Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಬಿಜೆಪಿ ಸಂಘಟಿತ ಹೋರಾಟ

Tuesday, 13.02.2018, 3:03 AM       No Comments

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು 2019ರ ಲೋಕಸಭಾ ಚುನಾವಣೆ ದೃಷ್ಟಿಯಿಂದಲೂ ಮಹತ್ವ ಎಂಬುದನ್ನು ಗಮನದಲ್ಲಿರಿಸಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸಂಘ ಪರಿವಾರದ ಎಲ್ಲ ಸಂಘಟನೆಗಳೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೋಮವಾರ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಥಣಿಸಂದ್ರದ ರಾಷ್ಟ್ರೆೊತ್ಥಾನ ಪರಿಷತ್ ಶಾಲೆಯಲ್ಲಿ ಆರೆಸ್ಸೆಸ್ ರಾಷ್ಟ್ರೀಯ ಸಹ ಸರಕಾರ್ಯವಾಹ ಹಾಗೂ ಬಿಜೆಪಿ ಜತೆಗೆ ಸಂಪರ್ಕ ವ್ಯಕ್ತಿಯಾಗಿರುವ ಕೃಷ್ಣಗೋಪಾಲ್ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಜತೆಗೆ ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ಶೋಭಾ ಕರಂದ್ಲಾಜೆ, ಎನ್. ರವಿಕುಮಾರ್, ಆರ್. ಅಶೋಕ್ ಸೇರಿ ಅನೇಕರು ಉಪಸ್ಥಿತರಿದ್ದರು. ಎಬಿವಿಪಿ, ವಿಶ್ವ ಹಿಂದು ಪರಿಷತ್, ಭಾರತೀಯ ಮಜ್ದೂರ್ ಸಂಘ, ಬಜರಂಗದಳ, ಭಾರತೀಯ ಕಿಸಾನ್ ಸಂಘ, ಸೇವಾ ಭಾರತಿ, ವನವಾಸಿ ಕಲ್ಯಾಣ ಸೇರಿ 20ಕ್ಕೂ ಹೆಚ್ಚು ಸಂಘಟನೆಗಳ ರಾಜ್ಯಮಟ್ಟದ ಪದಾಧಿಕಾರಿಗಳು ಸಭೆಯಲ್ಲಿದ್ದರು.

ಇತ್ತೀಚಿನ ಬೆಳವಣಿಗೆಗೆ ಸಂತೃಪ್ತಿ: ವಿಧಾನಸಭಾ ಚುನಾವಣೆಗೆ ತಯಾರಾಗುತ್ತಿರುವ ಬಿಜೆಪಿಯಲ್ಲಿ ಸಮನ್ವಯದ ಕೊರತೆ, ಒಳಜಗಳ, ಪತ್ರಿಕೆಗಳಲ್ಲಿ ದಿನಬೆಳಗಾದರೆ ವಿವಾದಗಳನ್ನು 2017ರ ಆಗಸ್ಟ್​ನಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರವಾಸದ ಸಭೆಯಲ್ಲಿ ಆರೆಸ್ಸೆಸ್ ನಾಯಕರು ಪ್ರಸ್ತಾಪಿಸಿದ್ದರು. ಆದರೆ ಈ ಸಭೆಯಲ್ಲಿ ಸಂಪೂರ್ಣ ವಿಭಿನ್ನ ವಾತಾವರಣವಿದ್ದು, ಇತ್ತೀಚಿನ ಬಿಜೆಪಿ ಬೆಳವಣಿಗೆ ಕುರಿತು ಸಂತೃಪ್ತಿ ವ್ಯಕ್ತವಾಗಿದೆ. ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್, ಸಹ ಸಂಘಟನಾ ಕಾರ್ಯದರ್ಶಿಗಳಾದ ಸತೀಶ್, ಬಿ.ಎಲ್. ಸಂತೋಷ್ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಮುಖ ರಾಜ್ಯವಾಗಿರುವ ಕರ್ನಾಟಕದಲ್ಲಿ ಸರ್ಕಾರವಿದ್ದರೆ ಲೋಕಸಭೆ ಚುನಾವಣೆಗೆ ಆನೆ ಬಲ ಬಂದಂತಾಗುತ್ತದೆ. ಈ ಹಿನ್ನಲೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಒಗ್ಗಟ್ಟಿನಿಂದ ಎಲ್ಲರೂ ಸಹಕರಿಸಬೇಕು ಎಂದು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಕ್ಷೇತ್ರಕ್ಕೊಬ್ಬ ಹೊರ ರಾಜ್ಯ ಉಸ್ತುವಾರಿ

ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬಂದು ನೆಲೆಸಿರುವ ವಿವಿಧ ಭಾಷಿಕರನ್ನು ಸೆಳೆಯುವ ತಂತ್ರವನ್ನು ಮತ್ತಷ್ಟು ವಿಸ್ತರಿಸಿರುವ ಬಿಜೆಪಿ, ಕ್ಷೇತ್ರಕ್ಕೊಬ್ಬ ನೆರೆ ರಾಜ್ಯದ ಉಸ್ತುವಾರಿ ನೇಮಿಸಲು ಮುಂದಾಗಿದೆ. ಮಲ್ಲೇಶ್ವರದ ಲ್ಲಿರುವ ಬಡಗನಾಡು ಭವನದಲ್ಲಿ ಈ ಕುರಿತು ಸೋಮವಾರ ವಿಸõತ ಸಭೆ ನಡೆಯಿತು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನೆರೆಯ ತಮಿಳುನಾಡು, ಮಹಾರಾಷ್ಟ್ರ, ಕೇರಳ, ಪುದುಚೆರಿ, ಆಂಧ್ರಪ್ರದೇಶ, ತೆಲಂಗಾಣದ 220 ಪ್ರಮುಖರು ಭಾಗವಹಿಸಿದ್ದರು. 2017ರ ಡಿ.31ಕ್ಕೆ ಅಮಿತ್ ಷಾ ಆಗಮಿಸಿದ್ದಾಗ ಇಂತಹದೇ ಸಭೆ ನಡೆಸಿ, ಜಿಲ್ಲಾವಾರು ಪ್ರಮುಖರನ್ನು ನಿಯೋಜಿಸಲಾಗಿತ್ತು. ಈಗ ಪ್ರಮುಖರು ಕ್ಷೇತ್ರಕ್ಕೊಬ್ಬರನ್ನು ನಿಯುಕ್ತಿ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಅವಶ್ಯಕತೆ ಬಿದ್ದರೆ ಪೂರ್ಣ ಕ್ಷೇತ್ರವನ್ನೂ ಉಸ್ತುವಾರಿಗಳು ನೋಡಿಕೊಳ್ಳಬೇಕಾಗುತ್ತದೆ.

ರಾಜ್ಯದ ಈವರೆಗಿನ ಎಲ್ಲ ಸಿಎಂಗಳು ಮಾಡಿದಷ್ಟು ಸಾಲವನ್ನು ಸಿಎಂ ಸಿದ್ದರಾಮಯ್ಯ ನಾಲ್ಕೇ ವರ್ಷದಲ್ಲಿ ಮಾಡಿ ರಾಜ್ಯದ ಖಜಾನೆ ಲೂಟಿ ಮಾಡಿದ್ದಾರೆ. ಆನಂದ್ ಸಿಂಗ್ ಪಕ್ಕದಲ್ಲಿಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾರೆ. ಇಂತಹ ಬೇಜವಾಬ್ದಾರಿ ಮುಖ್ಯಮಂತ್ರಿಗೆ ನಾಚಿಕೆಯಾಗಬೇಕು.

ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ರಾಹುಲ್ ಮತ್ತೆ ಬನ್ನಿ 10 ಪ್ರಶ್ನೆಗೆ ಉತ್ತರ ತನ್ನಿ!

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಪ್ರವಾಸ ಮಾಡಿದಷ್ಟೂ ಪಕ್ಷಕ್ಕೆ ಜಯ ಸನಿಹವಾಗುತ್ತದೆ ಎಂದು ಲೇವಡಿ ಮಾಡಿರುವ ಬಿಜೆಪಿ, ಮುಂದಿನ ಬಾರಿ ಆಗಮಿಸುವಾಗ 10 ಪ್ರಶ್ನೆಗೆ ಉತ್ತರ ತರುವಂತೆ ಆಗ್ರಹಿಸಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, 25 ಕಾರ್ಯಕರ್ತರ ಹತ್ಯೆ ಸುಳಿವಿಲ್ಲ. ಗೌರಿ ಲಂಕೇಶ್, ಕಲಬುರ್ಗಿ ಹಂತಕರ ಪತ್ತೆಯಾಗಿಲ್ಲ. 3500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಷ್ಠಾವಂತ ಅಧಿಕಾರಿಗಳು ಭಯದಲ್ಲಿದ್ದಾರೆ. ಮುಂದಿನ ಭೇಟಿ ವೇಳೆ ಎಲ್ಲ ಪ್ರಶ್ನೆಗೆ ಉತ್ತರ ತನ್ನಿ ಎಂದರು. ರಾಹುಲ್ ಗಾಂಧಿ ದೇವಸ್ಥಾನ ಭೇಟಿ ಕುರಿತು ಪ್ರತಿಕ್ರಿಯಿಸಿದ ಜಾವಡೇಕರ್, ಕೇವಲ ಗುಜರಾತ್ ಹಾಗೂ ಕರ್ನಾಟಕದ ದೇವಸ್ಥಾನ ಏಕೆ ನೆನಪಾಗುತ್ತದೆ? ಜನ ದಡ್ಡರಲ್ಲ. ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ ಎಂದರು. ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಕೇಂದ್ರದ ಸಹಾಯವಿಲ್ಲದೆ ಎಲ್ಲ ಬ್ಯಾಂಕುಗಳ ಕೃಷಿ ಸಾಲ ಮನ್ನಾ ಮಾಡಲಾಗಿದೆ ಎಂದ ಜಾವಡೇಕರ್, ಬಿಜೆಪಿ ಅಧಿಕಾರಕ್ಕೆ ಬಂದರೆ ಇದೇ ಕ್ರಮ ಅನುಸರಿ ಸುವುದಾಗಿ ಪರೋಕ್ಷವಾಗಿ ತಿಳಿಸಿದರು.

Leave a Reply

Your email address will not be published. Required fields are marked *

Back To Top