More

  ಬಿಜೆಪಿಯಿಂದ ಸಮಾಜದಲ್ಲಿ ಕೋಮುದ್ವೇಷ

  ಚಿಕ್ಕೋಡಿ: ಬಿಜೆಪಿ ಕೋಮು ದ್ವೇಷದ ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಹೊರತು ರಾಜ್ಯದಲ್ಲಿ ಯಾವುದೇ ಅಭಿವದ್ಧಿ ಕೆಲಸ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ
  ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

  ಜೆಡಿಎಸ್ ಪಕ್ಷ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಯ ಅಂಗವಾಗಿ ಶನಿವಾರ ತಾಲೂಕಿನ ಕರೋಶಿ ದರ್ಗಾ ಮತ್ತು ತೋರಣಹಳ್ಳಿಯ ಹನುಮಾನ ಮಂದಿರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜದಲ್ಲಿ ಬಿಜೆಪಿ ಭಯದ ವಾತಾವರಣ ಮೂಡಿಸುತ್ತಿದೆ. ಬಿಜೆಪಿ ನೀತಿಗೆ ರಾಜ್ಯದ ಜನತೆ ಬೇಸತ್ತಿದ್ದು, ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ ಎಂದರು.

  ಕರಾವಳಿಯಲ್ಲಿದ್ದ ಹಿಜಾಬ್ ವಿಷಯವನ್ನು ಇಡೀ ರಾಜ್ಯಕ್ಕೆ ಕೊಂಡೊಯ್ದು ಸಮಾಜದ ನೆಮ್ಮದಿ ಹಾಳು ಮಾಡುವ ಕೆಲಸದಲ್ಲಿ ಬಿಜೆಪಿ ನಿರತವಾಯಿತು ಎಂದು ಆರೋಪಿಸಿದರು. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಕನಿಷ್ಠ 120 ಸ್ಥಾನಗಳಲ್ಲಿ ಗೆಲ್ಲಲಿದೆ. ಉತ್ತರ ಕರ್ನಾಟಕದಲ್ಲಿಯೂ 40 ರಿಂದ 50 ಸ್ಥಾನ ಪಡೆಯಲಿದೆ ಎಂದರು.

  ಬಡತನ ಹೋಗಲಾಡಿಸುವ ಜತೆಗೆ ಬಡ ಜನರಿಗಾಗಿ ವಿಶೇಷ ಯೋಜನೆ ರೂಪಿಸುತ್ತೇವೆ ಎಂದರು. ಕರೋಶಿ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಅವರು ಜೂನ್‌ನಲ್ಲಿ ಕಾಲೇಜು ಮಂಜೂರು ಮಾಡಿಸಲಾಗುವುದು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪರಾವ ಪಾಟೀಲ, ಕಾಡಗೌಡ ಪಾಟೀಲ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts