Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಬಾದಾಮಿ ರಥೋತ್ಸವ ಇಂದು

Tuesday, 02.01.2018, 3:01 AM       No Comments

ಬಾದಾಮಿ (ಬಾಗಲಕೋಟೆ): ಜಗನ್ಮಾತೆ, ಶಾಖಾಂಬರಿ ಮತ್ತಿತರ ನಾಮಧೇಯಗಳಿಂದ ಜಗತ್ಪ್ರಸಿದ್ಧಳಾಗಿರುವ ಬನಶಂಕರಿ ದೇವಿ ರಥೋತ್ಸವ ಜ.2ರಂದು ನಡೆಯಲಿದೆ. ಉತ್ತರ ಕರ್ನಾಟಕದ ದೊಡ್ಡ ಮನರಂಜನೆ ಜಾತ್ರೆ ಎಂದೇ ಖ್ಯಾತಿಯಾಗಿರುವ ಬನಶಂಕರಿ ಜಾತ್ರೆಯಲ್ಲಿ ಭಕ್ತರು ‘ಬಾದಾಮಿ ಬನಶಂಕರಿ ನಿನ್ನ ಪಾದಕ ಶಂಭೂಕೋ… ಶಂಭೂಕೋ…’ ಎಂದು ಘೊಷಣೆ ಕೂಗುತ್ತ ರಥ ಎಳೆಯುತ್ತಾರೆ.

ರಥೋತ್ಸವಕ್ಕೂ ಮೊದಲೇ ದೇವಿಗೆ ವಿಶೇಷ ಪೂಜೆಗಳು ಆರಂಭವಾಗುತ್ತವೆ. ಮಂತ್ರ ಘೊಷಗಳೊಂದಿಗೆ ಭಕ್ತರು ಪೂಜಿಸಿ, ಜಾತ್ರೆ ದಿನ ಘಟಸ್ಥಾಪನೆ ಮಾಡುವರು. ಅಲ್ಲದೆ, 108 ತರಕಾರಿಗಳ ಪಲ್ಯ ಮಾಡಿ ದೇವಿಗೆ ನೈವೇದ್ಯ ನೀಡಲಾಗುತ್ತದೆ. ಇದನ್ನು ಪಲ್ಯೆ ಹಬ್ಬ ಎನ್ನುತ್ತಾರೆ.

ನವದಂಪತಿಗಳು, ಮಕ್ಕಳಾ ಗದವರು, ಸಂಕಷ್ಟದಲ್ಲಿರುವವರು ದೇವಿ ಹೆಸರಿನಲ್ಲಿ ವಿಶೇಷ ಹರಕೆ ಹೊರುತ್ತಾರೆ. ಹರಕೆ ಈಡೇರಿದರೆ ಜಾತ್ರೆ ದಿನ ತೀರಿಸುತ್ತಾರೆ.

Leave a Reply

Your email address will not be published. Required fields are marked *

Back To Top