ಬಿಜೆಪಿ ಪ್ರಾಮಾಣಿಕ ಕಟ್ಟಾಳು ಗುಳೇದ ಇನ್ನಿಲ್ಲ

ಯಾದಗಿರಿ: ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಜನಸಂಘದ ಮೂಲದ ಮಲ್ಲಿಕಾಜರ್ುನ ಗುಳೇದ (50) ಬುಧುವಾರ ಹೃದಯಾಘಾತದಿಂದ ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಪುತ್ರಿ, ಇಬ್ಬರು ಪುತ್ರರು ಸೇರಿ ಅಪಾರ ಬಂಧುಗಳನ್ನು ಅಗಲಿದ್ದು, ಸ್ವಗ್ರಾಮ ತಾಲೂಕಿನ ಯರಗೋಳದಲ್ಲಿ ಜೂ.14ರಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೂಲತಃ ಉಪನ್ಯಾಸಕ ವೃತ್ತಿಯಿಂದ ಬಂದ ಗುಳೇದ್ ಅತ್ಯಂತ ಸೌಮ್ಯವಾದಿಯಾಗಿದ್ದವರು. ಬಿಜೆಪಿಯ ಕಟ್ಟಾಳುವಾಗಿ ದುಡಿದ ವ್ಯಕ್ತಿತ್ವ ಅವರದ್ದು. ಕಳೆದ ಎರಡುವರೆ ದಶಕಗಳಿಂದ ಪಕ್ಷದ ತೆರೆಮರೆಯಲ್ಲೇ ದುಡಿದು ಸಂಘಟನೆಗೆ ಅವಿರತವಾಗಿ ಶ್ರಮಿಸಿದ ಮಲ್ಲಿಕಾಜರ್ುನ ಅವರು ಎಂದಿಗೂ ಅಧಿಕಾರದ ಹಿಂದೆ ಬಿದ್ದವರೇ ಅಲ್ಲ. ಹಿರಿಯರೊಂದಿಗೆ ಹಿರಿಯರಾಗಿ, ಕಿರಿಯರೊಂದಿಗೆ ಬೆರೆತು ಪಕ್ಷದ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಗುಳೇದ್ ಅಗಲಿಕೆಯಿಂದ ಪಕ್ಷ ಅನಾಥವಾಗಿದ್ದಂತೂ ಸುಳ್ಳಲ್ಲ.
ಸದಾ ಹೆಗಲಿಗೊಂದು ಕೈಚೀಲ ನೇತಾಕಿಕೊಂಡು ದಿನ ಬೆಳಗಾದರೆ ಯರಗೋಳದಿಂದ ಬಸ್ ಹತ್ತಿ ನೇರವಾಗಿ ಪಕ್ಷದ ಕಾಯರ್ಾಲಯಕ್ಕೆ ಬಂದು ಠಿಕಾಣಿ ಹೂಡಿದರೆ ಸಾಕು ಮತ್ತೆ ಊರಿಗೆ ತೆರಳುವುದು ರಾತ್ರಿಯಾದ ಮೇಲೆಯೇ. ಬಹುಶಃ ವೈಯಕ್ತಿಕ ಜೀವನಕ್ಕಿಂತಲೂ ಸುಮಾರು 15 ವರ್ಷಗಳ ಕಾಲ ಗುಳೇದ್ ಬಿಜೆಪಿ ಸಂಘಟನೆಗೆ ಶ್ರಮಿಸಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
2008ರ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸಕರ್ಾರ ಅಸ್ತಿತ್ವಕ್ಕೆ ಬಂದು ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿ ಅಧಿಕಾರವೇರಿದ ಸಂದರ್ಭದಲ್ಲಿ ಮಲ್ಲಿಕಾಜರ್ುನ್ ಗುಳೇದ್ ಅಕ್ಷರಶಃ ಮಗುವಿನಂತೆ ಗಳಗಳನೆ ಅಳುವ ಮೂಲಕ ತಮ್ಮ ಆನಂದಭಾಷ್ಟ ಹೊರಹಾಕಿದ್ದು, ಇಲ್ಲಿ ಸ್ಮರಿಸಬಹುದು.

Leave a Reply

Your email address will not be published. Required fields are marked *