ಬಾಲಕನ ಸ್ಕೇಟಿಂಗ್ ವಿಶ್ವ ದಾಖಲೆಗೆ ಸಜ್ಜು

ಕಾರವಾರ: ಕಾಲಿಗೆ ಸ್ಕೇಟಿಂಗ್ ಗಾಲಿ ಕಟ್ಟಿ ಓಡಾಡುವುದೇ ಕಷ್ಟ . ಅಂಥದ್ದರಲ್ಲಿ ಐದು ವರ್ಷದ ಬಾಲಕನೊಬ್ಬ ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್​ನಲ್ಲಿ ನಿರಂತರ 25 ನಿಮಿಷ ಸುತ್ತುವರಿಯುತ್ತಾನೆ. !!

ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್​ನ ಮೊಹಮದ್ ರಫಿಕ್ ಈ ಸಾಧನೆ ಮಾಡುತ್ತಿದ್ದು, ವಿಶ್ವ ದಾಖಲೆ ಮಾಡಲು ಸಜ್ಜಾಗಿದ್ದಾನೆ.

ಕೈಗಾ ಅಣು ವಿದ್ಯುತ್ ಕೇಂದ್ರೀಯ ವಿದ್ಯಾಲಯದಲ್ಲಿ ಯುಕೆಜಿ ಓದುತ್ತಿರುವ ಈ ಬಾಲಕನಿಗೆ ದಿಲೀಪ ಹಣಬರ ತರಬೇತಿ ನೀಡಿ ಸಜ್ಜುಗೊಳಿಸಿದ್ದಾರೆ. ಕಳೆದ 2 ವರ್ಷದಿಂದ ನಿತ್ಯ ನಿರಂತರ 3 ತಾಸು ತರಬೇತಿ ಪಡೆಯುತ್ತಿದ್ದಾನೆ.

ಏ.28ರಂದು ಬೆಳಗ್ಗೆ 9 ಗಂಟೆಗೆ ವಿಶ್ವ ದಾಖಲೆ ಮಾಡಲು ಸಮಯ ನಿಗದಿಯಾಗಿದೆ. ಯುನೈಟೆಡ್ ಕಿಂಗ್​ಡಮ್ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್, ಪರ್ಫೆಕ್ಟ್ ಬುಕ್ ಆಫ್ ವರ್ಡ್ ರೆಕಾರ್ಡ್, ಇಂಟರ್ ನ್ಯಾಷನಲ್ ಬುಕ್ ಆಫರ್ ರೆಕಾರ್ಡ್, ಹೈರೇಂಜ್ ಬುಕ್ ಆಫ್ ರೆಕಾರ್ಡ್ಸ್, ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಲಿಮ್ಕಾ ಬುಕ್ ಆಫ್ ರೆಕಾರ್ಡ್​ಗಳಲ್ಲಿ ಬಾಲಕನ ಸಾಧನೆ ದಾಖಲಿಸಲು ಪ್ರತಿನಿಧಿಗಳು ಆಗಮಿಸಲಿದ್ದಾರೆ.

ಏನಿದು ಲಿಂಬೊ ಸ್ಪಿನ್ನಿಂಗ್ ಸ್ಕೇಟಿಂಗ್

ಸ್ಕೇಟಿಂಗ್ ಮಾಡುವ ಗಾಲಿಗಳನ್ನು ಕಾಲಿಗೆ ಕಟ್ಟಕೊಂಡು ಎರಡೂ ಕಾಲುಗಳನ್ನು 180 ಡಿಗ್ರಿ ಅಗಲಿಸಿ ಮಧ್ಯೆ ನೆಲದ ಮೇಲೆ ಕೈ ಊರಿಕೊಂಡು ವೃತ್ತಾಕಾರವಾಗಿ ತಿರುಗುವ ಸಾಹಸವನ್ನು ಮೊಹಮದ್ ರಫಿಕ್ ಮಾಡುತ್ತಾನೆ.ಅದೂ ಒಂದೆರಡು ನಿಮಿಷವಲ್ಲ ನಿರಂತರವಾಗಿ 25 ನಿಮಿಷದವರೆಗೆ 1 ಸಾವಿರ ಸುತ್ತು ಹಾಕುತ್ತಾನೆ.

Leave a Reply

Your email address will not be published. Required fields are marked *