ಬೆಂಗಳೂರಿನ ಮಧು ಫ್ರೆಂಡ್ಸ್ ತಂಡಕ್ಕೆ ಗೆಲುವು

ಸಕಲೇಶಪುರ : ರಾಜ್ಯಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಮಧು ಫ್ರೆಂಡ್ಸ್ ತಂಡ ಜಯ ಸಾಧಿಸಿತು.

ಪಟ್ಟಣದ ಸುಭಾಷ ಮೈದಾನದಲ್ಲಿ ನಡೆದ 3ದಿನಗಳ ಪಂದ್ಯಾವಳಿಯಲ್ಲಿ ಕೊಡಗಿನ ಕಾಳಿಬೆಟ್ಟದ ತಂಡ ರನ್ನರ್ ಆಪ್‌ಗೆ ತೃಪ್ತಿಪಟ್ಟುಕೊಂಡಿತು.

ಅಂತಿಮ ಪಂದ್ಯದಲ್ಲಿ ಮಧು ಫ್ರೆಂಡ್ಸ್ ತಂಡದ ಸೂಡಾನ್ ಮೂಲದ ಆಟಗಾರ ಮೀನು 2 ಗೋಲು ಗಳಿಸಿದರೆ ಕಾಳಿಬೆಟ್ಟು ತಂಡದ ಅಭಿ 1 ಗೋಲು ಹೊಡೆದರು. ವಿಜೇತ ತಂಡಕ್ಕೆ 33,333 ರೂ.ನಗದು ಮತ್ತು ಪಾರಿತೋಷಕ, ರನ್ನರ್ ಅಪ್ ಆದ ಕಾಳಿಬೆಟ್ಟು ತಂಡಕ್ಕೆ 22,222 ನಗರ ಮತ್ತು ಪಾರಿತೋಷಕವನ್ನು ತನ್ನದಾಗಿಸಿಕೊಂಡಿತು. ಪಂದ್ಯಾವಳಿಯಲ್ಲಿ 35ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಎವರ್ ಗ್ರೀನ್ ಪುಟ್‌ಬಾಲ್ ಕ್ಲಬ್‌ನ ಅಧ್ಯಕ್ಷ ಸ್ಟೀವನ್, ಕಾರ್ಯದರ್ಶಿ, ಸಫೀರ್ ಖಾನ್, ಸತ್ಯ, ನಾಗೇಶ್, ಸಂತೋಷ್, ಪ್ರೇಮ್‌ಕುಮಾರ್, ದೀಪಕ್ ಮುಂತಾದವರು ಹಾಜರಿದ್ದರು.