More

  ಬಾಲ್ಯವಿವಾಹ ತಡೆಯಲು ಕ್ರಮ

  ಕಾರವಾರ: ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜೇಂದ್ರ ಬೇಕಲ್ ಹೇಳಿದರು.

  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬುಧವಾರ ಆಯೋಜಿಸಿದ ನೇರ ಫೋನ್ ಇನ್ ಹಾಗೂ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿರಸಿ, ಮುಂಡಗೋಡ, ಹಳಿಯಾಳ ಭಾಗದಲ್ಲಿ ಹೆಚ್ಚಿನ ಬಾಲ್ಯ ವಿವಾಹ ಪ್ರಕರಣಗಳು ಕಂಡು ಬರುತ್ತಿವೆ. ಈ ಸಂಬಂಧ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

  30 ಕ್ಕೂ ಅಧಿಕ ಕರೆಗಳು: ವಾರ್ತಾ ಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 30 ಕ್ಕೂ ಅಧಿಕ ಕರೆಗಳು ಬಂದವು. ರಾಜೇಂದ್ರ ಬೇಕಲ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿರೂಪಾಕ್ಷಪ್ಪ ಪಾಟೀಲ್, ಲಕ್ಷ್ಮೀದೇವಿ ಮಾಹಿತಿ ಹಾಗೂ ಉತ್ತರ ನೀಡಿದರು. ಅಂಗನವಾಡಿ, ಮಹಿಳಾ ಸ್ವೀಕಾರ ಕೇಂದ್ರ, ಮಾತೃಶ್ರೀ, ಫೋಕ್ಸೋ, ಭಿಕ್ಷಾಟನೆ ಮುಂತಾದ ವಿಷಯಗಳು ಚರ್ಚೆಗೆ ಬಂದವು.

  ಭಟ್ಕಳದ ರೇಷ್ಮಾ ನಾಯ್ಕ ಎಂಬುವವರು ಕರೆ ಮಾಡಿ, ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ವಿಧವೆಯರ ಗರಿಷ್ಠ ವಯೋಮಿತಿಯನ್ನು 35 ಎಂದು ನಿಗದಿ ಮಾಡಿರುವುದರಿಂದ ಹಲವರಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

  ಒಂದು ಮೊಟ್ಟೆಯ ಕಥೆ: ಜಿಲ್ಲೆಯ ಅಂಗನವಾಡಿಗಳಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ಮೊಟ್ಟೆ ಪೂರೈಕೆಗೆ ಸರ್ಕಾರದಿಂದ ಪ್ರತಿ ಮೊಟ್ಟೆಗೆ 5 ರೂ.ಬರುತ್ತದೆ. ಆದರೆ, ಜಿಲ್ಲೆಯಲ್ಲಿ ಪ್ರತಿ ಮೊಟ್ಟೆಯ ಬೆಲೆ 6 ರೂ.ಗೆ ತಲುಪಿದ್ದರಿಂದ ಸಮಸ್ಯೆಯಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1.14 ಲಕ್ಷ ರೂ. ಮೊಟ್ಟೆ ತಿನ್ನುವ ಫಲಾನುಭವಿಗಳು ಅಂಗನವಾಡಿಗಳಲ್ಲಿದ್ದಾರೆ. ಇದರಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts