17.7 C
Bengaluru
Wednesday, January 22, 2020

ಬಾಂಧವ್ಯ ಬೆಳೆಸುವ ಅನುವಾದ

Latest News

ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಪೊಲೀಸರಿಗೆ ಶರಣಾದ ಶಂಕಿತ ಆರೋಪಿ ಆದಿತ್ಯಾರಾವ್​

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಶಂಕಿತ ಆರೋಪಿ...

ರೆಸಲೂಷನ್​ 2019 ಹೀಗೆಲ್ಲಾ ಆಯ್ತಪ್ಪ: ತೂಕ ಬಿಟ್ಟು ಎಲ್ಲವೂ ಓಕೆ

ಜನವರಿ ಎಂದರೆ ಹಲವರಿಗೆ ಅದು ‘ಸಾಧನೆ’ಯ ಮಾಸ. ಹೋದ ವರ್ಷ ಮಾಡದ ಏನಾದರೊಂದು ಸಾಧನೆ ಈ ವರ್ಷ ಮಾಡಬೇಕು ಎನ್ನುವ ಹಂಬಲ. ಕಳೆದ...

ಅಂಧರಿಗೆ ವರದಾನ ಆ್ಯನಿ

ಅಂಧರಿಗಾಗಿ ಬ್ರೖೆಲ್ ಲಿಪಿ ಇದ್ದರೂ, ಇಡೀ ತರಗತಿಯ ಮಕ್ಕಳಿಗೆ ಒಟ್ಟಿಗೇ ಹೇಳಿಕೊಡುವುದು ಶಿಕ್ಷಕರಿಗೆ ಸವಾಲಿನ ಕೆಲಸವೇ ಸರಿ. ಒಬ್ಬ ವಿದ್ಯಾರ್ಥಿ ಐದು ನಿಮಿಷಗಳಷ್ಟೇ...

ರೈತರಿಗೆ ತಟ್ಟಿದ ಇರಾನ್-ಅಮೆರಿಕ ಬಿಕ್ಕಟ್ಟಿನ ಬಿಸಿ

ಶ್ರೀಕಾಂತ್ ಅಕ್ಕಿ ಬಳ್ಳಾರಿ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದ ಇರಾನ್-ಅಮೆರಿಕ ಬಿಕ್ಕಟ್ಟಿನ ಬಿಸಿ ಈಗ ರಾಜ್ಯದ ಭತ್ತ ಬೆಳೆಗಾರರಿಗೂ...

ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಪಂಕ್ಚರ್​ ಹಾಕುತ್ತಿದ್ದವರ ಮೇಲೆ ಲಾರಿ ಹರಿದು ಮೂವರು ಸಾವು

ಬೀದರ್: ಲಾರಿ ಹರಿದು ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬೀದರ್ ತಾಲೂಕಿನ ರಾಷ್ಟೀಯ ಹೆದ್ದಾರಿ 09ರ ಮಿನಕೇರಾ ಕ್ರಾಸ್ ಬಳಿ ಬುಧವಾರ ನಸುಕಿನ...

ಅಕ್ಕಲಕೋಟ: ಕನ್ನಡದಿಂದ ಮರಾಠಿಗೆ, ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಎರಡು ಭಾಷೆ ಮಧ್ಯೆ ಬಾಂಧವ್ಯ ಬೆಳೆಸುವ ಕಾರ್ಯವನ್ನು `ಅನುವಾದ ಕಮ್ಮಟ’ ಮಾಡುತ್ತಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಹೇಳಿದರು.
ಪಟ್ಟಣದ ಲೋಕಾಪುರೆ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ, ಆದರ್ಶ ಕನ್ನಡ ಬಳಗದ ಸಹಯೋಗದಲ್ಲಿ ಕನ್ನಡದಿಂದ ಮರಾಠಿಗೆ ಸಣ್ಣ ಕಥೆಗಳ ಅನುವಾದ ಕಮ್ಮಟದಲ್ಲಿ ಮಾತನಾಡಿದ ಅವರು, ಕೃತಿಕಾರ ಸೃಷ್ಟಿಕರ್ತನಾದರೆ ಅನುವಾದಕನು ಮರು ಸೃಷ್ಟಿಕರ್ತ. ಮೂರು ವರ್ಷದ ಹಿಂದೆ ಆದರ್ಶ ಕನ್ನಡ ಬಳಗದ ನೇತೃತ್ವದಲ್ಲಿ ಮರಾಠಿಯಿಂದ ಕನ್ನಡಕ್ಕೆ ಅನುವಾದ ನಡೆದಿತ್ತು. ಮತ್ತೆ ಇದೀಗ ಅನುವಾದ ಕಮ್ಮಟ್ಟ ಆಯೋಜಿಸಿದ ಕನ್ನಡ ಬಳಗದ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು.
ಹಿರಿಯ ಅನುವಾದಕ ಚಂದ್ರಕಾಂತ ಪೋಕಳೆ ಮಾತನಾಡಿ, ಭಾರತದಲ್ಲಿ ಹಲವು ವಿಭಿನ್ನ ಭಾಷೆಗಳಿವೆ. ಅದರದ್ದೇ ಸಾಹಿತ್ಯ, ಸಂಸ್ಕೃತಿಗಳಿವೆ ಎಂದರು.
ಅನುವಾದಕಿ ಸುಶೀಲಾ ಅವರು ಮಾತನಾಡಿ, ಕನ್ನಡದ ಸಾಹಿತ್ಯವನ್ನು ಮರಾಠಿ ಭಾಷೆಗೆ ಅನುವಾದಿಸುವ ಮೂಲಕ ಕನ್ನಡ ಭಾಷೆ ಇನ್ನಷ್ಟು ಶ್ರೀಮಂತಗೊಳಿಸುವ ಕಾರ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಡುತ್ತಿದೆ ಎಂದು ಹೇಳಿದರು.
ಕನ್ನಡ ಮರಾಠಿ ಸಾಹಿತ್ಯಿಕ ಸಾಂಸ್ಕೃತಿಕ ಹಿನ್ನಲೆ ಕುರಿತು ಸಾಹಿತಿ ಡಾ.ಬಿ.ಬಿ.ಪೂಜಾರಿ ಉಪನ್ಯಾಸ ನೀಡಿದರು. ಅನುವಾದಕ್ಕೆ ವಸ್ತುವಿನ ಆಯ್ಕೆ ಆಯಾಮಗಳ ಕುರಿತು ಡಾ.ವಿಜಯಾ ತೆಲಂಗ್ ಉಪನ್ಯಾಸ ನೀಡಿದರು.
ಗಿರೀಶ ಜಕಾಪುರೆ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಸಂಗಮೇಶ ಬಾದವಾಡಗಿ, ಆದರ್ಶ ಕನ್ನಡ ಬಳಗದ ಅಧ್ಯಕ್ಷ ಅಧ್ಯಕ್ಷ ಮಲಿಕಾಜಾನ್ ಶೇಖ್, ಅನುವಾದಕರಾದ ಡಾ.ಡಿ.ಎಸ್.ಚೌಗಲೆ, ಡಾ.ಸುಜಾತಾ ಶಾಸ್ತ್ರಿ, ರಾಮಕೃಷ್ಣ ಮರಾಠೆ, ಪ್ರಭಾಕರ ಸಾತಖೇಡ, ವಸುಂಧರಾ ಶರ್ಮಾ, ಚನ್ನವೀರ ಭದ್ರೇಶ್ವರಮಠ, ವಿಶ್ವೇಶ್ವರ ಮೇಟಿ, ಪ್ರಕಾಶ ಪ್ರಧಾನ, ಡಾ.ಗುರುಸಿದ್ಧಯ್ಯ ಸ್ವಾಮಿ, ಉಜ್ವಲಾ ಮಹಿಷಿ, ಕಸ್ತೂರಿ ಕರೋಟಿ, ಪ್ರಕಾಶ ಅತನೂರೆ, ಎಸ್.ಎಂ.ಜಾಧವ್ ಸೇರಿ 50 ಕ್ಕೂ ಹೆಚ್ಚು ಅನುವಾದಕರು ಪಾಲ್ಗೊಂಡಿದ್ದರು. ಆದರ್ಶ ಕನ್ನಡ ಬಳಗದ ಶರಣಪ್ಪ ಫುಲಾರಿ, ಬಸವರಾಜ ಧಾನಶೆಟ್ಟಿ, ಶರಣು ಕೋಳಿ, ಶ್ರೀಶೈಲ ಮೇತ್ರೆ, ಗಣೇಶ ಜಕಾಪುರೆ, ಕಲ್ಮೇಶ ಅಡಳಟ್ಟಿ, ಸ್ವೀಟಿ ಪವಾರ, ವಿದ್ಯಶ್ರೀ ಬಸವನಕೇರಿ ಸೇರಿ ಇತರರಿದ್ದರು. ಕನರ್ಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್.ಸ್ವಾಗತಿಸಿದರು. ವಿದ್ಯಾಧರ ಗುರವ ನಿರೂಪಣೆ ಮಾಡಿದರು. ದಿನೇಶ ಚವ್ಹಾಣ್ ವಂದಿಸಿದರು.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...