ಬಿಜೆಪಿಯಿಂದ ಸಂಭ್ರಮಾಚರಣೆ

ಹಾವೇರಿ: ನರೇಂದ್ರ ಮೋದಿಯವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ನಗರದ ಜಿಲ್ಲಾ ಬಿಜೆಪಿ ಕಚೇರಿ ಎದುರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿ, ದೇಶದ ಇತಿಹಾಸದಲ್ಲಿ ಬಿಜೆಪಿಗೆ ಇಂದು ಮಹತ್ವದ ದಿನವಾಗಿದೆ. ಬಿಜೆಪಿಯು ಜನ್ಮತಾಳಿದ 39 ವರ್ಷಗಳಲ್ಲಿ ಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಿದೆ. ಇದಕ್ಕೆಲ್ಲ ಕಾರಣೀಕರ್ತರಾದ ನರೇಂದ್ರ ಮೋದಿಯವರು 2ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನಮಗೆಲ್ಲ ಸಂತಸ ತಂದಿದೆ ಎಂದರು.

ಬಿಜೆಪಿ ಮುಖಂಡರಾದ ರಾಜೇಂದ್ರ ಸಜ್ಜನರ, ನಿರಂಜನ ಹೇರೂರ, ಸುರೇಶ ಹೊಸಮನಿ, ಡಾ. ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ರಮೇಶ ಪಾಲನಕರ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ವಿವೇಕಾನಂದ ಇಂಗಳಗಿ, ಪ್ರಶಾಂತ ಗಾಣಗೇರ, ತಿಪ್ಪಣ್ಣ ಚೂರಿ, ಕುಮಾರ ಹೊರಕೇರಿ, ಪರಮೇಶ್ವರಪ್ಪ ಮೇಗಳಮನಿ, ಗಿರೀಶ ಶೆಟ್ಟರ, ಸದಾನಂದ ಸುರಳಿಹಳ್ಳಿ, ಮಹಾಲಿಂಗಸ್ವಾಮಿ ಹಿರೇಮಠ, ಪ್ರಕಾಶ ಉಜನಿಕೊಪ್ಪ, ಮಂಜುಳಾ ಕರಬಸಮ್ಮನವರ, ಸೌಭಾಗ್ಯಮ್ಮ ಹಿರೇಮಠ ಇತರರಿದ್ದರು.

Leave a Reply

Your email address will not be published. Required fields are marked *