ಬಾಂಧವ್ಯ ಬೆಸೆಯುವ ದಸರಾ ಉತ್ಸವ

blank

ಕೆಂಭಾವಿ: ಜಾತಿಗಳ ಮಧ್ಯೆ ಉತ್ತಮ ಬಾಂಧವ್ಯ ಬೆಸೆದು ಧರ‍್ಮಿಕ ಮನೋಭಾವ ಪ್ರತಿಯೊಬ್ಬರಲ್ಲಿ ಬಿತ್ತುವ ಮತ್ತು ಸ್ನೇಹ ಸೌಹರ‍್ದತೆ ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಪಟ್ಟಣದ ದಸರಾ ಉತ್ಸವ ಸಮಿತಿ ಹಮ್ಮಿಕೊಂಡಿರುವ ಕರ‍್ಯಕ್ರಮ ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ ಹೇಳಿದರು.

ಸಮಿತಿಯಿಂದ ಪುರಸಭೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ನಾಲ್ಕನೇ ರ‍್ಷದ ದಸರಾ ಉತ್ಸವ ಸಂಭ್ರಮ ಹಾಗೂ ಸಾಂಸ್ಕೃತಿಕ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಹಬ್ಬ-ಹರಿದಿನಗಳು ಪರಸ್ಪರ ಸಂಬಂಧ ಗಟ್ಟಿಗೊಳಿಸುತ್ತವೆ. ಸತತ ನಾಲ್ಕು ರ‍್ಷಗಳಿಂದ ವಿಶೇಷ ಕರ‍್ಯಕ್ರಮ ಆಯೋಜಿಸುವ ಮೂಲಕ ಶಾಲಾ ಮಕ್ಕಳು, ರೈತರು, ಮಹಿಳೆಯರನ್ನು ಪ್ರೋತ್ಸಾಹಿಸುವುದರ ಜತೆಗೆ ಸಾಧಕರನ್ನು ಗುರುತಿಸುತ್ತಿರುವ ಸಮಿತಿ ಕರ‍್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರೇಮಠದ ಶ್ರೀ ಚನ್ನಬಸವ ಶಿವಾಚರ‍್ಯರು ಸಾನ್ನಿಧ್ಯ, ಸಮಿತಿ ಗೌರವಾಧ್ಯಕ್ಷ ಮುದಿಗೌಡ ಮಾಲಿಪಾಟೀಲ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಲಿಂಗನಗೌಡ ಮಾಲಿಪಾಟೀಲ ಕರ‍್ಯಕ್ರಮ ಉದ್ಘಾಟಿಸಿದರು. ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ, ಪಿಎಲ್‌ಡಿ ಬ್ಯಾಂಕ್ ನರ‍್ದೇಶಕ ವಾಮನರಾವ ದೇಶಪಾಂಡೆ, ಪುರಸಭೆ ಸದಸ್ಯ ರಹೆಮಾನ್ ಪಟೇಲ್ ಯಲಗೋಡ, ಅರುಣೋದಯ ಸೊನ್ನದ, ನಿವೃತ್ತ ಶಿಕ್ಷಕ ಅಬ್ದುಲ್ ರಜಾಕ್, ನೀಲಕಂಠರಾಯಗೌಡ ಪಾಟೀಲ, ರಫೀಕ್ ವಡಕೇರಿ, ಬಿ.ರಾಘವೇಂದ್ರ, ತೋಟಪ್ಪ ಸಾಹು, ಗುರುಮರ‍್ತಿ ಪತ್ತಾರ, ನರಸಿಂಹ ವಡ್ಡೆ ಇತರರಿದ್ದರು. ಬಂದೇನವಾಜ ನಾಲತವಾಡ ನಿರೂಪಣೆ ಮಾಡಿದರು. ಉತ್ಸವ ಸಮಿತಿ ಅಧ್ಯಕ್ಷ ಡಿ.ಸಿ. ಪಾಟೀಲ ಸ್ವಾಗತಿಸಿದರು. ಪರಶುರಾಮ ನಾರಾಯಣಕರ್ ವಂದಿಸಿದರು.

blank

ನಂತರ ನಡೆದ ಹಾಸ್ಯ ಸಂಜೆ ಕರ‍್ಯಕ್ರಮದಲ್ಲಿ ಖ್ಯಾತ ಕಲಾವಿದ ಗುಂಡಣ್ಣ ಡಿಗ್ಗಿ ನೆರೆದಿದ್ದ ಪ್ರೇಕ್ಷಕರನ್ನು ಚಟಾಕಿಗಳ ನಗೆ ಗಡಲಲ್ಲಿ ತೇಲಿಸಿದರು. ಅಡವಿ ಸೋಮಪುರದ ಜಾನಪದ ಕಲಾ ತಂಡದ ಸದಸ್ಯರು ನಡೆಸಿಕೊಟ್ಟ ಜಾನಪದ ನೃತ್ಯ ಮತ್ತು ಸಾಂಸ್ಕೃತಿಕ ಕರ‍್ಯಕ್ರಮ ನೋಡುಗರನ್ನು ಸೆಳೆಯಿತು.
ವಿವಿಧ ಕ್ಷೇತ್ರದ ಸಾಧಕರಾದ ಹಿರಿಯ ಪತ್ರರ‍್ತ ಸಂಜೀವರಾವ ಕುಲರ‍್ಣಿ (ರ‍್ಷದ ವಿಶೇಷ ವ್ಯಕ್ತಿ), ಯಮುನೇಶ ಯಾಳಗಿ, ರಾಜಅಹ್ಮದ್ ಹುಳಬುತ್ತಿ, ಚಂದ್ರನೀಲಾ ಕಟ್ಟಿ, ಬಸಮ್ಮ ಕುಂಬಾರ (ಆರ‍್ಶ ಶಿಕ್ಷಕ ರತ್ನ ಪ್ರಶಸ್ತಿ), ಗಿರೆಪ್ಪ ಮ್ಯಾಗೇರಿ (ಉತ್ತಮ ಕೃಷಿಕ ಪ್ರಶಸ್ತಿ), ಮಾಸಾಬಿ ಮಾಸುಮಸಾಬ ವಡಕೇರಿಗೆ ಸೇವಾ ರ‍್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Share This Article

Night Shift Work : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಾ?ಹಾಗಿದ್ರೆ ಈ ಸುದ್ದಿ ನಿಮಗಾಗಿ..

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕಚೇರಿಗಳಲ್ಲಿ ರಾತ್ರಿ ಪಾಳಿಯಲ್ಲಿ (Night Shift Work) ಕೆಲಸ ಮಾಡುತ್ತಿದ್ದಾರೆ.…

ಈ 5 ಬಿಳಿ ಆಹಾರಗಳಿಂದ ದೂರವಿದ್ರೆ ನೀವು ಜೀವನಪೂರ್ತಿ ಆರೋಗ್ಯವಾಗಿರಬಹುದು! ಉಪಯುಕ್ತ ಮಾಹಿತಿ ಇಲ್ಲಿದೆ… White foods

White Foods : ಇತ್ತೀಚಿನ ದಿನಗಳಲ್ಲಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆರೋಗ್ಯವಾಗಿರಬೇಕಾದರೆ ಆಹಾರದ…

ಪ್ರತಿನಿತ್ಯ 5 ನೆನೆಸಿದ ಗೋಡಂಬಿ ತಿಂದರೆ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ… Soaked Cashews

Soaked Cashews : ಡ್ರೈಫ್ರೂಟ್ಸ್​ ಗೋಡಂಬಿ ಅಂದರೆ ಬಹುತೇಕರಿಗೆ ಇಷ್ಟ. ಇದನ್ನು ಆರೋಗ್ಯ ಕಣಜ ಎಂದೇ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ