ಬಾಬಾಸಾಹೇಬರ ಶೌರ್ಯ, ತ್ಯಾಗ ಹೆಮ್ಮೆಯ ಪ್ರತೀಕ

ನರಗುಂದ:ನಮ್ಮ ನಾಡನ್ನು ಬ್ರಿಟಿಷರ ದಾಸ್ಯ, ಸಂಕೋಲೆಯಿಂದ ಮುಕ್ತಗೊಳಿಸಲು ಸಾಕಷ್ಟು ಹೋರಾಟ ಮಾಡಿದ ನರಗುಂದದ ಬಾಬಾಸಾಹೇಬ ಭಾವೆ ಅವರ ಶೌರ್ಯ, ತ್ಯಾಗ, ಬಲಿದಾನ ನಮ್ಮೆಲ್ಲರಿಗೂ ಹೆಮ್ಮೆಯ ಪ್ರತೀಕವಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ನರಗುಂದ ಸಂಸ್ಥಾನದ ಅರಸ ಬಾಬಾಸಾಹೇಬ ಭಾವೆ ಅವರ 161ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಬುಧವಾರ ಪಟ್ಟಣದ ಪುರಸಭೆ ಆವರಣದಲ್ಲಿರುವ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಬಾಬಾಸಾಹೇಬ ಭಾವೆಯವರ ಸಂಸ್ಥಾನದಲ್ಲಿ ಸೇನಾಧಿಪತಿ ಆಗಿದ್ದ ವಿಷ್ಣುಪಂಥ ಅವರು ಅಂದಿನ ಕಾಲದ ಬ್ರಿಟಿಷ್ ಅಧಿಕಾರಿ ಮ್ಯಾನ್ಸನ್ ಅವರ ಜತೆಗೆ ಸೆಣಸಾಡಿ ಅವರ ರುಂಡ ಕತ್ತರಿಸಿದರು. ಕತ್ತರಿಸಿದ ರುಂಡವನ್ನು 1858ರಲ್ಲಿ ನರಗುಂದದಲ್ಲಿರುವ ಐತಿಹಾಸಿಕ ಕೆಂಪಗಸಿ ಹೆಬ್ಬಾಗಿಲಿಗೆ ಕಟ್ಟಿದ್ದರ ನೆನಪು ಇಂದಿಗೂ ಅಜರಾ ಮರವಾಗಿದೆ. ತಾಲೂಕಿನ ಹಿರೇ ಕೊಪ್ಪದಲ್ಲಿರುವ ವಿಷ್ಣುಪಂಥರ ಅಠಾರಾ ಕಚೇರಿಯನ್ನು ಸ್ಮರಣೀಯ ತಾಣವನ್ನಾಗಿಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ವಿಷ್ಣುಪಂಥರ ಸ್ಮಾರಕ ನಿರ್ವಣಕ್ಕೆ ರಾಜ್ಯ ಸರ್ಕಾರದಿಂದ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನೂ 50 ಲಕ್ಷ ರೂ.ಗಳ ಅನುದಾನದ ಅಗತ್ಯವಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೊಡನೆ ರ್ಚಚಿಸಿ ಹೆಚ್ಚುವರಿ ಅನುದಾನಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಜಿ.ವಿ. ಹಣ್ಣಿಕೇರಿ, ಅಪ್ಪನಗೌಡ ನಾಯ್ಕರ್, ಪ್ರೀತಿ ಹಿರೇಮಠ, ಉಮಾ ಪಾಳೇಗಾರ, ಅಣ್ಣಪ್ಪ ದೊಡಮನಿ, ಸುರೇಖಾ ಪಾಟೀಲ, ಸಾವಿತ್ರಿ ಅಂಗಡಿ, ಜಮುನಾ ಪಾಟೀಲ, ಅನ್ನಪೂರ್ಣ ಯಲಿಗಾರ, ಪ್ರಶಾಂತ ಜೋಶಿ, ಬಸವರಾಜ ಅಮರಗೋಳ, ಕವಿತಾ ಅರ್ಭಾಣದ, ಮಹೇಶ ಬೆಳದಡಿ, ರಾಚಪ್ಪ ಕೆರೂರ, ಪ್ರಕಾಶ ಹಾದಿಮನಿ, ಪವಾಡೆಪ್ಪ ವಡ್ಡಿಗೇರಿ, ಶ್ರೀಕಾಂತ ನರಗುಂದ, ಸೋಮು ಸೋನಾವನೆ, ರಾಚನಗೌಡ ಪಾಟೀಲ, ಮಾರುತಿ ಅರ್ಭಾಣದ, ಸಂಗಮೇಶ ಬ್ಯಾಳಿ, ರಾಜು ಈಟಿ, ಬಿ.ಎಚ್. ಶೆಲವಡಿ, ಇತರರು ಉಪಸ್ಥಿತರಿದ್ದರು.