ಬಳ್ಳಾರಿ : ನಾಟಕಗಳನ್ನು ಪ್ರಾಥಮಿಕ ಶಿಕ್ಷಣದಿಂದಲೇ ಕಲಿಸುವಂತ ಕೆಲಸ ಆಗಬೇಕು. ಇದರಿಂದ ವಿವೇಚನಾ ಶಕ್ತಿ ಹೆಚ್ಚಲಿದೆ ಎಂದು ರಾಘವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ರಾಜೇಂದ್ರ ಕಾರಂತ ಹೇಳಿದರು.
ನಗರದ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವರ 144ನೇ ಜಯಂತಿ ಅಂಗವಾಗಿ ನಡೆದ ರಾಘವ ಪ್ರಶಸ್ತಿ ಪ್ರದಾನ ಹಾಗೂ ನಾಟಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಈ ದಿಶೆಯಲ್ಲಿ ಸರ್ಕಾರ ಚಿಂತನೆ ಮಾಡಬೇಕು. ಬಹು ಭಾಷೆ ಮತ್ತು ದೇಶ ವಿದೇಶಗಳಲ್ಲಿ ನಟಿಸಿದ ರಾಘವರ ಪ್ರಶಸ್ತಿ ದೊರೆತಿದ್ದು ಸಂತಸವಾಗಿದೆ. ನಾಟಕ ವೀಕ್ಷಿಸುವ ಹಲವು ಪ್ರೇಕ್ಷಕರು ಇದ್ದಾರೆ. ಆದರೆ, ರಾಜ್ಯದಲ್ಲಿ ರಂಗಭೂಮಿ ಹಾಗೂ ರಂಗ ಮಂದಿರಗಳ ಕೊರತೆಯಿದೆ. ಬೆಂಗಳೂರಿನಲ್ಲಿ ಕೇವಲ ಮೂರು ರಂಗಮಂದಿರಗಳಿವೆ ಎಂದು ಬೇಸರ ವ್ಯಕ್ತಪಡಿಸಿದರು. ನಾಟಕ ಕಲಿಯಲು ಹೋದರೆ ಮಕ್ಕಳು ಹೋದರೆ ಹಾಳಾಗುತ್ತಾರೆ ಎಂಬ ಭಾವನೆ ಪೋಷಕರಲ್ಲಿದೆ. ಮೊದಲು ಆ ಭಾವನೆ ದೂರವಾಗಬೇಕು ಎಂದು ಹೇಳಿದರು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಕೆ.ಚೆನ್ನಪ್ಪ ಮಾತನಾಡಿ, 2008 ರಿಂದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಪ್ರತಿವರ್ಷ ಕನ್ನಡ ಮತ್ತು ತೆಲುಗು ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಪ್ರಶ್ತಸ್ತಿ ಜತೆಗೆ 21 ಸಾವಿರ ನಗದು ಮತ್ತು ರಾಘವರ ಬೆಳ್ಳಿ ಪದಕ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ವಿಎಸ್ ಕೆ ವಿವಿ ಕುಲಸಚಿವ ಕೆ.ಎನ್. ರುದ್ರೇಶ್ ಮಾತನಾಡಿ, ವಿಎಸ್ ಕೆ ವಿವಿಯಲ್ಲಿ ನಿರ್ಮಾಣ ಮಾಡುತ್ತಿರುವ ಬಯಲರಂಗ ಮಂದಿರಕ್ಕೆ ಬಳ್ಳಾರಿ ರಾಘವರ ಹೆಸರು ಇಡಲು ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ನ್ಯಾಯಾಧೀಶೆ ಕೆ.ಜಿ.ಶಾಂತಿ ಮಾತನಾಡಿದರು.
ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ರಾಜೇಂದ್ರ ಕಾರಂತರ ನಿರ್ದೇಶನದಲ್ಲಿ ಮರಣ ಮೃದಂಗ ನಾಟಕ ಪ್ರದರ್ಶನಗೊಂಡಿತು.
ಬಾಲ್ಯದಿಂದಲೇ ನಾಟಕಕ್ಕೆ ಒತ್ತು ನೀಡಲಿ
ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?
ಬೆಂಗಳೂರು: ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?
ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…
ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು
ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…