ಬಾಗಲಕೋಟೆ: ಕಳೆದ ಆರು ತಿಂಗಳಿ0ದ ಬಾಗಲಕೋಟೆ ಬಿಜೆಪಿಗೆ ಜಿಲ್ಲಾ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಬೇಕು ಎನ್ನುವ ಚರ್ಚೆಗೆ ಗುರುವಾರ ತೆರೆಬಿದ್ದಿದೆ. ನಿರೀಕ್ಷೆಯಂತೆ ಹಾಲಿ ಅಧ್ಯಕ್ಷ ಶಾಂತಗೌಡ ಪಾಟೀಲ ಅವರನ್ನೆ ಅವಿರೋಧವಾಗಿ ಮತ್ತೊಂದು ಅವಽಗೆ ಮುಂದುವರೆಸಲು ಪಕ್ಷ ತೀರ್ಮಾನಿಸಿದೆ ಎಂದು ಜಿಲ್ಲಾ ಬಿಜೆಪಿ ಚುನಾವಣಾಽಕಾರಿ ಲಿಂಗರಾಜ್ ಪಾಟೀಲ ಘೋಷಿಸಿದರು.
ಗುರುವಾರ ನವನಗರದ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ವಿವಿಧ ಮಂಡಳಗಳ ಅಧ್ಯಕ್ಷರು, ಜಿಲ್ಲಾ ಪದಾಽಕಾರಿಗಳು ಹಾಗೂ ಚುನಾವಣಾ ಸಹಪ್ರಭಾರಿಗಳು ಹಾಗೂ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳ ಸಮ್ಮುಖದಲ್ಲಿ ಪಕ್ಷದ ತೀರ್ಮಾನವನ್ನು ಘೋಷಿಸಿದರು. ಇದಕ್ಕೆ ಉಪಸ್ಥಿತ ಇದ್ದ ಪಕ್ಷದ ಮುಖಂಡರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಶಾಂತಗೌಡ ಪಾಟೀಲ ೨೦೨೦ರಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾಗಿದ್ದರು. ಮೂರು ವರ್ಷದ ಅವಽ ಮುಕ್ತಾಯಗೊಂಡ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಒಂದು ವರ್ಷದ ವರೆಗೆ ಮತ್ತೆ ಅವರನ್ನು ಮುಂದುವರೆಸಿದ್ದರು. ಈ ಜನೆವರಿ ತಿಂಗಳಲ್ಲಿ ಹೊಸ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಆರಂಭಗೊAಡು ಅನೇಕ ಸಭೆಗಳು ಸಹ ನಡೆದಿದ್ದವು. ಅಧ್ಯಕ್ಷ ಸ್ಥಾನದಲ್ಲಿ ಮತ್ತೊಂದು ಅವಽಗೆ ಮುಂದುವರೆಯಲು ಪಾಟೀಲ ಕೋರಿದ್ದರು. ಹಾಗೆಯೇ ಇನ್ನೂ ೧೧ ಜನರು ತಮಗೆ ಅವಕಾಶ ಕೊಡಿ ಎಂದು ಅರ್ಜಿ ಸಲ್ಲಿಸಿದ್ದರು.
ಜಿಲ್ಲಾ ಕೋರಕಮೀಟಿ, ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಹಿರಿಯ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿದ್ದರು. ಈ ಸಲ ಸಾಮಾಜಿಕ ನ್ಯಾಯದ ಅಡಿಯಲ್ಲಿ ದಲಿತ, ಹಿಂದುಳಿದ ವರ್ಗ, ಮಹಿಳೆಯರಿಗೆ ಸ್ಥಾನ ಕೊಡಿ ಎನ್ನುವ ಬೇಡಿಕೆಯನ್ನು ಸಹ ಇಟ್ಟಿದ್ದರು. ಆದರೆ, ಪಕ್ಷಕ್ಕೆ ಹೆಚ್ಚಿನ ಸಮಯ ಕೊಡುವ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಹಾಗೂ ಪಕ್ಷ ನಿಷ್ಠತೆ ಎಲ್ಲವನ್ನು ಪರಿಗಣಿಸಿ, ಉಳಿದವರು ಅರ್ಹರು ಇದ್ದರೂ ಸಹ ಮತ್ತೊಂದು ಅವಽಗೆ ಶಾಂತಗೌಡ ಪಾಟೀಲ ಅವರನ್ನೆ ಮುಂದುವರೆಸಲು ಹೆಚ್ಚಿನ ಒಲುವು ವ್ಯಕ್ತವಾಗಿದ್ದರಿಂದ ಅವರನ್ನೇ ಮುಂದುವರೆಸುತ್ತಿರುವುದಾಗಿ ಲಿಂಗರಾಜ್ ಪಾಟೀಲ ತಿಳಿಸಿದರು. ಈ ಬಗ್ಗೆ ಜಿಲ್ಲೆಯ ಎಲ್ಲ ಮುಖಂಡರಿಗೂ ಮಾಹಿತಿ ನೀಡಲಾಗಿದೆ ಎಂದು, ಹೊಸ ಅಧ್ಯಕ್ಷರಿಗೆ ಪಕ್ಷದ ಬಾವುಟ ನೀಡಿ ಸನ್ಮಾನಿಸಿದರು.
ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ರಾಜಶೇಖರ ಶೀಲವಂತ, ಚುನಾವಣಾ ಸಹ ಪ್ರಭಾರಿ ಲಕ್ಷಿ÷್ಮÃನಾರಾಯಣ ಕಾಸಟ್, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಸಿ.ಟಿ.ಉಪಾಧ್ಯ, ಮಲ್ಲಯ್ಯ ಮೂಗನೂರಮಠ ವೇದಿಕೆಯಲ್ಲಿ ಇದ್ದರು.
