ಬಿಡಾಡಿ ದನಗಳು ಗೋಶಾಲೆಗೆ; ಮಾಲೀಕರು ದಂಡ ಕಟ್ಟಿ ಬಿಡಿಸಿಕೊಳ್ಳಬಹುದು

ರಾಯಚೂರು: ಕಳೆದ ಮೂರು ತಿಂಗಳಿಂದ ರಾಯಚೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಹಿಡಿದ 500 ಕ್ಕೂ ಅಧಿಕ ಬಿಡಾಡಿ‌ ದನಗಳನ್ನು ತಾಲೂಕಿನ ಅಲ್ಕೂರು ಗ್ರಾಮದ ಗೋಶಾಲೆಗೆ ರವಾನಿಸಲಾಯಿತು.

ರಸ್ತೆಯಲ್ಲಿ ತಿರಗಾಡುತಿದ್ದ ದನಗಳನ್ನು ಪೊಲೀಸ್ ಮತ್ತು ನಗರಸಭೆಯ ಅಧಿಕಾರಿ, ಸಿಬ್ಬಂದಿಯ ಸಹಯೋಗದಲ್ಲಿ ಒಂದಡೆ ಕೂಡಿ ಹಾಕಿದ್ದರು. ಸೋಮವಾರ ರಾತ್ರಿ ಪೊಲೀಸರು, ಸ್ಥಳೀಯ ಸಂಸ್ಥೆ ಸಿಬ್ಬಂದಿ ಲಾರಿಗಳ ಮೂಲಕ ಗೋಶಾಲೆಗೆ ಕರೆದೊಯ್ದರು. ಹಲವು ದಿನಗಳಿಂದ ಬೀದಿಗೆ ಬಿಡದಂತೆ ಎಚ್ಚರಿಕೆ ನೀಡಿದರೂ ಮಾಲಿಕರು ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ರಸ್ತೆ ಸಂಚಾರಕ್ಕೆ ಸಮಸ್ಯೆ ಆಗಿತ್ತು.ರಾಯಚೂರು ನಗರ, ಸಿರವಾರ, ಮಸ್ಕಿಯಲ್ಲಿ ಹಿಡಿದ ಜಾನುವಾರುಗಳನ್ನು ಯರಗೇರಾ ಠಾಣಾ ವ್ಯಾಪ್ತಿಯಲ್ಲಿ ಬರುವ ಅಲ್ಕೂರು ಗೋ ಶಾಲೆಗೆ ಸಾಗಿಸಲಾಗಿದೆ.

ಗೋ ಶಾಲೆಯವರು ಪ್ರತಿಯೊಂದು ದನಗಳಿಗೆ ‌3000‌‌ ರೂ.ದಂಡ ವಿಧಿಸಿ. ಪಾವತಿಸಿದ ಮಾಲಿಕರಿಗೆ ದನಗಳನ್ನು ಬಿಟ್ಟು ಕಳಿಸಲು ಎಸ್ಪಿ ಸೂಚಿಸಿದ್ದಾರೆ.

ದನಗಳನ್ನು ಮರಳಿ ಮಾಲಿಕರು ತಮ್ಮ ತಮ್ಮ ಮನೆಗಳಿಗೆ ಕರದೊಯ್ಯಲು ದಂಡ ಕಟ್ಟುವುದನ್ನು ಕಡ್ಡಾಯಗೊಳಿಸಲಾಗಿದೆ.
ಕಾರ್ಯಾಚರಣೆಯು ಇನ್ನು ಮುಂದೆ ಸಹ ಮುಂದುವರಿಯುತ್ತದೆ ಎಂದು ಎಸ್ಪಿ ಡಾ. ಸಿ. ಬಿ. ವೇದ ಮೂರ್ತಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *