ಬಿಸಿಸಿಐ ಮಾನ್ಯತೆ ನಿರೀಕ್ಷೆಯಲ್ಲಿ ಅಂಧರ ಕ್ರಿಕೆಟ್

ಬೆಂಗಳೂರು: ನಾಲ್ಕು ವಿಶ್ವಕಪ್ (2 ಟಿ20, 2 ಏಕದಿನ) ಜಯಿಸಿರುವ ಭಾರತ ಅಂಧರ ಕ್ರಿಕೆಟ್ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಮಾನ್ಯತೆ ಸಿಗುವ ವಿಶ್ವಾಸವಿದೆ ಎಂದು ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ (ಸಿಎಬಿಐ) ಮುಖ್ಯಸ್ಥ ಜಿ. ಮಹಾಂತೇಶ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಭಾರತ ಅಂಧರ ತಂಡ ಮತ್ತಷ್ಟು ಸಾಧನೆ ಮಾಡುವ ದೃಷ್ಟಿಯಿಂದ ಸಿಎಬಿಐಗೆ ಬಿಸಿಸಿಐ ಮಾನ್ಯತೆ ಅವಶ್ಯಕತೆ ಇದೆ ಎಂದರು. ಅಂಧರ ಕ್ರಿಕೆಟ್ ಅಭಿವೃದ್ಧಿಗಾಗಿ ದೀರ್ಘಕಾಲದ ಯೋಜನೆ ರೂಪಿಸಲು ಬಿಸಿಸಿಐ ನೆರವು ಬೇಕಾಗಿದೆ. ಇದನ್ನು ಬಿಸಿಸಿಐ ಮುಖ್ಯಸ್ಥರ ಗಮನಕ್ಕೂ ತರಲಾಗಿದೆ. ಅಭ್ಯಾಸ ಮಾಡಲು ಆಟಗಾರರಿಗೆ ಸೂಕ್ತ ಮೈದಾನದ ವ್ಯವಸ್ಥೆ ಇಲ್ಲ. ಸಾರ್ವಜನಿಕ ಮೈದಾನ

ದಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಅಂಧರ ಕ್ರಿಕೆಟ್ ಎದುರಿಸುತ್ತಿರುವ ಸಮಸ್ಯೆಗಳಿಗೆ ಬಿಸಿಸಿಐ ಮಾನ್ಯತೆಯೇ ಪರಿಹಾರ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಪ್ರಕಾಶ್ ಜಯ ರಾಮಯ್ಯ, ಸುನೀಲ್, ಬಸಪ್ಪ, ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ವನಿ ಇದ್ದರು.

ಕೇರಳಕ್ಕೆ ವಲಸೆ, ಪ್ರಕಾಶ್ ಚಿಂತನೆ

ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿರುವ ಚನ್ನಪಟ್ಟಣದ ಪ್ರಕಾಶ್ ಜಯರಾಮಯ್ಯ ಕರ್ನಾಟಕ ಸರ್ಕಾರ ಉದ್ಯೋಗ ಒದಗಿಸಿಕೊಡದಿದ್ದಲ್ಲಿ ಕೇರಳ ರಾಜ್ಯಕ್ಕೆ ವಲಸೆ ಹೋಗುವುದಾಗಿ ತಿಳಿಸಿದ್ದಾರೆ. ಕಳೆದ ವರ್ಷ ಬೆಂಗಳೂರಿನಲ್ಲೇ ಟಿ20 ವಿಶ್ವಕಪ್ ಜಯಿಸಿದ್ದ ವೇಳೆ ರಾಜ್ಯ ಸರ್ಕಾರ ಘೋಷಿಸಿದ್ದ 10 ಲಕ್ಷ ರೂಪಾಯಿ ಬಹುಮಾನ ಮೊತ್ತದ ಬದಲಿಗೆ 7 ಲಕ್ಷ ರೂ. ನೀಡಿ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿತ್ತು. ಸರ್ಕಾರ ಕೊಟ್ಟ ಭರವಸೆ ಇದುವರೆಗೂ ಈಡೇರಿಲ್ಲ. ಸಮರ್ಥನಂ ಟ್ರಸ್ಟ್​ನಲ್ಲಿ ಉದ್ಯೋಗದಲ್ಲಿದ್ದು, ಸಿಗುವ 10 ಸಾವಿರ ರೂಪಾಯಿ ಸಂಬಳದಲ್ಲಿ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ನೆರೆಯ ಕೇರಳ ಸರ್ಕಾರದಲ್ಲಿ ಅಂಧ ಕ್ರಿಕೆಟಿಗರಿಗೆ ಉದ್ಯೋಗ ಭದ್ರತೆ ನೀಡಲಾಗುತ್ತಿದೆ. ಒಂದು ವೇಳೆ ಕರ್ನಾಟಕ ಸರ್ಕಾರ ನೌಕರಿ ನೀಡದಿದ್ದರೆ ಅಲ್ಲಿಗೆ ವಲಸೆ ಹೋಗುತ್ತೇನೆ ಎಂದು ಪ್ರಕಾಶ್ ಜಯರಾಮಯ್ಯ ಹೇಳಿದರು.

ಮಾರ್ಚ್​ನಲ್ಲಿ ಶ್ರೀಲಂಕಾ ವಿರುದ್ಧ ಸರಣಿ

ಭಾರತ ಅಂಧರ ಕ್ರಿಕೆಟ್ ತಂಡ ಮಾರ್ಚ್​ನಲ್ಲಿ ಶ್ರೀಲಂಕಾ ವಿರುದ್ಧ ದ್ವಿಪಕ್ಷೀಯ ಸರಣಿ ಆಡಲಿದೆ. ಬಳಿಕ ಸೆಪ್ಟೆಂಬರ್​ನಲ್ಲಿ ಮತ್ತೊಂದು ತಂಡದೆದುರು ಆಡಲಿದೆ. ಅಕ್ಟೋಬರ್​ನಲ್ಲಿ ತ್ರಿಕೋನ ಸರಣಿಯೊಂದರಲ್ಲೂ ಆಡಲಿದೆ ಎಂದು ಮಹಾಂತೇಶ್ ತಿಳಿಸಿದರ

Leave a Reply

Your email address will not be published. Required fields are marked *