ಬಿರು ಬಿಸಿಲಿನಲ್ಲೂ ಭರ್ಜರಿ ಪ್ರಚಾರ

blank


ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರು ಮತಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ಭರ್ಜರಿ ಪ್ರಚಾರ ಕಾರ್ಯ ನಡೆಸಿದರು.
ನಗರದ ಆರ್.ಎನ್. ಶೆಟ್ಟಿ, ಜೆಎನ್‌ಎಂಸಿ ಕಾಲೇಜು ಆವರಣದಲ್ಲಿ ಚಾಯ್ ಪೇ ಚರ್ಚಾ ನಡೆಸಿ, ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನದಟ್ಟು ಮಾಡಿದರು.

ಹನುಮಾನ ನಗರ, ಕುವೆಂಪು ನಗರ, ಮಹಾಬಲೇಶ್ವರ ನಗರ-ಸ್ಕೀಮ್ ಸಂಖ್ಯೆ 40, ಟಿವಿ ಸೆಂಟರ್ ಬಾಕ್ಸೈಟ್ ರಸ್ತೆ, ರಾಮತೀರ್ಥ ನಗರ, ಸದಾಶಿವನಗರದಲ್ಲಿ ಬಿಸಿಲಿನಲ್ಲಿಯೂ ರೋಡ್ ಶೋ ನಡೆಸಿ ಪ್ರಚಾರ ನಡೆಸಿದರು. ಬಳಿಕ ಜಾಧವ ನಗರ, ರೈಲು ನಗರ, ವಿಶ್ವೇಶ್ವರಯ್ಯ ನಗರ, ಸಿವಿಲ್ ಹಾಸ್ಪಿಟಲ್ ಕಾಂಪೌಂಡ್, ವಿಶ್ವೇಶ್ವರಯ್ಯ ನಗರ, ಪ್ರಾದೇಶಿಕ ಆಯುಕ್ತರ ಸಂಯುಕ್ತ ಆವರಣ, ಆದರ್ಶ ಕಾಲನಿ, ಕ್ಲಬ್ ರಸ್ತೆ, ಕ್ಲಬ್ ರಸ್ತೆಯ ಕಾಳಿ ಅಮ್ರೈ, ಸಿಟಿ ಪೊಲೀಸ್ ಲೈನ್ ಕಾಳಿ ಅಮ್ರೈ ಪ್ರಚಾರ ಕೈಗೊಂಡಾಗ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು.

ಹಿಂಡಲಗಾ ಗಣಪತಿ ದೇವಸ್ಥಾನಕ್ಕೆ ಭೇಟಿ ದರ್ಶನ ಪಡೆದ ಬಳಿಕ ಹನಮಾನನಗರದಿಂದ ಪ್ರಚಾರ ಆರಂಭಿಸಿದರು. ಈ ವೇಳೆ ಹನುಮಾನ ನಗರದ ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳೊಂದಿಗೆ ನಾಗರಿಕರು ಸಭೆ ನಡೆಸಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಬಳಿಕ ಪಾಂಗುಳ ಗಲ್ಲಿಯ ಜೈನ ಬಸದಿಗೆ ಭೇಟಿ ನೀಡಿದ ಡಾ.ರವಿ ಪಾಟೀಲ್ ಅವರು ಆಚಾರ್ಯ ಮಹೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ವಿನಂತಿಸಿದರು. ಈ ವೇಳೆ ಜೈನ ಸಮಾಜದ ಮುಖ್ಯಸ್ಥ ಸಂಜಯ ಪೋರವಾಲ, ಉತ್ತಮ ಪೋರವಾಲ, ಬಾಬುಲಾಲ ಪೋರವಾಲ, ಜತಿನ್ ಪೋರವಾಲ, ಶೈಲೇಶ್ ಕಾವಲಯಾ, ವಿಜಯ ಭದ್ರಾ, ವಿಕ್ರಮ ಪುರೋಹಿತ ಇತರರಿದ್ದರು.

ಬಸವೇಶ್ವರ ಪ್ರತಿಮೆಗೆ ಪೂಜೆ: ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ಶಿವಬಸವ ನಗರದ ಬಸವೇಶ್ವರ ಭವನದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರು ಬಸವೇಶ್ವರ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಈ ವೇಳೆ ಲಿಂಗಾಯತ ಸಮಾಜದ ಧುರೀಣರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ಗೋವಾವೇಸ್‌ನ (ಬಸವೇಶ್ವರ ವೃತ್ತ) ಬಸವೇಶ್ವರ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಈ ವೇಳೆ ಬಿಜೆಪಿ ಮಹಾನಗರ ಅಧ್ಯಕ್ಷ ಅನಿಲ ಬೆನಕೆ, ಮುರುಘೇಂದ್ರಗೌಡ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಪಕ್ಷದ ಕಾರ್ಯಕರ್ತರು ಇದ್ದರು.

ರಕ್ತದಾನ ಕುರಿತು ಜಾಗೃತಿ: ಮಾನವ ಏಕತಾ ದಿನದ ಅಂಗವಾಗಿ ಸಂತ ನಿರಾಕಾರಿ ಸಂಘದ ವತಿಯಿಂದ ಕ್ಯಾಂಪ್ ಪ್ರದೇಶದ ಸುತಾರಿಯಾ ಗ್ಯಾರೇಜ್ ಬಳಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಭೇಟಿ ನೀಡಿದ ಡಾ.ರವಿ ಪಾಟೀಲ ಅವರು ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಈ ವೇಳೆ ಡಾ. ಪುರುಷೋತ್ತಮ ಅರೋರಾ, ಶಶಿ, ಆನಂದ, ಸುನೀಲ ಇತರರಿದ್ದರು.

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…