ಬೆಂಗಳೂರು : ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗವೇ ಕಾರು ಚಾಲಕನ ಗಮನ ಬೇರೆಡೆ ಸೆಳೆದು ದುಬಾರಿ ಬೆಲೆಯ ಐೆನ್-12ನ್ನು ಕಳ್ಳರು ದೋಚಿದ್ದಾರೆ.
ಯಲಹಂಕ ಕೋಗಿಲು ಮುಖ್ಯರಸ್ತೆಯ ರವೀಶ್ ಪ್ರಭು ಮೊಬೈಲ್ ಕಳೆದುಕೊಂಡವರು. ಜ.12ರ ಮಧ್ಯಾಹ್ನ 12 ಗಂಟೆಯಲ್ಲಿ ಕಾರಿನಲ್ಲಿ ಇನ್‌ಯ್ಾಂಟ್ರಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಟ್ರಾಫಿಕ್ ಜಾಮ್ ಉಂಟಾಗಿ ಕಮಿಷನರ್ ಕಚೇರಿ ಮುಂಭಾಗ ಕಾರು ವೇಗ ತಗ್ಗಿದೆ. ಅದೇ ವೇಳೆ ರಸ್ತೆದಾಟಲು ಬಂದ ಪಾದಚಾರಿ ಕಾರಿನ ಕನ್ನಡಿಗೆ ಡಿಕ್ಕಿ ಹೊಡೆದ ಶಬ್ದ ಕೇಳಿಸಿದೆ. ತಕ್ಷಣ ಕಾರಿನ ಗಾಜು ಇಳಿಸಿದ ರವೀಶ್, ನೋಡುತ್ತಿದ್ದಾಗ ಮತ್ತೊಬ್ಬ ವ್ಯಕ್ತಿ ಕಾರು ಬಡಿದಿದ್ದಾನೆ. ಆಗ ಕಡೆ ಗಮನ ಅರಿಸಿದಾಗ ಇತ್ತ ಕಾರಿನಲ್ಲಿ ಇದ್ದ ಐಪೋನ್ -12 ಕಳವು ಮಾಡಿದ್ದಾರೆ. ಇದು ರವೀಶ್ ಗಮನಕ್ಕೆ ಬಂದಿಲ್ಲ. ಸ್ವಲ್ಪ ಮುಂದೆ ಸಾಗಿ ಮೊಬೈಲ್ ಗಮನಿಸಿಕೊಂಡಿದ್ದಾರೆ. ಸೀಟ್ ಮೇಲಿದ್ದ ಮೊಬೈಲ್ ಕಳವಾಗಿರುವುದು ಗೊತ್ತಾಗಿದೆ. ಈ ಸಂಬಂಧ ರವೀಶ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಕಮಿಷನರ್ ಕಚೇರಿ ಮುಂದೆಯೇ ಸಂಚಾರ ಮತ್ತು ಸಿವಿಲ್ ಪೊಲೀಸ್ ಇರುತ್ತಾರೆ. ಇದ್ದರೂ ಭಯವಿಲ್ಲದೆ ಕಳ್ಳರು ಕಾರು ಚಾಲಕನ ಗಮನ ಬೇರೆಡೆ ಸೆಳೆದು ಮೊಬೈಲ್ ದೋಚಿದ್ದಾರೆ. ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A. P. J. Abdul Kalam ಅವರ ಈ ಟ್ರಿಕ್ಸ್ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್ ಮಾಡ್ದೆ ಅನುಸರಿಸಿ
ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…
ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies
ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…
ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing
Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…