ಬಾಲ್ಯದಿಂದಲೇ ದೇಶಾಭಿಮಾನ ಬೆಳೆಸಿ

ನೆಲಮಂಗಲ: ಬಾಲ್ಯದಿಂದಲೇ ದೇಶಾಭಿಮಾನ ಬೆಳೆಸುವ ಕೆಲಸ ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದು ಸೈನಿಕ ಎಂ.ಎಚ್.ಶಿವಕುಮಾರ್ ಅಭಿಪ್ರಾಯಪಟ್ಟರು.

ತಾಲೂಕಿನ ತೊರೆಮೂಡಲಪಾಳ್ಯ ಪ್ರತಿಕ್ಷಾ ಇಂಟರ್ ನ್ಯಾಷನಲ್ ಸ್ಕೂಲ್​ನಲ್ಲಿ ಭಾನುವಾರ ಆಯೋಜಿಸಿದ್ದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋದರ ಸ್ಮರಣೆ, ಭಗತ್​ಸಿಂಗ್, ರಾಜಗುರು, ಸುಖ್​ದೇವ್ ಅವರ ಬಲಿದಾನ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಸ್ವತಂತ್ರಕ್ಕಾಗಿ ಮಡಿದ ಲಕ್ಷಾಂತರ ಹೋರಾಟಗಾರರ ತ್ಯಾಗ ಬಲಿದಾನ ಸ್ಮರಿಸಬೇಕಿದೆ. ಪಾಲಕರು ಹುಟ್ಟಿನಿಂದಲೇ ಇಂಜಿನಿಯರ್, ವೈದ್ಯರನ್ನಾಗಿ ಮಾಡಬೇಕೆಂಬ ಆಶಯಗಳ ಜತೆಗೆ ದೇಶಕ್ಕಾಗಿ ಕೊಡುಗೆ ನೀಡುವ ಮನೋಭಾವನೆ ಬೆಳೆಸಬೇಕು ಎಂದರು.

ಹಸ್ತಾಕ್ಷರಕ್ಕೆ ಮುಗಿಬಿದ್ದ ಶಾಲಾ ವಿದ್ಯಾರ್ಥಿಗಳು: ಸೈನಿಕ ಎಂ.ಎಚ್.ಶಿವಕುಮಾರ್ ಅವರ ದೇಶಭಕ್ತಿಯ ಮಾತುಗಳಿಗೆ ಭಾವಪರವಶರಾದ ವಿದ್ಯಾರ್ಥಿಗಳು ಭಾಷಣದ ಬಳಿಕ ಸೈನಿಕರಿಂದ ಹಸ್ತಾಕ್ಷರ ಪಡೆಯಲು ಮುಗಿಬಿದ್ದರು.

ಬೆಂಗಳೂರು ವಸ್ತ್ರಭಾರತ ಚಾರಿಟಬಲ್ ಟ್ರಸ್ಟ್​ನಿಂದ ಶಾಲೆಯ ಸುಮಾರು 210 ವಿದ್ಯಾರ್ಥಿಗಳಿಗೆ ಯೋಧರ ಸಮವಸ್ತ್ರ ವೇಷ ತೊಡಿಸಿದ್ದರು. ಸೈನಿಕರ ವೇಷ ತೊಟ್ಟ ವಿದ್ಯಾರ್ಥಿಗಳು ಶಿಕ್ಷಕರ ಜತೆ ಸೈನಿಕ ಶಿವಕುಮಾರ್ ಜತೆ ಭಾವಚಿತ್ರ ತಗೆಸಿಕೊಂಡು ಸಂಭ್ರಮಿಸಿದರು.

ಶಾಲೆ ಕಾರ್ಯದರ್ಶಿ ಶಿವಶಂಕರ್, ಅಧ್ಯಕ್ಷ ಕೃಷ್ಣಮುನಿ, ಆಡಳಿತಾಧಿಕಾರಿ ಮಂಜುಳಾ, ಸಹಶಿಕ್ಷಕರಾದ ಗವಿಗಂಗಪ್ಪ, ಪ್ರದೀಪ್, ಸವಿತಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *