More

    ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು ದರ್ಶನ್ ಅಭಿಮಾನಿಯೇ?

    ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ಅವರ ಅಪ್ಪಟ ಅಭಿಮಾನಿ ವಲಯದಲ್ಲಿ ಗುರುತಿಸಿಕೊಂಡಿದ್ದ ಚಿತ್ರದುರ್ಗದ ರಘು ಆಲಿಯಾಸ್ ರಘು ದರ್ಶನ್‌ನನ್ನು ಕೂಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಇಲ್ಲಿನ ಕೋಳಿಬುರುಜನಹಟ್ಟಿಯ ನಿವಾಸಿ ರಘು ಕಳೆದ ಒಂದೂವರೆ ದಶಕದಿಂದಲೂ ದರ್ಶನ್ ಅಭಿಮಾನಿ. ಟ್ಯಾಕ್ಸಿ ಚಾಲಕ ವೃತ್ತಿಯಲ್ಲಿರುವ ಈತ ರೇಣುಕಾಸ್ವಾಮಿ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕಳುಹಿಸಲು ದರ್ಶನ್ ಅವರು ನೆರವು ಪಡೆದಿದ್ದಾರೆ ಎನ್ನಲಾಗಿದೆ.

    ಕೊಲೆ ಸಂಚಿನ ಕಾರಣಕ್ಕಾಗಿ ಬೆಂಗಳೂರಿಗೆ ಕರೆತಂದಿರುವ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

    13 ವರ್ಷಗಳ ಹಿಂದೆ ತಮಟಕಲ್ಲು ಗ್ರಾಮದ ನಿವಾಸಿ ಎನ್.ಸಹನಾ ಅವರನ್ನು ರಘು ಪ್ರೀತಿಸಿ ವಿವಾಹವಾಗಿದ್ದ. ಅಂದಿನಿಂದಲೂ ದರ್ಶನ್ ಅಭಿಮಾನಿ ಎಂಬುದು ಪತ್ನಿಗೂ ತಿಳಿದಿದೆ.

    ಎಂದಿನಂತೆ ಶನಿವಾರ ಮುಂಜಾನೆ ಮನೆಯಿಂದ ಹೋಗಿದ್ದರು. ಮಧ್ಯಾಹ್ನ ಮೊಬೈಲ್ ಕರೆ ಮಾಡಿದಾಗ ದರ್ಶನ್ ಭೇಟಿಗಾಗಿ ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ್ದರು. ಆದರೆ, ಅಂದು ಸಂಜೆ ಹಾಗೂ ಭಾನುವಾರವೂ ಕರೆ ಮಾಡಿದ್ದ ವೇಳೆ ಬ್ಯುಸಿ ಇರುವುದಾಗಿ ಪತ್ನಿಗೆ ತಿಳಿಸಿದ್ದರು. ಆನಂತರದಿಂದ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನನ್ನ ಪತಿ ಬಂಧನ ಆಗಿರುವ ವಿಚಾರ ಮಾಧ್ಯಮಗಳ ಮೂಲಕ ತಿಳಿದ ನಂತರ ಗಾಬರಿಯಾಯಿತು ಎಂದು ರಘು ಪತ್ನಿ ಸಹನಾ ಆತಂಕ ವ್ಯಕ್ತಪಡಿಸಿದರು.

    ದರ್ಶನ್ ಅವರ ಹೊಸ ಚಿತ್ರ ಬಿಡುಗಡೆಯಾದ ವೇಳೆ ರಘು ಚಿತ್ರಮಂದಿರ ಆವರಣದಲ್ಲಿ ಕಟೌಟ್‌ಗಳು, ಬ್ಯಾನರ್ ಹಾಕುವಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವವಹಿಸುತ್ತಿದ್ದ.

    ಪುತ್ರಿ ಆರ್.ಇಂಚರಾಳ ಮೂರು ವರ್ಷದ ಜನ್ಮದಿನಕ್ಕೆ ಬುಲ್‌ ಬುಲ್ ಸಿನಿಮಾದ ಚಿತ್ರೀಕರಣದ ಸ್ಥಳಕ್ಕೇ ಕರೆದುಕೊಂಡು ಹೋಗಿ ದರ್ಶನ್‌ರಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡು ಬಂದಿದ್ದ ಎಂಬ ಮಾಹಿತಿ ಇದೆ.

    ಕುಟುಂಬ ಸಮೇತ ಒಂದೆರೆಡು ಬಾರಿ ಬೆಂಗಳೂರಿಗೆ ಹೋಗಿ ದರ್ಶನ್ ಅವರನ್ನು ಭೇಟಿಯಾಗಿದ್ದ ರಘು. ನನ್ನ ಪತಿ ಸಾಕಷ್ಟು ಬಾರಿ ಅವರನ್ನು ಭೇಟಿ ಮಾಡಿದ್ದಾರೆ. ಚಿತ್ರದುರ್ಗಕ್ಕೆ ಬಂದಾಗ ಅಥವಾ ಈ ಮಾರ್ಗವಾಗಿ ಬೇರೆಡೆ ಸಂಚರಿಸುವಾಗ ಮಾರ್ಗ ಮಧ್ಯೆ ಭೇಟಿ ಮಾಡುತ್ತಿದ್ದರು ಎಂದು ರಘು ಪತ್ನಿ ಸಹನಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts