ಕೊಡಗು: ಸೋಮವಾರಪೇಟೆ ಗೌಡಳ್ಳಿ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಎ.ಎಸ್.ನವೀನ್ ಕುಮಾರ್(ಅಜ್ಜಳ್ಳಿ ನವೀನ್), ಉಪಾಧ್ಯಕ್ಷರಾಗಿ ಕೆ.ಡಿ.ವಿಶಾಲಾಕ್ಷಿ ಅವಿರೋಧವಾಗಿ ಆಯ್ಕೆಯಾದರು.
ಹತ್ತು ಸದಸ್ಯ ಬಲದ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 9, ಒಬ್ಬ ಜೆಡಿಎಸ್ ಬೆಂಬಲಿತ ಸದಸ್ಯ ಇದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
ಚುನಾವಣಾಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಜಿ.ನಿರ್ಮಲಾ ಕಾರ್ಯ ನಿರ್ವಹಿಸಿದರು. ಸದಸ್ಯರಾದ ಜಿ.ಜಿ.ಮಲ್ಲಿಕಾ, ಜಿ.ಜಿ.ಗಣೇಶ್, ಜಿ.ಎಸ್.ನಾಗರಾಜು, ಬಿಎಚ್.ಮಂಜುನಾಥ್, ಕೆ.ಎಂ.ರೋಹಿಣಿ, ಕೆ.ಕೆ.ಸುಮಾ, ಪಿಡಿಒ ಎಸ್.ಪಿ.ಲಿಖಿತಾ, ಸ್ಥಳೀಯ ಪ್ರಮುಖರಾದ ಜಿ.ಪಿ.ಸುನಿಲ್, ಎಚ್.ಎಂ.ಜಿತೇಂದ್ರ, ಗಿರೀಶ್ ಮಲ್ಲಪ್ಪ, ವಸಂತ್, ನಾಗರತ್ನ, ವಿನಯ್, ಪೃಥ್ವಿ ಮತ್ತಿತರರು ಇದ್ದರು.