Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಬಾವಿಗೆ ಬಿದ್ದು ಬಾಲಕ ದುರ್ಮರಣ

Wednesday, 11.07.2018, 5:20 AM       No Comments

ನಂಜನಗೂಡು: ತಾಲೂಕಿನ ಗೋಳೂರು ಗ್ರಾಮದಲ್ಲಿ ಜಮೀನಿನಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕ ನೆಲಬಾವಿಗೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.

ಗ್ರಾಮದ ಸುರೇಶ್ ಹಾಗೂ ಜ್ಯೋತಿ ದಂಪತಿ ಪುತ್ರ ಪವನ್(4) ಮೃತ ಬಾಲಕ. ಜಮೀನಿನಲ್ಲಿ ತರಕಾರಿ ಬೆಳೆಯಲು ಸುಮಾರು 30 ಅಡಿ ಆಳದ ಬಾವಿ ಕೊರೆಯಲಾಗಿದೆ. ಮಂಗಳವಾರ ಜಮೀನಿಗೆ ಸುರೇಶ್ ತಮ್ಮ ಮಗನನ್ನು ಕರೆದುಕೊಂಡು ಹೋಗಿದ್ದರು.

ಮಧ್ಯಾಹ್ನ ಊಟಕ್ಕೆಂದು ಪಕ್ಕದ ಜಮೀನಿನಲ್ಲಿದ್ದ ಸಂಬಂಧಿಕರ ಬಳಿ ತಮ್ಮ ಮಗನನ್ನು ಬಿಟ್ಟು ಮನೆಗೆ ಹೋಗಿದ್ದರು. ಈ ವೇಳೆ ಪವನ್ ಆಟವಾಡುತ್ತಾ ಆಯತಪ್ಪಿ ನೆಲಬಾವಿ ನೀರಿಗೆ ಬಿದ್ದಿದ್ದಾನೆ. ಕೂಡಲೇ ಬಾಲಕನ ತಂದೆಗೆ ವಿಷಯ ಮುಟ್ಟಿಸಲಾಯಿತು. ಜಮೀನಿಗೆ ಬಂದು ಬಾವಿಗೆ ಹಾರಿ ಮಗನನ್ನು ರಕ್ಷಿಸಲು ಮುಂದಾದರಾದರೂ ಆ ವೇಳೆಗಾಗಲೇ ಬಾಲಕ ಮೃತಪಟ್ಟಿತ್ತು.

ಸುರೇಶ್ ಹಾಗೂ ಜ್ಯೋತಿ ದಂಪತಿಗೆ 3 ಹೆಣ್ಣು ಮಕ್ಕಳು ಜನಿಸಿದ ನಂತರ ಗಂಡು ಮಗು ಹುಟ್ಟಿತ್ತು. ಈ ದುರ್ಘಟನೆಯಿಂದಾಗಿ ಕುಟುಂಬದ ಸದಸ್ಯರ ಆಕ್ರಂದನ ಮನ ಕಲಕುವಂತಿತ್ತು.

ಅಪಾಯಕಾರಿ ಬಾವಿಗಳು: ಗೋಳೂರು ಗ್ರಾಮ ಕಬಿನಿ ಬಲದಂಡೆ ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ್ದರೂ ವರ್ಷಪೂರ್ತಿ ಸಮರ್ಪಕ ನೀರಿನ ಪೂರೈಕೆಯಿಲ್ಲದಿರುವುದರಿಂದ ರೈತರು ತಮ್ಮ ಜಮೀನಿನಲ್ಲಿ 30 ಅಡಿ ಆಳದವರೆಗೆ ನೆಲಬಾವಿ ತೋಡಿಸಿ ತರಕಾರಿ ಬೆಳೆಯುತ್ತಿದ್ದಾರೆ. ನೀರಿಲ್ಲದೇ ಕೆಲವು ನಿಷ್ಕ್ರಿಯಗೊಂಡಿರುವ ಬಾವಿಗಳ ಸುತ್ತ ಗಿಡಗಂಟಿ ಬೆಳೆದು ಆಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಸಾಕಷ್ಟು ಬಾರಿ ಅನಾಹುತ ಸಂಭವಿಸಿದರೂ ಮುಚ್ಚುವ ಗೋಜಿಗೆ ರೈತರು ಮುಂದಾಗಿಲ್ಲ ಎನ್ನಲಾಗಿದೆ.

Leave a Reply

Your email address will not be published. Required fields are marked *

Back To Top