ಬೆನ್ನಟ್ಟಿ ಬಂದ ಆಫ್ರಿಕಾ ಆನೆ

ಆನೆ ನೋಡಲು ಬೃಹತ್ತಾಗಿದ್ದರೂ ಅದರ ಮನಸ್ಸು ಮುಗ್ಧವಾದುದು ಎಂಬುದು ಪ್ರಾಣಿಶಾಸ್ತ್ರಜ್ಞರ ಅಭಿಮತ. ಆದರೆ ಆನೆಗೆ ಸಿಟ್ಟು ಬಂದರೆ ಅನಾಹುತ ತಪ್ಪಿದ್ದಲ್ಲ. ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಆನೆಯೊಂದು ಪ್ರವಾಸಿಗರಿದ್ದ ವಾಹನದ ಮೇಲೆ ದಾಳಿ ಮಾಡಲು ಬಂದಿತ್ತು. ಅಗಲವಾದ ಕಿವಿಗಳನ್ನು ಅಲ್ಲಾಡಿಸುತ್ತ, ಜೋರಾಗಿ ಘೀಳಿಡುತ್ತ ವಾಹನದ ಮುಂಭಾಗದಿಂದ ದಾಳಿ ಮಾಡಲು ಆನೆ ಬರುತ್ತಿತ್ತು. ಅದರಿಂದ ಪಾರಾಗಲು ಚಾಲಕ ವಾಹನವನ್ನು ಹಿಮ್ಮುಖವಾಗಿ ಚಲಾಯಿಸುತ್ತಿದ್ದರೆ, ಅದರೊಳಗಿದ್ದ ಪ್ರವಾಸಿಗರು ಭಯದಿಂದ ಆಸನಗಳನ್ನು ಭದ್ರವಾಗಿ ಹಿಡಿದುಕೊಂಡಿದ್ದರು. ಈ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *