More

    ಬಿಜೆಪಿ ಮಹಿಳಾ ಮೋರ್ಚಾ ಕಾರ‌್ಯಕರ್ತೆಯರ ಪ್ರತಿಭಟನೆ

    ಚಿತ್ರದುರ್ಗ: ಉಡುಪಿ ಕಾಲೇಜೊಂದರ ಶೌಚಗೃಹಗಳಲ್ಲಿ ಮೊಬೈಲ್ ಇರಿಸಿ ಚಿತ್ರೀಕರಿಸಿದ್ದಾರೆಂದು,ಮೂವರು ವಿದ್ಯಾರ್ಥಿನಿಯರ ವಿರುದ್ಧ ಕೇಳಿ ಬ ಂದಿರುವ ಆರೋಪ ಕುರಿತಂತೆ ಯಾವುದೇ ಒತ್ತಡಕ್ಕೆ ಒಳಗಾಗದೆ ಪೊಲೀಸರು ತನಿಖೆ ನಡೆಸ ಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ‌್ಯಕರ್ತೆಯರು ಗುರುವಾರ ನಗರದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ಇಂಥ ಹೇಯ ಕೃತ ಎಸಗಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಕೃತ್ಯದ ಹಿಂದೆ ಇರಬಹುದಾದ ದೊಡ್ಡ ಷಡ್ಯಂತ್ರ ವನ್ನು ಬಯಲಿ ಗೆಳೆಯಬೇಕೆಂದು ರಾಜ್ಯಸರ್ಕಾರವನ್ನು ಆಗ್ರಹಿಸಿ ಘೋಷಣೆ ಕೂಗಿದರು. ಉಡುಪಿ ಪ್ರಕರಣದಿಂದಾಗಿ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಿಗೆ ಹೋಗಲು ಹೆದರುವಂತಾಗಿದೆ.

    ಪ್ರಕರಣದ ವಿರುದ್ಧ ದೂರು ನೀಡಲು ಹೋದವರನ್ನು ಪೊಲೀಸರು ನಿಂದಿಸಿದ್ದಾರೆಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
    ಆರೋಪಿತ ಯುವತಿಯರು ವಿಡಿಯೊವನ್ನು ಬೇರೆಯವರೊಂದಿಗೆ ಹಂಚಿಕೊಂಡಿದ್ದಾರೆಂದು ಆರೋಪಿಸಿದ ಪ್ರತಿಭಟನಾನಿರತರು, ಪ್ರಕರಣದ ಹಿಂದೆ ಮತೀಯ ಜಾಲವೊಂದು ಕೆಲಸ ಮಾಡಿದೆ ಎಂದು ಸಂಶಯಿಸಿದರು. ಇಂಥ ದುರ್ಘಟನೆಗಳು ಮರುಕಳಿಸದಂತೆ ಪ್ರತಿ ಜಿಲ್ಲೆಯಲ್ಲೂ ಅರಿವು ಮೂಡಿಸಬೇಕೆಂದು ಆಗ್ರಹಿಸಿದರು.

    ಕುಡಾದ ಮಾಜಿ ಸದಸ್ಯೆ ಎ.ರೇಖಾ,ಎಸ್‌ಸಿ ರಾಜ್ಯಕಾರ‌್ಯಾಕಾರಿಣಿ ಸದಸ್ಯೆ ಭಾರ್ಗವಿದ್ರಾವಿಡ,ಶಾಂತಮ್ಮ,ಜಗದಾಂಬ,ವೀಣಾ,ಶೀಲಾ, ಕಾಂಚನಾ,ಲಕ್ಷ್ಮೀ,ಸಿದ್ದಮ್ಮ,ವನಜಾ,ತಾಹಿರಾಬಾನು, ಮಂಜುಳಾ ಮತ್ತಿತರರು ಪ್ರತಿಭಟನೆಯಲ್ಲಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts