ಬಹೂಪಯೋಗಿ ಲೇಸರ್!

| ಡಾ. ಮನೋಹರ್ ಟಿ.

ಲೇಸರ್ ಬಳಕೆಯು ಕಳೆದ 30 ವರ್ಷಗಳಿಂದ ಬಹಳ ಪ್ರಸಿದ್ಧವಾಗಿದೆ. ಇತ್ತೀಚೆಗೆ ಇತರ ಹೊಸ ಲೇಸರ್​ಗಳ ಆಗಮನದೊಂದಿಗೆ ಈ ಕ್ಷೇತ್ರ ಬಹಳಷ್ಟು ಅಭಿವೃದ್ಧಿಯಾಗಿದೆ. ಉದಾ: ಲಾಸಿಕ್​ಗೆ ಆಪ್ಟಿಕಲಿ ಪಂಪ್ಡ್ ಸೆಮಿಕಂಡಕ್ಟರ್ ಲೇಸರ್​ಗಳು (ಒಪಿಎಸ್​ಎಲ್), ಟ್ಯಾಟೂ ಮತ್ತು ಕೂದಲು ತೆಗೆಯಲು ಸೆಮಿಕಂಡಕ್ಟರ್ ಡಯೋಡ್ ಲೇಸರ್​ಗಳು ಮತ್ತು ಇಣ2 ಲೇಸರ್​ಗಳು.

ಇತ್ತೀಚೆಗೆ ಮೂತ್ರಪಿಂಡ ಮತ್ತು ಯುರೆಟೆರಿಕ್ ಸ್ಟೋನ್​ಗಳು, ಪ್ರಾಸ್ಟೇಟ್ ಹಿಗ್ಗುವಿಕೆ, ಮೂತ್ರಚೀಲದ ಕ್ಯಾನ್ಸರ್, ಮೂತ್ರ ವಿಸರ್ಜನ ನಾಳದ ಸಂಕೋಚನ ಮತ್ತು ಮೂತ್ರನಾಳದಲ್ಲಿ ಕೆಲವು ರೀತಿಯ ಅಡಚಣೆ ಇತ್ಯಾದಿ ಮೂತ್ರಕೋಶದ ಕಾಯಿಲೆಗಳಿಗೆ ಲೇಸರ್ ಬಳಕೆ ವ್ಯಾಪಕವಾಗಿದೆ.

ಮೂತ್ರಪಿಂಡದ ಕಲ್ಲಿನ ವಿಘಟನೆಗೆ ಬಳಸಲಾಗುವ ಕನ್ವೆನ್ಷನಲ್ ಎಕ್ಸ್​ಟ್ರಾಕಾರ್ಪೆರಿಯಲ್ ಲಿತೊಟ್ರಿಪ್ಸಿಯನ್ನು (ಇಎಸ್​ಡಬ್ಲ್ಯುಎಲ್) ಹೆಚ್ಚಿನವರು ಲೇಸರ್ ಎಂದು ಪರಿಗಣಿಸುತ್ತಾರೆ. ವಾಸ್ತವವಾಗಿ ಇದು ತಪ್ಪು ಕಲ್ಪನೆ. ಇದಕ್ಕೆ ವಿರುದ್ಧವಾಗಿ ಎಲೆಕ್ಟ್ರೊಮ್ಯಾಗ್ನೆಟಿಕ್/ಎಲೆಕ್ಟ್ರೊಹೈಡ್ರಾಲಿಕ್ ಅಥವಾ ಅಲ್ಟ್ರಾಸೌಂಡ್ ಉತ್ಪಾದಿತ ಶಕ್ತಿ ಅಲೆಗಳನ್ನು ಬಳಸಿ ಕಲ್ಲುಗಳ ಮೇಲೆ ಕೇಂದ್ರೀಕರಿಸಿ, ಅವುಗಳನ್ನು ವಿಘಟಿಸಲಾಗುತ್ತದೆ. ಕಲ್ಲುಗಳನ್ನು ವಿಘಟಿಸಲು ಲೇಸರ್​ಗಳನ್ನು ದೇಹದ ಹೊರಗಿನಿಂದ ಬಳಸಲಾಗುವುದಿಲ್ಲ. ಅದನ್ನು ದೇಹದ ಒಳಗೆ ಮಾತ್ರ ಬಳಸಲಾಗುತ್ತದೆ, ಯುರೆಟೆರೊರೀನೊಸ್ಕೋಪ್​ಗಳ ಮೂಲಕ ವರ್ಗಾಯಿಸಲಾಗುತ್ತದೆ. ಪ್ರಾಸ್ಟೇಟ್​ನ ಗಾತ್ರ ಮತ್ತು ವಯಸ್ಸನ್ನು ಲೆಕ್ಕಿಸದೆ ಪ್ರಾಸ್ಟೇಟ್ ಹಿಗ್ಗುವಿಕೆಗೆ ಹೆಚ್​ಒಎಲ್​ಇಪಿ (ಹೋಲ್ಮಿಯಂ ಲೇಸರ್ ಎನುಕ್ಲಿಯೇಶನ್ ಆಫ್ ಪ್ರಾಸ್ಟೇಟ್) ಒಂದು ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯೆಂದು ತಿಳಿದುಬಂದಿದೆ. ಇದರಲ್ಲಿ ಕಡಿಮೆ ರಕ್ತಸ್ರಾವ ಕಂಡುಬರುತ್ತದೆ ಮತ್ತು ಶಸ್ತ್ರಚಿಕಿತ್ಸಾ ಸಮಯ ಸಹ ಕಡಿಮೆಯಾಗಿರುತ್ತದೆ.

ಮೂತ್ರಶಾಸ್ತ್ರದಲ್ಲಿ ಲೇಸರ್ ಬಳಕೆಗಳು: ಮೃದು ಅಂಗಾಂಶದ ಛೇದನಗಳಿಗೆ (ಉದಾ. ಮೂತ್ರ ವಿಸರ್ಜನ ನಾಳದ ಸಂಕೋಚನ, ಪೋಸ್ಟೀರಿಯರ್ ಯುರೆತ್ರಲ್ ವಾಲ್ವ್​ಗಳು, ಎಂಡೊಪಿಎಲೋಟಮಿ, ಮೂತ್ರಚೀಲ ಕಂಠದ ಸಂಕೋಚನ) ಹೋಲ್ಮಿಯಂ ಲೇಸರ್ ಬಳಸಬೇಕು. ಎನುಕ್ಲಿಯೇಶನ್, ರಿಸೆಕ್ಷನ್ ಮತ್ತು ಅಬ್ಲೇಶನ್​ಗೆ, ಉದಾ. ಬೆನಿನ್ ಪ್ರೊಸ್ಟಾಟಿಕ್ ಹೈಪರ್​ಪ್ಲಾಸಿಯ (ಬಿಪಿಹೆಚ್) ಹೋಲ್ಮಿಯಂ ಲೇಸರ್ ಮತ್ತು ಕೆಟಿಪಿ ಲೇಸರ್ ಬಳಸಲಾಗುತ್ತದೆ.

ಮೂತ್ರಚೀಲದ ಕ್ಯಾನ್ಸರ್​ಗೆ ಹೋಲ್ಮಿಯಂ ಲೇಸರ್ ಬಳಸಿದರೆ, ಕಲ್ಲುಗಳ ಇಂಟ್ರಾಕಾರ್ಪೆರಿಯಲ್ ಲೇಸರ್ ಫ್ರಾಗ್ಮೆಂಟೇಶನ್ ಅಥವಾ ಡಸ್ಟಿಂಗ್​ಗೆ (ರೀನಲ್ ಪೆಲ್ವಿಸ್, ಮೂತ್ರನಾಳ ಮತ್ತು ಮೂತ್ರಚೀಲದ ಕಲ್ಲುಗಳು), ಹೋಲ್ಮಿಯಂ ಲೇಸರ್ ಬಳಸಬೇಕು.

ಕಾಂಡಿಲೊಮಾಟ, ಪೆನಿಲ್ ಕಾರ್ಸಿನೋಮ ಮತ್ತು ಸ್ಕಿನ್ ಹಿಮಾಂಜಿಯೊಮಾಟಕ್ಕೆ ಇಣ2 ಲೇಸರ್ ಬಳಸಬೇಕು. ಸಂತಾನೋತ್ಪತ್ತಿ ಮತ್ತು ಮೂತ್ರದ ಅಂಗಗಳ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಲೇಸರ್​ಗಳನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹೊಂದಿದೆ.

ಕಿಡ್ನಿ ಕಲ್ಲುಗಳಿಗೆ…

ಕಲ್ಲಿನ ಮೇಲೆ ಲೇಸರ್​ಅನ್ನು ಹಾಯಿಸಿದಾಗ, ಅದು ಪುಡಿಯಾಗುತ್ತದೆ ಮತ್ತು ಶೇ.70ರಷ್ಟು ಕಲ್ಲುಗಳು ವೇಪರೈಸ್ ಆಗುತ್ತವೆ ಮತ್ತು ಶೇ.30ರಷ್ಟು ಕಲ್ಲುಗಳು ಸಣ್ಣ ಚೂರುಗಳಾಗುತ್ತವೆ ಮತ್ತು ನೈಸರ್ಗಿಕ ಮಾರ್ಗದಲ್ಲಿ ಮೂತ್ರದ ಮೂಲಕ ಹರಿದುಹೋಗುತ್ತವೆ. ಈ ಕಲ್ಲುಗಳಿಗೆ ಚಿಕಿತ್ಸೆ ನೀಡಲು ಲೇಸರ್ ವರ್ಗಾಯಿಸುವ ಮಾಧ್ಯಮ ಬೇಕಾಗುತ್ತದೆ.

ಪ್ರಾಸ್ಟೇಟ್​ನಲ್ಲಿ ಬಳಕೆ

ಪ್ರಾಸ್ಟೇಟ್​ನ ಗಾತ್ರ, ರೋಗಿಯ ಅಪಾಯದ ವರ್ಗ ಮತ್ತು ರಕ್ತಸ್ರಾವದ ಸಾಧ್ಯತೆ ಮತ್ತು ಇತರ ರಕ್ತಸೋರಿಕೆಯ ರೋಗಗಳ ಆಧಾರದಲ್ಲಿ ಪ್ರಾಸ್ಟೇಟ್​ಗೆ ಚಿಕಿತ್ಸೆ ನೀಡಲು ವಿವಿಧ ಲೇಸರ್​ಗಳನ್ನು ಬಳಸಲಾಗುತ್ತದೆ.

ಇತರ ಬಳಕೆ

ಕಡಿಮೆಮಟ್ಟದ ರೋಗಲಕ್ಷಣದ ಸಣ್ಣ ಪ್ಯಾಪಿಲೋಮ ಮತ್ತು ಟಿಸಿಸಿಯಂತಹ ಮೂತ್ರಚೀಲದ ಕ್ಯಾನ್ಸರ್​ಗೆ ಚಿಕಿತ್ಸೆ ನೀಡಲು ಲೇಸರ್​ಅನ್ನು ಬಳಸಬಹುದು. ವಿಶೇಷವಾಗಿ ಅಧಿಕ ಅಪಾಯದ ಮತ್ತು ವಯಸ್ಸಾದ ರೋಗಿಗಳಲ್ಲಿ ಹೋಲ್ಮಿಯಂ ಲೇಸರ್ ಬಳಸಿ ಮೂತ್ರ ವಿಸರ್ಜನ ನಾಳದ ಸಂಕೋಚನಗಳಿಗೆ ಚಿಕಿತ್ಸೆ ನೀಡಬಹುದು.