ಬಿಎಸ್ಪಿ ನಿರ್ಣಾಯಕ ಪಾತ್ರ

ಮಂಡ್ಯ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಅತಂತ್ರ ಫಲಿತಾಂಶ ಸೃಷ್ಟಿಸಲಿದೆ ಎಂದು ಶಾಸಕ ಎನ್.ಮಹೇಶ್ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಘಟಕದಿಂದ ಗುರುವಾರ ಆಯೋಜಿಸಿದ್ದ ‘ಲೋಕಸಭಾ ಕ್ಷೇತ್ರ ಪದಾಧಿಕಾರಿಗಳ ಸಮಾವೇಶ’ದಲ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.

ಎಸ್ಪಿ ಮತ್ತು ಬಹುಜನ ಸಮಾಜ ಪಕ್ಷವು ಮೈತ್ರಿಯಾಗಿ ಲೋಕಸಭೆಯ ಚುನಾವಣೆ ಎದುರಿಸಲಿವೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಸೋಲಿಸಲು ಹಣಿಯಾಗಿವೆ. ರಾಜ್ಯದಲ್ಲಿ ಕನಿಷ್ಠ 3 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದು, ಸಂಸತ್‌ಗೆ ಸದಸ್ಯರನ್ನು ಕಳಿಸಿಕೊಡುವ ಸಂಕಲ್ಪ ಕೈಗೊಂಡು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದರು.

ರಾಜ್ಯ ಸಂಯೋಜಕ ಎಂ.ಎಲ್.ತೋಮರ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಎಸ್ಪಿ ರಾಜ್ಯಾಧ್ಯಕ್ಷ ಹರಿರಾಮ್, ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಅ.ನಾಗೇಂದ್ರ, ಸೋ.ಸಿದ್ದರಾಜು, ವಿಭಾಗೀಯ ಉಸ್ತುವಾರಿ ನರಸಿಂಹಮೂರ್ತಿ, ರಾಜ್ಯ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ನ.ಸುರೇಶ್ ಇತರರಿದ್ದರು.

Leave a Reply

Your email address will not be published. Required fields are marked *