Friday, 16th November 2018  

Vijayavani

Breaking News

ಬಿಷಪ್ ತಲೆದಂಡ ಸನ್ನಿಹಿತ

Thursday, 13.09.2018, 2:05 AM       No Comments

ಕೊಟ್ಟಾಯಂ/ಕೊಚ್ಚಿ: ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದ್ದ ಕೇರಳದ ಕ್ರೖೆಸ್ತ ಸನ್ಯಾಸಿನಿ (ನನ್) ಮೇಲಿನ ಅತ್ಯಾಚಾರ ಪ್ರಕರಣ ಈಗ ರ್ತಾಕ ಅಂತ್ಯ ಕಾಣುವ ಹಂತಕ್ಕೆ ಬಂದಿದೆ.

ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ಪಂಜಾಬ್​ನ ಜಲಂಧರ ಪ್ರಾಂತ್ಯದ (ಡಯೊಸಿಸ್) ಬಿಷಪ್ ಫ್ರಾನ್ಕೊ ಮಲ್ಲಕ್ಕಲ್​ಗೆ ಹುದ್ದೆ ತೊರೆಯುವಂತೆ ಮುಂಬೈನ ಕ್ಯಾಥೊಲಿಕ್ ಧರ್ಮಸಭೆ ಸೂಚಿಸಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಸೆ. 19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೇರಳ ಪೊಲೀಸರು ಸಮನ್ಸ್ ನೀಡಿದ್ದಾರೆ.

ಬಿಷಪ್ ಫ್ರಾನ್ಕೊ ವಿರುದ್ಧ ವ್ಯಾಟಿಕನ್ ಪೋಪ್ ಅವರ ಭಾರತದ ರಾಯಭಾರಿ ಮತ್ತು ಆರ್ಚ್​ಬಿಷಪ್ ಗಿಂಬಾಟಿಸ್ಟಾ ಡಿಕಟ್ರೊ ಅವರಿಗೆ ಕೇರಳದ ಕ್ಯಾಥೋಲಿಕ್ ಮಿಷನರಿ ನನ್ ಲಿಖಿತ ದೂರು ನೀಡಿದ್ದಾರೆ. ಸಿರೋ ಮಲಬಾರ್ ಚರ್ಚ್​ಗಳಿಂದ ನ್ಯಾಯ ಸಿಗದ ಕಾರಣ ಪೋಪ್​ರ ರಾಯಭಾರಿಗೆ ನೇರವಾಗಿ ಪತ್ರ ಬರೆಯಬೇಕಾಯಿತು ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ನನ್​ಗಳ ಬೆಂಬಲ

ಶ್ರೀಮಂತ ಮತ್ತು ಪ್ರಭಾವಿಯಾಗಿರುವ ಬಿಷಪ್ ಫ್ರಾನ್ಕೊ, ಪೊಲೀಸ್ ತನಿಖೆಯ ದಿಕ್ಕುತಪ್ಪಿಸುತ್ತಾರೆ. ಆದ್ದರಿಂದ ಅವರನ್ನು ಬಂಧಿಸಬೇಕು ಎಂದು ನನ್​ಗಳು ಕೊಚ್ಚಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪತ್ರದಲ್ಲಿ ಏನಿದೆ?

ಫ್ರಾನ್ಕೊ ಇನ್ನಿತರ ನನ್​ಗಳ ಮೇಲೂ ಕಣ್ಣಿಟ್ಟಿದ್ದಾರೆ. ಅವರ ದೌರ್ಬಲ್ಯ ತಿಳಿದುಕೊಂಡು ದೈಹಿಕ ಸಂಬಂಧ ಬೆಳೆಸಲು ತಂತ್ರ ರೂಪಿಸುತ್ತಾರೆ. ಅವರಿಂದ ಧರ್ಮಕ್ಕೆ, ಚರ್ಚ್​ಗೆ ಅಪಖ್ಯಾತಿ ಬರುತ್ತಿದೆ. ಕೂಡಲೇ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಮತ್ತು ಹೊಣೆಗಾರಿಕೆಯಿಂದ ಅವರನ್ನು ಬಿಡುಗಡೆ ಮಾಡಬೇಕು ಎಂದು ಏಳು ಪುಟಗಳ ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ. ಬಿಷಪ್ ಕೃತ್ಯ ಬಹಿರಂಗ ಪಡಿಸುವುದಕ್ಕೆ ನಾಚಿಕೆ ಮತ್ತು ಅತೀವ ಭಯವಾಗುತ್ತಿದೆ. ನನ್ನ ಕುಟುಂಬಕ್ಕೆ ಬೆದರಿಕೆ ಇದೆ. ಧಾರ್ವಿುಕ ಹಕ್ಕುಗಳನ್ನು ದಮನ ಮಾಡುತ್ತಾರೆ ಎಂಬ ಭೀತಿ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪೋಪ್ ರಾಯಭಾರಿಗೆ ಬರೆದಿರುವ ಪತ್ರದ ಪ್ರತಿಯನ್ನು ಭಾರತೀಯ ಕ್ಯಾಥೋಲಿಕ್ ಬಿಷಪ್ಸ್ ಕಾನ್ಪರೆನ್ಸ್ ಅಧ್ಯಕ್ಷ, ದೆಹಲಿ ಮೆಟ್ರೋಪಾಲಿಟನ್ ಆರ್ಚ್​ಬಿಷಪ್ ಸಹಿತ 21 ಜನರಿಗೆ ಕಳುಹಿಸಿದ್ದಾರೆ. ಇದಕ್ಕೂ ಮೊದಲು ಈ ವರ್ಷದ ಆರಂಭದಲ್ಲೂ ನನ್ ಇಂಥದ್ದೆ ಪತ್ರವನ್ನು ಚರ್ಚ್​ಗಳ ಉನ್ನತ ಧರ್ಮಗುರುಗಳಿಗೆ ಬರೆದಿದ್ದರು.

ಬಿಷಪ್​ಗೆ ಸಮನ್ಸ್

ಸೆ. 19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೇರಳ ಪೊಲೀಸರು ಬಿಷಪ್ ಫ್ರಾನ್ಕೊಗೆ ಸಮನ್ಸ್ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ಆರು ತಾಸು ಚರ್ಚೆಯ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ. ಸಾಮಾಜಿಕ ಹೋರಾಟಗಾರರು, ಮಹಿಳಾ ಸಂಘಟನೆಗಳಿಂದ ಒತ್ತಡ ಹೆಚ್ಚುತ್ತಿರುವ ಕಾರಣ ಪೊಲೀಸರು ಬಿಷಪ್​ಗೆ ಸಮನ್ಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಕೇರಳ ಪೊಲೀಸರು ಬಿಷಪ್ ಫ್ರಾನ್ಕೊರನ್ನು ಕಳೆದ ತಿಂಗಳ 14ರಂದು ಒಂಬತ್ತು ತಾಸು ಪ್ರಶ್ನಿಸಿದ್ದರು. ಈ ಮಧ್ಯೆ, ತನಿಖೆ ವಾಸ್ತವ ವರದಿ ನೀಡುವಂತೆ ಕೇರಳ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಈ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಈ ಪ್ರಕರಣವನ್ನು ದುಡ್ಡು ಕೊಟ್ಟು ಮುಚ್ಚಿಹಾಕಲು ಬಯಸಿದ್ದ ಬಿಷಪ್, ದೂರು ಹಿಂಪಡೆಯುವುದಾದರೆ -ಠಿ;5 ಕೋಟಿ ನೀಡುವುದಾಗಿ ಆಮಿಷ ಒಡ್ಡಿದ್ದರು.

| ಸಂತ್ರಸ್ತ ನನ್ ಸೋದರ

ನನ್ನ ವಿರುದ್ಧದ ಬಾಲಿಶ ಮತ್ತು ನಿರಾಧಾರ ಆರೋಪ ಮಾಡಲಾಗಿದೆ. ಬ್ಲಾ್ಯಕ್​ವೆುೕಲ್ ಮಾಡುತ್ತಿದ್ದಾರೆ. ಸತ್ಯ ಮೂವರಿಗೆ ಮಾತ್ರ ಗೊತ್ತು, ನನಗೆ, ದೂರುದಾರೆ ಮತ್ತು ದೇವರಿಗೆ.

| ಬಿಷಪ್ ಫ್ರಾನ್ಸೊ ್ಕ ಮಲ್ಲಕ್ಕಲ್

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಷಪ್​ರನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ.

| ಇ.ಪಿ. ಜಯರಾಜನ್, ಕೇರಳದ ಕೈಗಾರಿಕಾ ಮತ್ತು ಕ್ರೀಡಾ ಸಚಿವ

Leave a Reply

Your email address will not be published. Required fields are marked *

Back To Top