ಬೈಲಹೊಂಗಲ: ಪಟ್ಟಣದ ಮಿನಿ ವಿಧಾನಸೌಧದ ಪಕ್ಕದಲ್ಲಿರುವ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ ಭವನದ ಎದುರಿನ ಖುಲ್ಲಾ ಜಾಗದಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪಿಸುವಂತೆ ಒತ್ತಾಯಿಸಿ ಕರ್ನಾಟಕ ಅಂಬೇಡ್ಕರ್ ಯುವ ಸೇನೆ ವತಿಯಿಂದ ತಹಸೀಲ್ದಾರ್ ಹಣಮಂತ ಶಿರಹಟ್ಟಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಸಂಘಟನೆ ಅಧ್ಯಕ್ಷ ಮಂಜು ಚಿಕ್ಕನ್ನವರ, ಉಪಾಧ್ಯಕ್ಷ ಪರಶುರಾಮ ರಾಯಬಾಗ ಮಾತನಾಡಿ, ಜಗಜೀವರಾಮ ಹೆಸರಿನಲ್ಲಿ ಭವನ ನಿರ್ಮಿಸಿ ಅನೇಕ ವರ್ಷಗಳು ಕಳೆದವು. ಅವರು ದೇಶಕ್ಕೆ ನೀಡಿದ ಕೊಡುಗೆಗಳು ಅಪಾರವಾಗಿದ್ದು, ಅವರ ಆದರ್ಶ ಪಾಲಿಸಬೇಕು. ಅವರ ಮೂರ್ತಿ ಸ್ಥಾಪಿಸಿ ಗೌರವ ಸಲ್ಲಿಸಬೇಕೆಂದು ಆಗ್ರಹಿಸಿದರು.
ಶಿವಾನಂದ ಸೋಲಬನ್ನವರ, ಮಂಜು ರಾಯಬಾಗ, ಈರಣ್ಣ ರಾಯಬಾಗ, ಮಂಜು ಅಗಸಿ, ಶಿವಾನಂದ ದಳವಾಯಿ, ಲಕ್ಷ್ಮಣ ಕಳಂಕರ, ವಿಶಾಲ ಸವದತ್ತಿ, ಅಶೋಕ ಸವದತ್ತಿ, ಬಸವರಾಜ ಕಿತ್ತೂರ, ರಾಜೇಶ ತೊರಗಲ್ಲ, ರುದ್ರಪ್ಪ ಮುಂದಿನಮನಿ, ಅಜ್ಜಪ್ಪ ತೊರಗಲ್ಲ ಇತರರು ಇದ್ದರು.