲಘುತ್ವ ಉಂಟಾಗುತ್ತದೆ. ಮೂಲವ್ಯಾಧಿ ನಿವಾರಣೆಗೆ ಸಹಕಾರಿ.

ಸೂಚನೆ: ಆರಂಭದಲ್ಲಿ ವಜ್ರಾಸನದ ಅಭ್ಯಾಸ ನಡೆಸಲು ತುಸು ಕಷ್ಟವಾಗಬಹುದು. ಮಂಡಿನೋವಿನ ಸಮಸ್ಯೆ ಇದ್ದವರು ಮಡಚಿದ ಕಾಲಿನ ಕೆಳಗೆ ಮೆತ್ತಗಿನ ಬಟ್ಟೆ ಯ ತಲೆದಿಂಬು ಇಡಬೇಕು. ತೀವ್ರ ಮಂಡಿನೋವು ಇರುವವರು ಈ ಆಸನದ ಅಭ್ಯಾಸ ನಡೆಸುವುದು ಬೇಡ. ಕುರ್ಚಿಯಲ್ಲಿ ಕುಳಿತು ಸರಳ ಧ್ಯಾನದ ಅಭ್ಯಾಸ ಮಾಡಬಹುದು.

Leave a Reply

Your email address will not be published. Required fields are marked *

Back To Top