ಬಿಜೆಪಿಯಿಂದ ಜನರ ಭೂಮಿ ಹಕ್ಕು ಕಸಿದುಕೊಳ್ಳುವ ಶಾಸನ

ಶಿವಮೊಗ್ಗ: ಮಲೆನಾಡಿನ ಜನರ ಭೂಮಿ ಹಕ್ಕು ಕಸಿದುಕೊಳ್ಳುವ ಶಾಸನಗಳ ಜಾರಿಗೆ ಕಾರಣವಾದ ಬಿಜೆಪಿಯನ್ನು ಶಿವಮೊಗ್ಗ ಜನತೆ ಲೋಕಸಭೆ ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಬಿ.ಎ.ರಮೇಶ್ ಹೆಗ್ಡೆ ಹೇಳಿದರು.

ಭೂಮಿ ಸಾಗುವಳಿ ಹಕ್ಕು ಕಸಿದುಕೊಳ್ಳುವ ಹಾಗೂ ಒಕ್ಕಲೆಬ್ಬಿಸುವ ಮರಣ ಶಾಸನಗಳನ್ನು ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಜಾರಿಗೊಳಿಸಿತು. ಇದರಿಂದ ಸಾವಿರಾರು ಭೂಮಿ ಸಾಗುವಳಿದಾರರು ನೋಟಿಸ್ ಪಡೆದರು. ಜೈಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ಆಯಿತು ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಸರ್ಕಾರಿ ಭೂಮಿ ಸಂರಕ್ಷಣೆ ಪಡೆ ರಚನೆಯಾಯಿತು. ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿ ಮಾಡಿದರು. ಬಾಲಸುಬ್ರಹ್ಮಣ್ಯ ಸಮಿತಿ ಜಿಲ್ಲೆಯಲ್ಲಿ 73,316 ಎಕರೆ ಭೂಮಿ ಒತ್ತುವರಿ ಆಗಿದೆ ಎಂದು ವರದಿ ನೀಡಿತ್ತು. ಇದೆಲ್ಲದರ ಪರಿಣಾಮ ಅರಣ್ಯವಾಸಿಗಳಿಗೆ ತೊಂದರೆ ಆಗಿತ್ತು ಎಂದು ತಿಳಿಸಿದರು. ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಅರಣ್ಯವಾಸಿಗಳ ಸಂರಕ್ಷಣೆ ಮಾಡುವ ಮಾತನಾಡುತ್ತಾರೆ. ಆದರೆ ಅಧಿಕಾರಾವಧಿಯಲ್ಲಿ ಮಾಡಿದ ಸಮಸ್ಯೆಗಳು ಭೂಮಿ ಸಾಗುವಳಿದಾರರರ ಭವಿಷ್ಯಕ್ಕೆ ತೊಡಕಾಗಿದೆ. ಅರಣ್ಯವಾಸಿಗಳ ಒಕ್ಕಲೆಬ್ಬಿಸುವಲ್ಲಿ ವಿಫಲ ಆಗಿರುವ ಕುರಿತು ಡಿಸಿಗೂ ನೋಟಿಸ್ ನೀಡಿರುವ ಉದಾಹರಣೆಯಿದೆ ಎಂದು ದೂರಿದರು. ಕಾಂಗ್ರೆಸ್ ಪಕ್ಷ ಅಧಿಕಾರದ ಅವಧಿಯಲ್ಲಿ ಭೂಮಿ ಮಂಜೂರಾತಿ ಕುರಿತು ಅನೇಕ ಕ್ರಮಗಳನ್ನು ಕೈಗೊಂಡಿದೆ. ಭೂಮಿ ಸಾಗುವಳಿದಾರರ ಸಂರಕ್ಷಣೆಗೆ ಅಗತ್ಯ ಅವಕಾಶಗಳನ್ನು ಕಲ್ಪಿಸಿದೆ ಎಂದು ತಿಳಿಸಿದರು. ಎನ್​ಎಸ್​ಯುುಐ ಮುಖಂಡ ಕೆ.ಚೇತನ್, ಬಾಲಾಜಿ, ಗಿರೀಶ್, ವಿಜಯ್ಕುಮಾರ್ ಇದ್ದರು.

One Reply to “ಬಿಜೆಪಿಯಿಂದ ಜನರ ಭೂಮಿ ಹಕ್ಕು ಕಸಿದುಕೊಳ್ಳುವ ಶಾಸನ”

Comments are closed.