More

  ಬಿಜೆಪಿ ಬಾವುಟ ಹಾರಿಸಿದ ನಡ್ಡಾ 

  ದಾವಣಗೆರೆ: ಬೂತ್ ವಿಜಯ ಅಭಿಯಾನದ ಭಾಗವಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶುಕ್ರವಾರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬಿಜೆಪಿ ಬಾವುಟ ಹಾರಿಸಿದರು.
  ಇಲ್ಲಿನ ವೀರಮದಕರಿನಾಯಕ ವೃತ್ತ ಸಮೀಪ, 52ನೇ ಮತಗಟ್ಟೆ ಅಧ್ಯಕ್ಷ ಎಲ್.ಎರ‌್ರಿಸ್ವಾಮಿ ಮನೆ ಬಳಿ ಶುಕ್ರವಾರ, ಪಕ್ಷದ ಕಾರ್ಯಕರ್ತರು, ಮುಖಂಡರ ಸಮ್ಮುಖದಲ್ಲಿ ಬಾವುಟ ಆರೋಹಣ ಮಾಡಿದರು. ಕಾರ್ಯಕರ್ತರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಹಾಕಿದರು.
  ನಂತರ ಸ್ವಕುಳಸಾಳಿ ಕಲ್ಯಾಣಮಂಟಪದಲ್ಲಿ ಮತಗಟ್ಟೆ ಸದಸ್ಯರೊಂದಿಗೆ ಚುಟುಕು ಸಭೆ ನಡೆಸಿದರು. ಬೂತ್ ಸಮಿತಿ ಬಗ್ಗೆ ಪರಿಶೀಲಿಸಿದರು. ಪೇಜ್ ಪ್ರಮುಖರ ನಿಯುಕ್ತಿ, ಮತಗಟ್ಟೆಗಳಲ್ಲಿ ವಾಟ್ಸಾೃಪ್ ಗ್ರೂಪ್ ರಚನೆ ಕುರಿತು ಚರ್ಚಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮಗಳ ವೀಕ್ಷಣೆ ಕುರಿತಂತೆ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.
  ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ರಾಜ್ಯ ಉಸ್ತುವಾರಿ ಅರುಣಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ಸಂಸದ ಜಿ.ಎಂ.ಸಿದ್ದೇಶ್ವರ, ಎಂಎಲ್ಸಿ ಕೆ.ಎಸ್.ನವೀನ್, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಪಾಲಿಕೆ ಸದಸ್ಯ ರಾಕೇಶ್ ಜಾಧವ್, ಎಲ್.ಡಿ.ಗೋಣೆಪ್ಪ, ಶಾಂತಕುಮಾರ್ ಸೋಗಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts