ಬಿಳ್ಳೂರಲ್ಲಿ ಕಾಡಾನೆ ಪ್ರತ್ಯಕ್ಷ

ಮೂಡಿಗೆರೆ: ತಾಲೂಕಿನ ಕಡಿದಾಳು ಹಾಗೂ ಬಿಳ್ಳೂರು ಗ್ರಾಮದ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಕಾಡಾನೆಯೊಂದು ಹಾದುಹೋಗಿ ಜನರಲ್ಲಿ ಭಯ ಹುಟ್ಟಿಸಿದೆ. ಬಿಳ್ಳೂರಿನಿಂದ ಕಡಿದಾಳು ಗ್ರಾಮಕ್ಕೆ ಕಾಡಾನೆ ಗಂಭೀರವಾಗಿ ಸಾಗಿದೆ. ಊರೊಳಗೆ ಸಾಕಾನೆ ಬಂದಿದೆ ಎಂದುಕೊಂಡು ಗ್ರಾಮಸ್ಥರು ಆನೆ ವೀಕ್ಷಣೆಯಲ್ಲಿ ತೊಡಗಿದ್ದರು. ಕೆಲವರು ಮೊಬೈಲ್​ನಲ್ಲಿ ರಾಜಗಾಂಭೀರ್ಯವನ್ನು ಸೆರೆ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಆನೆ ಭಯದಿಂದ ಜನರನ್ನು ಅಟ್ಟಿಸಿಕೊಂಡು ಬಂದಾಗ ಕಾಡಾನೆ ಎಂಬುದನ್ನು ತಿಳಿದ ಗ್ರಾಮಸ್ಥರು ಓಡಿ ಬಚಾವಾಗಿದ್ದಾರೆ. ನಂತರ ಕಾಡಾನೆ ಕಡಿದಾಳು ಮತ್ತು ದಾರದಹಳ್ಳಿ ನಡುವೆ ಇರುವ ವೀರೇಶ್ ಎಂಬುವರ ತೋಟದೊಳಗೆ ನುಗ್ಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗ್ರಾಮಸ್ಥರು ಮನೆಯಿಂದ ಹೊರಬಾರದಂತೆ ಸೂಚನೆ ನೀಡಿ ಕಾಡಾನೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *