25 C
Bangalore
Thursday, November 14, 2019

ಬಿಜೆಪಿಯಿಂದ ವಿಜಯೋತ್ಸವ ಆಚರಣೆ

Latest News

ಕುಂದಗೋಳ ಪಟ್ಟಣ ಪಂಚಾಯಿತಿಯಲ್ಲಿ ಅರಳಿದ ಕಮಲ; ಕಾಂಗ್ರೆಸ್​ಗೆ ಬರೀ ಐದು ಸ್ಥಾನ, ಜೆಡಿಎಸ್​ಗೆ ಒಂದೂ ಇಲ್ಲ

ಹುಬ್ಬಳ್ಳಿ: ಕುಂದಗೋಳ ಪಟ್ಟಣಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದೆ. 19 ವಾರ್ಡ್​ಗಳಿಗೆ ನಡೆದಿದ್ದ ಚುನಾವಣೆಯಲ್ಲಿ 12ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 5 ವಾರ್ಡ್​ಗಳಲ್ಲಿ ಕಾಂಗ್ರೆಸ್​ ಗೆದ್ದಿದ್ದು,...

ಈ ಪುಟ್ಟ ಪಕ್ಷಿಗಳು ಜಗತ್ತಿನ ಅತಿ ಸಣ್ಣ ಹಮ್ಮಿಂಗ್​ ಬರ್ಡ್​ಗಳಾ? ಅಸಲಿ ವಿಷಯ ಬೇರೆನೇ ಇದೆ…ಅಷ್ಟಕ್ಕೂ ಇವು ಏನು ಗೊತ್ತಾ?

ನವದೆಹಲಿ: ಮಾನವನ ಉಗುರಿಗಿಂತಲೂ ಸಣ್ಣ ಗಾತ್ರದ ಎರಡು ಪಕ್ಷಿಗಳ ಫೋಟೋ ಇಂಟರ್​ನೆಟ್​ನಲ್ಲಿ ವೈರಲ್​ ಆಗುತ್ತಿದೆ. ವ್ಯಕ್ತಿಯೋರ್ವನ ಹೆಬ್ಬೆರಳಿನ ಉಗುರಿನ ಮೇಲೆ ಹಾಗೂ ತೋರುಬೆರಳಿನ ಮೇಲೆ ಈ...

ಉಪ ಚುನಾವಣೆಯ 10 ಕ್ಷೇತ್ರಗಳ ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ನಾಳೆ 4 ಕ್ಷೇತ್ರಗಳ ಅಭ್ಯರ್ಥಿ ಹೆಸರು ಬಹಿರಂಗ

ಬೆಂಗಳೂರು: ಶಾಸಕರ ಅನರ್ಹತೆಯಿಂದ ತೆರವಾಗಿರುವ 17 ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್​ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಿಸಿದೆ. ಪಕ್ಷದ ಕಚೇರಿ...

ನ್ಯಾಯಾಲಯದ ತೀರ್ಪಿಗೂ ಬೆಲೆಕೊಡದ ಪತಿ; ಪತ್ನಿಯನ್ನ ಮನೆಗೆ ಸೇರಿಸಲು ನಕಾರ

ಮಂಡ್ಯ: ವಿಚ್ಛೇದನ ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿದ್ದ ಪತಿಗೆ ನ್ಯಾಯಾಲಯ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ತೀರ್ಪು ನೀಡಿ 10 ತಿಂಗಳು ಉರುಳಿದ್ದರೂ, ತನ್ನನ್ನು...

ವಿದ್ಯುಕ್ತವಾಗಿ ಬಿಜೆಪಿ ಸೇರಿದ 16 ಅನರ್ಹ ಶಾಸಕರು: ರೋಷನ್​ಬೇಗ್​ಗೆ ಇನ್ನೂ ಸಿಕ್ಕಿಲ್ಲ ಗ್ರೀನ್​ ಸಿಗ್ನಲ್​

ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ 16 ಅನರ್ಹ ಶಾಸಕರು ಗುರುವಾರ ವಿದ್ಯುಕ್ತವಾಗಿ ಬಿಜೆಪಿ ಸೇರಿದರು. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ...

ಬ್ಯಾಡಗಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಹಳೇಪುರಸಭೆ ಎದುರು ಬಿಜೆಪಿ ಘಟಕದ ವತಿಯಿಂದ ಬುಧವಾರ ವಿಜಯೋತ್ಸವ ಆಚರಿಸಲಾಯಿತು.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, 14 ತಿಂಗಳುಗಳ ಕಾಲ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾಲೂಕಿಗೆ ಅನುದಾನ, ಹೊಸ ಯೋಜನೆ ತರಲಾಗಲಿಲ್ಲ. ಸಾಕಷ್ಟು ಸಮಸ್ಯೆಗಳಿದ್ದರೂ, ಉಸ್ತುವಾರಿ ಸಚಿವರು ಹಾಗೂ ಮಂತ್ರಿಗಳು ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸಲಿಲ್ಲ. ವಿಧಾನಸಭೆಯಲ್ಲಿ ಹಲವು ಸಮಸ್ಯೆಗಳ ಕುರಿತು ಧ್ವನಿ ಎತ್ತಿದರೂ ಫಲಕಾರಿಯಾಗಲಿಲ್ಲ. ಹೊಸ ಸರ್ಕಾರದಲ್ಲಿ ತಾಲೂಕಿಗೆ ಬೃಹತ್ ನೀರಾವರಿ ಯೋಜನೆ ತಂದು, ಎಲ್ಲ ಕೆರೆಗಳನ್ನು ಹೂಳೆತ್ತಲಾಗುವುದು ಎಂದರು.
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರದಲ್ಲೆ ಆರಂಭಿಸಲಾಗುವುದು. ಮಳೆಗಾಲದಲ್ಲಿ ಓಡಾಡಲು ಸಾಕಷ್ಟು ತೊಂದರೆಯಾಗಿರುವುದನ್ನು ಕಂಡಿದ್ದೇನೆ. ರಸ್ತೆ ಅಭಿವೃದ್ಧಿಗೆ ಹಿಂದಿನ ಲೋಕೋಪಯೋಗಿ ಸಚಿವರು ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿರುವುದು ತೀವ್ರ ಸಮಸ್ಯೆಗೆ ಕಾರಣವಾಗಿದೆ. ಬಜೆಟ್​ನಲ್ಲಿ 15 ಕೋಟಿ ರೂ. ಮೀಸಲಿದ್ದು, ಮಂಜೂರಾತಿ ವಿಳಂಬದಿಂದ ಕಾಮಗಾರಿ ತಡವಾಗಿದೆ. ಜಾಗದ ಮಾಲೀಕರಿಗೆ ಪರಿಹಾರ ಸೇರಿದಂತೆ ಕೆಲಸಣ್ಣಪುಟ್ಟ ಸಮಸ್ಯೆಗಳಿಗೆ ಶೀಘ್ರದಲ್ಲೆ ಮುಕ್ತಿ ಸಿಗಲಿದೆ ಎಂದರು.
ಯುವಮುಖಂಡ ಬಾಲಚಂದ್ರಗೌಡ್ರ ಪಾಟೀಲ ಮಾತನಾಡಿ, ಬಿಜೆಪಿ ಅವಧಿಯಲ್ಲಿ ಪಟ್ಟಣದಲ್ಲಿ ಹತ್ತಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಏತ ನೀರಾವರಿ ಸೇರಿ ವಿವಿಧ ಯೋಜನೆಗಳಿಗೆ ಅನುದಾನ ಲಭ್ಯವಾಗಿತ್ತು. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ. ಸ್ಥಳೀಯ ಶಾಸಕರ ನೇತೃತ್ವದಲ್ಲಿ ಹೆಚ್ಚು ಅನುದಾನ ಲಭ್ಯವಾಗುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಬಿಜೆಪಿ ಯುವ ಘಟಕದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಸಜ್ಜನ, ತಾಲೂಕು ಅಧ್ಯಕ್ಷ ಶಂಕ್ರಣ್ಣ ಮಾತನವರ, ಮುಖಂಡರಾದ ವೀರಯ್ಯ ಹಿರೇಮಠ, ಬಸವರಾಜ ಛತ್ರದ, ರಾಮಣ್ಣ ಉಕ್ಕುಂದ, ಮುರಿಗೆಪ್ಪ ಶೆಟ್ಟರ್, ವೀರೇಂದ್ರ ಶೆಟ್ಟರ, ರವೀಂದ್ರ ಪಟ್ಟಣಶೆಟ್ಟಿ, ರಾಮಣ್ಣ ಕೋಡಿಹಳ್ಳಿ, ಕೆ.ಸಿ. ಸೊಪ್ಪಿನಮಠ, ಸುರೇಶ ಆಸಾದಿ, ನಾಗರಾಜ ಹಾವನೂರು, ಜಿ.ಸಿ. ಚಿಲ್ಲೂರುಮಠ, ಜಯಣ್ಣ ಮಲ್ಲಿಗಾರ, ಚಂದ್ರಪ್ಪ ಶೆಟ್ಟರ, ಯಲ್ಲನಗೌಡ್ರ ಕರೇಗೌಡ್ರ, ದ್ಯಾಮನಗೌಡ್ರ ಪೂಜಾರ ಇತರರಿದ್ದರು.
ಹಾನಗಲ್ಲ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ರಾತ್ರಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಮುಖಂಡ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಹದಿನಾಲ್ಕು ತಿಂಗಳ ಹಿಂದೆ ಜನರ ಭಾವನೆಗೆ ವಿರುದ್ಧವಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅಪವಿತ್ರ ಮೈತ್ರಿ ಸರ್ಕಾರ ರಚನೆಗೊಂಡಿತ್ತು. ಇಲ್ಲಿವರೆಗಿನ ಅವರ ದುರಾಡಳಿತ, ರಾಜ್ಯದ ಅಭಿವೃದ್ಧಿಗೆ ಗಮನ ನೀಡದೇ ಇರುವ ಅವರ ನಡುವಳಿಕೆಯಿಂದ ರಾಜ್ಯದ ಜನ, ಮಿತ್ರ ಪಕ್ಷಗಳ ಶಾಸಕರು ಬೇಸತ್ತಿದ್ದರು. ಇದರಿಂದ ಸರ್ಕಾರ ಪತನಗೊಂಡಿದೆ. ಕುಟುಂಬ ರಾಜಕಾರಣ, ಎಲ್ಲ ಇಲಾಖೆಗಳಲ್ಲೂ ಅನಗತ್ಯ ಹಸ್ತಕ್ಷೇಪ, ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಸೇರಿ ಎಲ್ಲ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮತ್ತೆ ಆಡಳಿತಕ್ಕೆ ಬರುತ್ತಿರುವುದು ನಾಡಿನ ಜನತೆಗೆ, ರೈತ ಸಮುದಾಯಕ್ಕೆ ಹರ್ಷ ತಂದಿದೆ. ಬಿಜೆಪಿ ಸರ್ಕಾರ ರಾಜ್ಯದ ನೀರಾವರಿ, ರೈತಪರ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಿ, ಅನುಷ್ಠಾನಗೊಳಿಸಲಿದೆ ಎಂದರು.
ವಿಜಯೋತ್ಸವದಲ್ಲಿ ಬಿಜೆಪಿ ತಾಲೂಕು ಕಾರ್ಯದರ್ಶಿ ರಾಜು ಗೌಳಿ, ಪುರಸಭೆ ಸದಸ್ಯ ಜಮೀರ್​ಅಹ್ಮದ್ ದರ್ಗಾ, ಬಿ.ಎಸ್. ಕುಲಕರ್ಣಿ, ಸಂತೋಷ ಟೀಕೋಜಿ, ರವಿರಾಜ ಕಲಾಲ, ಗಣೇಶ ಮೂಡ್ಲಿ, ಮಂಜುನಾಥ ಬಸವಂತಕರ, ಸಂತೋಷ ಭಜಂತ್ರಿ, ಕುಮಾರ ಹತ್ತಿಕಾಳ, ಮಾಲತೇಶ ಚಿಕ್ಕಣ್ಣನವರ, ಹನುಮಂತಪ್ಪ ಮಲಗುಂದ, ಶಿವು ಹಳೇಕೋಟಿ, ಕೋಟೆಪ್ಪ ಚಿಕ್ಕಣ್ಣನವರ, ಚಂದ್ರು ಉಗ್ರಣ್ಣನವರ ಎಸ್.ಎಸ್. ಹಾದಿಮನಿ, ಮಾರುತಿ ತಾಂದಳೆ, ಪ್ರಶಾಂತ ಗೊಂದಿ ಇತರರು ಪಾಲ್ಗೊಂಡಿದ್ದರು.

- Advertisement -

Stay connected

278,453FansLike
561FollowersFollow
607,000SubscribersSubscribe

ವಿಡಿಯೋ ನ್ಯೂಸ್

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...