ಚಿತ್ರದುರ್ಗ: ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ಬಡಾವಣೆ ಸ್ವತ್ತುಗಳಿಗೆ ಇ-ಖಾತಾ ನೀಡಲಾಗುತ್ತದೆ. ಆದರೆ,ಭೂ ಪರಿವರ್ತನೆ ಆ ಗದೆ ಉಪ-ವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ/ಕಟ್ಟಡಗಳು ಮತ್ತು ಭೂ ಪರಿವರ್ತನೆಯಾಗಿದ್ದು,ಆದರೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿರುವ ನಿವೇಶನ/ಕಟ್ಟಡಗಳಿಗೆ ‘ಬಿ’ರಿಜಿಸ್ಟರ್‌ನಲ್ಲಿ ನಮೂದಿಸಿ ಇ-ಖಾ ತಾ ನೀಡಲಾಗುತ್ತಿದ್ದು,ಒಮ್ಮೆ ಒದಗಿಸಿರುವ ಈ ಅವಕಾಶದ ಅವಧಿಯನ್ನು ಮೇ 10ರಿಂದ ಆಗಸ್ಟ್ 10ರವರೆಗೆ ವಿಸ್ತರಿಸಲಾಗಿದೆ.
ಬಿ-ರಿಜಿಸ್ಟರ್‌ನಲ್ಲಿ ದಾಖಲಿಸುವ ಆಸ್ತಿಗಳಿಗೆ 2024-25ನೇ ಸಾಲಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆ ಎರಡರಷ್ಟು ತೆರಿಗೆ ವಿಧಿಸಲಾಗುತ್ತ ದೆ. ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆ ಮಾತ್ರ ವಿಧಿಸಲಾಗುತ್ತದೆ. ಬಿ ರಿಜಿಸ್ಟರ್‌ನಲ್ಲಿ ಸರ್ಕಾರಿ ಜಾಗದಲ್ಲಿರುವ ಸ್ವತ್ತುಗಳು,ಸರ್ಕಾರದ ನಿಗ ಮ,ಮಂಡಳಿಗಳ ಜಾಗಗಳು,ನಗರ ಸ್ಥಳೀಯ ಸಂಸ್ಥೆಗಳ ಜಾಗಗಳನ್ನು ಹೊರತುಪಡಿಸಿ 2024 ಸೆಪ್ಟೆಂಬರ್ 10ರ ಪೂರ್ವದಲ್ಲಿ ನೋಂದಾ ಯಿತ,ಆದರೆ ಭೂ ಪರಿವರ್ತನೆಯಾಗದೇ ನಿವೇಶನ/ಕಟ್ಟಡಗಳಿಗೆ,ಬಿ.ಖಾತೆ ಪಡೆಯಲು ಕೂಡಲೇ ನಗರಸಭೆ,ಪುರಸಭೆ,ಪಪಂ ಕಚೇರಿ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವಂತೆ ಡಿಸಿ ತಿಳಿಸಿದ್ದಾರೆ.
ಬಿ-ಖಾತಾ ಪಡೆಯಲು ಈ ಹಿಂದೆ ನೀಡಿದ್ದ ಅಂತಿಮ ದಿನಾಂಕ:10.05.2025ನ್ನು ವಿಸ್ತರಿಸಿದ್ದು, ಸಾರ್ವಜನಿಕರು ಈ ಅವಕಾಶವನ್ನು ಉಪಯೋಗಿಸಿಕೊಂಡು ಶೀಘ್ರವಾಗಿ ಇ-ಖಾತಾ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
—–
