ಬೀನ್ಸ್​ಗೂ ಕರೊನಾ ಕರಿಛಾಯೆ

ವಿರೂಪಾಕ್ಷ ಕಣವಿ ಮುಳಗುಂದ

ಲಾಕ್​ಡೌನ್ ಘೊಷಣೆಯಾದ ನಂತರ ಸಮೀಪದ ಹೊಸೂರ ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರು ಬೆಳೆದ ತರಕಾರಿ ಬೆಳೆಗಳು ಹೊಲದಲ್ಲೇ ಕೊಳೆಯಲಾರಂಭಿಸಿವೆ. ಇದರಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

8 ಎಕರೆ ಜಮೀನು ಹೊಂದಿದ ಗ್ರಾಮದ ರೈತ ಇಮಾಮಸಾಬ ಟೆಕ್ಕೇದ ಅವರು 4 ಎಕರೆ ಜಮೀನಿನಲ್ಲಿ ಬೀನ್ಸ್ ಬೆಳೆದಿದ್ದಾರೆ. ಕಳೆದ 20 ದಿನಗಳಿಂದ ಬೀನ್ಸ್ ತರಕಾರಿ ಕಟಾವಿಗೆ ಬಂದಿದೆ. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆ ಲಾಕ್​ಡೌನ್​ನಿಂದ ಮಾರುಕಟ್ಟೆಗೆ ಕಳುಹಿಸಲು ಸಾಧ್ಯವಾಗದೆ ಗಿಡದಲ್ಲೇ ಒಣಗಿ ಅಂದಾಜು 3 ರಿಂದ 4 ಲಕ್ಷ ರೂಪಾಯಿ ನಷ್ಟವಾಗಿದೆ.

ಬೀನ್ಸ್ ಬೆಳೆಯುವುದಕ್ಕಾಗಿ ಪ್ರತಿ ಎಕರೆಗೆ ಬೀಜ, ಗೊಬ್ಬರ, ಜಮೀನಿನ ಉಳುಮೆ ಹಾಗೂ ನಿರ್ವಹಣೆ ಸೇರಿ ಅಂದಾಜು 25 ರಿಂದ 30 ಸಾವಿರವರೆಗೆ ಖರ್ಚು ಮಾಡಿದ್ದು, ಪ್ರತಿ ಎಕರೆಗೆ 50 ಕ್ವಿಂಟಾಲ್​ವರೆಗೆ ಬೆಳೆ ಬೆಳೆದಿದ್ದೇವೆ. ಪ್ರತಿ ವರ್ಷವು ಈ ಸಮಯದಲ್ಲಿ ಬೀನ್ಸ್ ತರಕಾರಿಗೆ ಹುಬ್ಬಳ್ಳಿ, ಬೆಳಗಾವಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತಿತ್ತು. ಆದರೆ, ಈ ವರ್ಷ ಕೊರೊನಾ ವಕ್ಕರಿಸಿ ನಮ್ಮ ಬದುಕು ದುಸ್ತರವಾಗಿದೆ. ಖರ್ಚು ಮಾಡಿದ ಬಂಡವಾಳವೂ ಕೈ ಸೇರದಾಗಿದೆ. ಅಲ್ಲದೆ, ಸೇವಂತಿಗೆ ಹೂ ಕೂಡ ಗಿಡದಲ್ಲೇ ಒಣಗಿದೆ ಎಂದು ತಮ್ಮ ಅಸಾಯಕತೆ ವ್ಯಕ್ತಪಡಿಸಿದರು.

ಹೊಸೂರ ಗ್ರಾಮದಲ್ಲಿ ಸುಮಾರು 250 ಎಕರೆ ಪ್ರದೇಶದಲ್ಲಿ 50ಕ್ಕೂ ಹೆಚ್ಚು ರೈತರು ಬೋರವೆಲ್ ನೀರು ಬಳಸಿಕೊಂಡು ಟೊಮ್ಯಾಟೋ, ಹಿರೇಕಾಯಿ, ಸೌತೆ, ಬೀನ್ಸ್, ಚವಳೆ, ಹಾಗಲಕಾಯಿ ಸೇರಿ ಸೇವಂತಿಗೆ ಹೂವನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ. ಪ್ರತಿ ವರ್ಷ ಬೆಳಗಾವಿ, ಪುಣೆಗೆ ಕಳುಹಿಸುತ್ತಿದ್ದೆವು. ಆದರೆ, ಈಗಿನ ಪರಿಸ್ಥಿತಿಯಲ್ಲಿ ದೂರದ ಬೆಳಗಾವಿ, ಪುಣೆ ನಗರಗಳ ತರಕಾರಿ ಮಾರುಕಟ್ಟೆಗೆ ಸಾಗಿಸುವುದು ಸಾಧ್ಯವಾಗುತ್ತಿಲ್ಲ. ಹತ್ತಿರದ ಗದಗ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಮಾರಾಟವಾಗುತ್ತದೆ. ಇನ್ನೂ ಕೆಲ ವ್ಯಾಪಾರಸ್ಥರು ನಿತ್ಯ ತಮಗೆಷ್ಟು ಬೇಕು ಅಷ್ಟು ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾರೆ.

ರಾಜ್ಯ ಸರ್ಕಾರ ತರಕಾರಿ ಬೆಳೆಯುವ ರೈತರಿಗೆ ದೂರದ ನಗರಗಳಿಗೆ ತರಕಾರಿ ಸಾಗಿಸುವ ವಾಹನ ವ್ಯವಸ್ಥೆ ಮಾಡಬೇಕು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು ಎಂದು ರೈತರು ಆಗ್ರಹಿಸಿದರು.

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…