ಬಿಯರ್‌ಲಾರಿ ಪಲ್ಟಿ,ಕ್ಲೀನರ್‌ಗೆ ಗಾಯ

cobra beer


ಚಿತ್ರದುರ್ಗ:ಬಿಯರ್ ತುಂಬಿದ್ದ ಲಾರಿ ಪಲ್ಟಿ ಹೊಡೆದ ಘಟನೆ ಹೊಳಲ್ಕೆರೆ ಕಣಿವೆ ಐಟಿಐ ಕಾಲೇಜು ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ. ಹಾಸನದಿಂದ ಕಲಬುರಗಿಗೆ ಬಿಯರ್ ಸಾಗಿಸುತ್ತಿದ್ದ ಲಾರಿಗೆ ಕಾಡು ಪ್ರಾಣಿಯೊಂದು ಹಠಾತ್ತನೆ ಅಡ್ಡ ಬಂದಿದ್ದು,ಅದನ್ನು ಉಳಿಸ ಲೆಂದು ಚಾಲಕ ಲೋಹಿತ್ ಸಡನ್ ಬ್ರೇಕ್ ಹಾಕಿದ್ದರಿಂದಾಗಿ ಅವಘಡವಾಗಿದೆ. ಘಟನೆಯಲ್ಲಿ ಕ್ಲೀನರ್, ಹಾಸನ ಜಿಲ್ಲೆ ಗುಡ್ಡೇನಹಳ್ಳಿ ಚಂದ್ರ ಶೇಖರ್‌ಗೆ ಗಾಯಗಳಾಗಿದ್ದು,ಅಂದಾಜು 14 ಲಕ್ಷ ರೂ.ಮೌಲ್ಯದ ಬಿಯರ್‌ಬಾಟಲಿಗಳು ಒಡೆದು ನಷ್ಟವಾಗಿದೆನ್ನಲಾಗಿದ್ದು,ಅಬಕಾರಿ ಅಧಿ ಕಾರಿಗಳ ಪರಿಶೀಲನೆ ಬಳಿಕ ನಷ್ಟದ ನಿಖರತೆ ಗೊತ್ತಾಗಲಿದೆ. ಹೊಳಲ್ಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…