18.1 C
Bangalore
Saturday, December 7, 2019

ಬಹುಭಾಷಾ ಕವಿ ಡಾ. ಬಿ.ಎ. ಸನದಿ ಇನ್ನಿಲ್ಲ

Latest News

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಶ್ರೀಕೃಷ್ಣನ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

ಬಾಗಲಕೋಟೆ: ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಶ್ರೀಕೃಷ್ಣನ ನೀಡಿದ ಗೀತೋಪದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಉಡುಪಿ ಶ್ರೀಕೃಷ್ಣಮಠದ ಭಾವಿ ಪರ್ಯಾಯ ಪೀಠಾಧೀಶ, ಅದಮಾರು ಶ್ರೀ ಈಶಪ್ರಿಯತೀರ್ಥ...

ವಿಜಯವಾಣಿ ಸುದ್ದಿಜಾಲ ಕಾರವಾರ/ಕುಮಟಾ
ಬಹುಭಾಷಾ ಕವಿ ಡಾ. ಬಿ.ಎ. ಸನದಿ ಅವರು ಅನಾರೋಗ್ಯದ ಕಾರಣ ಭಾನುವಾರ ಬೆಳಗಿನ ಜಾವ ಕುಮಟಾದ ಸ್ವಗೃಹದಲ್ಲಿ ವಿಧಿವಶರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಮಾನವ್ಯ ಕವಿ ಎಂದೇ ಹೆಸರಾಗಿದ್ದ ಅವರು ಶನಿವಾರದವರೆಗೂ ಅತ್ಯಂತ ಲವಲವಿಕೆಯಿಂದ ಇದ್ದರು. ರಾತ್ರಿ ಊಟ ಮುಗಿಸಿ ಮನೆಯ ಆವಾರದಲ್ಲಿ ವಾಕಿಂಗ್ ಮಾಡಿ ಮಲಗಿದ್ದರು. ಭಾನುವಾರ ಬೆಳಗಿನ ಜಾವ ಎದ್ದು ಸ್ನಾನದ ಕೊಠಡಿಗೆ ಹೋಗುತ್ತಿರುವಾಗ ಆಕಸ್ಮಿಕವಾಗಿ ಕುಸಿದು ಬಿದ್ದರು. ತಕ್ಷಣ ಪತ್ನಿ ಪರಿಚಿತ ವೈದ್ಯರಿಗೆ ದೂರವಾಣಿ ಕರೆ ಮಾಡಿದರು. ಆದರೆ, ವೈದ್ಯರು ಬಂದು ನೋಡುವಷ್ಟರಲ್ಲಿ ಡಾ. ಸನದಿ ಇಹಲೋಕ ತ್ಯಜಿಸಿದ್ದರು.

ಪುತ್ರ ನಿಸಾರ್ ಹಾಗೂ ಪುತ್ರಿ ಆಯಿಷಾ ವಿದೇಶದಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಡಾ. ಸನದಿಯವರು ಬೆಳಗಾವಿಯ ತಮ್ಮ ಮೂಲ ಮನೆಗೆ ಹಾಗೂ ಅಹ್ಮದಾಬಾದ್​ನಲ್ಲಿರುವ ನಿಕಟ ಸಂಬಂಧಿಕರ ಮನೆಗೆ ಹೋಗಿ ಬಂದಿದ್ದರು.

ಸಾಹಿತ್ಯ ಕೃಷಿ: ಬಾಬಾಸಹೇಬ ಅಹಮದ್​ಸಾಹೇಬ ಸನದಿ ಎಂಬುದು ಪೂರ್ಣ ಹೆಸರು. ಅವರದ್ದು ಮೂಲತಃ ಕೃಷಿ ಕುಟುಂಬ. ಆದರೆ, ಶಿಕ್ಷಣದ ಬಗ್ಗೆ ಅವರ ತಂದೆಯವರಿಗಿದ್ದ ಪ್ರೀತಿ ಅವರು ಹೆಚ್ಚು ಓದಲು ಅನುಕೂಲವಾಯಿತು. ಸನದಿ ಅವರು ಅಕ್ಷರ ಕೃಷಿಕರಾದರು. ಸನದಿ ಅವರು ಆಕಾಶವಾಣಿ, ವಾರ್ತಾ ಇಲಾಖೆಗೆ ಸೇವೆಗೆಂದು ಗುಜರಾತಿ, ಹಿಂದಿ, ಮಾರಾಠಿ, ಸಿಂಧಿ ಸಾಹಿತಿಗಳ ಸಂಪರ್ಕ ಬೆಳೆದಿತ್ತು. ಅದನ್ನು ಸಮರ್ಥವಾಗಿ ಬಳಸಿಕೊಂಡ ಅವರು ತಮ್ಮ ಸಾಹಿತ್ಯ ಕೃಷಿ ಮಾಡಿದರು. ಹಿರಿಯ ಸಾಹಿತಿಗಳಾದ ದ.ರಾ. ಬೇಂದ್ರೆ, ಶ್ರೀರಂಗ, ವಿ.ಕೃ. ಗೋಕಾಕ ಸೇರಿ ಹಲವರನ್ನು ಆಕಾಶವಾಣಿಗಾಗಿ ಸಂದರ್ಶನ ಮಾಡಿದ್ದರು. ಸನದಿ ಅವರು ಕೊಂಕಣಿ, ತುಳು, ಉರ್ದು, ಗುಜರಾತಿ, ಮಲಯಾಳಂನ ಪ್ರಸಿದ್ಧ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ 10 ಕವನ ಸಂಕಲನಗಳು, 6 ವಿಮರ್ಷಾ ಕೃತಿಗಳು, 8 ಸಂಪಾದಿತ ಕೃತಿಗಳು, 10 ಅನುವಾದಿತ ಕೃತಿಗಳು, ಎರಡು ನಾಟಕಗಳು, ಮೂರು ವ್ಯಕ್ತಿಚಿತ್ರಗಳು ಪ್ರಕಟವಾಗಿವೆ. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಸ್.ಎಸ್. ಭೂಸನೂರುಮಠ ಪ್ರಶಸ್ತಿ, ದೆಹಲಿ ಕರ್ನಾಟಕ ಸಂಘದಿಂದ ಶ್ರೇಷ್ಠ ಹೊರನಾಡು ಕನ್ನಡಿಗ ಪ್ರಶಸ್ತಿ, ಪುತ್ತೂರಿನ ಶಿವರಾಮ ಕಾರಂತ ಸಂಶೋಧನಾ ಕೇಂದ್ರದಿಂದ ನಿರಂಜನ ಪ್ರಶಸ್ತಿ ಸಂದಿವೆ. ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ದೇಶಾದ್ಯಂತ ಓಡಾಟ: 1957ರಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ ರಾಯಭಾಗ, ಅಥಣಿಯಲ್ಲಿ ಕೆಲಸ ಮಾಡಿದರು. 1962ರಲ್ಲಿ ವಾರ್ತಾ ಇಲಾಖೆಗೆ ವರ್ಗವಾಗಿ ಬೆಂಗ ಳೂರಿಗೆ ಬಂದರು. ಪಂಚಾಯತ್ ರಾಜ್ ಪತ್ರಿಕೆಯ ಉಪಸಂಪಾದಕರಾದರು. ನಂತರ ಪ್ರಚಾರಾಧಿಕಾರಿಯಾಗಿ ಬೀದರ್, ರಾಯ ಚೂರು, ಬಳ್ಳಾರಿ, ಗುಲ್ಬರ್ಗಾಗಳಲ್ಲಿ ಕೆಲಸ ಮಾಡಿದರು. 1972 ಅವರ ಜೀವನದಲ್ಲಿಯ ಬಹು ಮಹತ್ವದ ವರ್ಷ. ಸನದಿಯವರು ಮುಂಬೈ ಅಕಾಶವಾಣಿಯ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ನೇಮಕವಾದರು. ಮೂರು ದಶಕ ಅವರು ಮುಂಬೈಯಲ್ಲಿ ಸೇವೆ ಸಲ್ಲಿಸಿದರು. ಮುಂಬೈ ಕನ್ನಡ ಸಂಘದ ಅಧ್ಯಕ್ಷರಾಗಿದ್ದರು. ಕೆಲ ಕಾಲ ಪ್ರದರ್ಶನಾಧಿಕಾರಿಯಾಗಿ ಗುಜರಾತ್​ನ ಅಹಮದಾಬಾದ್​ನಲ್ಲೂ ಕಾರ್ಯನಿರ್ವಹಿಸಿ ದ್ದರು. ಕರ್ತವ್ಯಕ್ಕಾಗಿ ಗೋವಾ, ದಿಯು ದಮನ್​ವರೆಗೂ ಸುತ್ತಾಡಿದ್ದರು.

ಶಿಂಧೊಳ್ಳಿಯಲ್ಲಿ ಅಂತ್ಯಕ್ರಿಯೆ
ಬೆಳಗಾವಿ: ಸಾಹಿತಿ ಡಾ.ಬಿ.ಎ. ಸನದಿ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ತಾಲೂಕಿನ ಶಿಂಧೊಳ್ಳಿಗೆ ಭಾನುವಾರ ಮಧ್ಯಾಹ್ನ ತಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜನ ಅಂತಿಮ ದರ್ಶನ ಪಡೆದರು. ಸಂಜೆ ಅಂತ್ಯಕ್ರಿಯೆ ನೆರವೇರಿತು.

ಸಂತಾಪ ಸಭೆ ಇಂದು

ಕುಮಟಾ: ಕವಿ ಡಾ. ಬಿ.ಎ. ಸನದಿ ಅವರ ಗೌರವಾರ್ಥ ಸಂತಾಪ ಸೂಚಕ ಸಭೆಯನ್ನು ಏ. 1ರ ಸಂಜೆ 4.40ಕ್ಕೆ ಪಟ್ಟಣದ ಹೆಗಡೆ ಕ್ರಾಸ್ ಬಳಿಯ ನಾದಶ್ರೀ ಕಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ, ತಾಲೂಕು ಕಸಾಪ, ರೋಟರಿ ಕ್ಲಬ್, ಸನದಿ ಅಭಿಮಾನಿ ಬಳಗದಿಂದ ಈ ಸಭೆ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ರ್ಕಕೋಡಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ದತ್ತು ಪುತ್ರ

ಕುಮಟಾ: ಡಾ. ಬಿ.ಎ. ಸನದಿ ಬೆಳಗಾವಿ ಮೂಲದವರಾದರೂ ಕಳೆದ 28 ವರ್ಷದಿಂದ ಇಲ್ಲಿಯೇ ನೆಲೆಸುವ ಮೂಲಕ ಉತ್ತರ ಕನ್ನಡದ ದತ್ತು ಪುತ್ರರಾದರು. ಇಲ್ಲಿನ ಸಾಹಿತಿಗಳ ಜತೆಗೆ ಉತ್ತರ ಕನ್ನಡದ ಸಂಸ್ಕೃತಿಯ ಬಗ್ಗೆ ಅವರು ಅಪಾರ ಪ್ರೀತಿ ಬೆಳೆಸಿಕೊಂಡರು. ಸನದಿ ಅವರು ತಮ್ಮ ನಿವೃತ್ತ ಜೀವನವನ್ನು ಕರ್ನಾಟಕದ ಕರಾವಳಿಯ ಕುಮಟಾದಲ್ಲಿ ಕಳೆಯಲು ನಿರ್ಧರಿಸಿರುವುದರ ಹಿಂದೆ ಕಥೆಯೊಂದಿದೆ. ಡಾ. ಸನದಿ ಅವರು ಮುಂಬೈಯಲ್ಲಿ ವಾರ್ತಾ ಇಲಾಖೆಯಲ್ಲಿ ಕೆಲಸ ಮಾಡಿ 1991ರಲ್ಲಿ ನಿವೃತ್ತರಾದರು. ಬಳಿಕ ಮುಂಬೈ ವಿವಿಯಲ್ಲಿ ಕನ್ನಡ ವಿಭಾಗ ಪ್ರಗತಿ ಪರಿಶೀಲನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. 2003ರವರೆಗೂ ಮುಂಬೈನ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿ, ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ, ಈ ನಡುವೆ ಸನದಿಯವರಿಗೆ ಶ್ವಾಸೋಚ್ವಾಸ ಸಂಬಂಧಿ (ಬ್ರಾಂಕೈಟಿಸ್) ಸಮಸ್ಯೆ ಕಾಡುತ್ತಿತ್ತು. ಮುಂಬೈನಂತಹ ದೊಡ್ಡ ಶಹರದ ಕಲುಷಿತ ಗಾಳಿಯ ಸೇವನೆ ಅವರಿಗೆ ಒಗ್ಗಲೇ ಇಲ್ಲ. ವೈದ್ಯರು ಮುಂಬೈ ಬಿಡುವಂತೆ ಹಾಗೂ ಯಾವುದಾದರೂ ಕರಾವಳಿ ಭಾಗದ ನಿಸರ್ಗದ ಚಿಕ್ಕ ಊರಿನಲ್ಲಿ ದಿನ ಕಳೆದರೆ ಶ್ವಾಸದ ಸಮಸ್ಯೆ ಅಷ್ಟಾಗಿ ಕಾಡದು ಎಂದು ಸಲಹೆ ನೀಡಿದ್ದರು. ಇದರಿಂದ ಡಾ. ಸನದಿ ತಮ್ಮ ಪತ್ನಿಯ ಊರು ಕುಮಟಾದ ಹೆರವಟ್ಟಾದಲ್ಲಿ ಮಾವನ ಮನೆಯ ಸನಿಹವೇ ಮನೆ ಖರೀದಿಸಿ 2004ರಿಂದೀಚೆಗೆ ಪತ್ನಿಯೊಟ್ಟಿಗೆ ವಾಸಿಸಿ ಸಾಹಿತ್ಯ ಕೃಷಿ ನಡೆಸಿದ್ದರು. ಎಲ್ಲ ಧರ್ಮ, ಜಾತಿಯವರೊಂದಿಗೆ ಬೆರೆತು ಬದುಕಿದ್ದ ಡಾ. ಸನದಿ ಪತ್ನಿ ನಾಝೀರಾರನ್ನು ನಯನಾ ಎಂದೇ ಕರೆಯುತ್ತಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ. 86ರ ಇಳಿವಯಸ್ಸಿನಲ್ಲಿ ಕುಮಟಾದಲ್ಲೇ ಬದುಕಿಗೆ ವಿದಾಯ ಹೇಳಿದ್ದು ವಿಪರ್ಯಾಸ.

ಹಳಿಯಾಳದಲ್ಲಿ ಅಂತಿಮ ನಮನ

ಹಳಿಯಾಳ: ಕವಿ, ಕಥೆಗಾರ, ನಾಟಕಕಾರ ಡಾ. ಬಿ.ಎ. ಸನದಿ ಅವರ ಪಾರ್ಥಿವ ಶರೀರಕ್ಕೆ ಪಟ್ಟಣದಲ್ಲಿ ಭಾನುವಾರ ಅಂತಿಮ ನಮನ ಸಲ್ಲಿಸಲಾಯಿತು. ಕುಮಟಾದಿಂದ ಶಿಂಧೊಳ್ಳಿಗೆ ಕೊಂಡೊಯ್ಯುತ್ತಿದ್ದ ಕವಿ ಸನದಿ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಕೆನರಾ ಬ್ಯಾಂಕ್ ದೇಶಪಾಂಡೆ ಆರ್​ಸೆಟಿ ಬಳಿ ಬರ ಮಾಡಿಕೊಳ್ಳಲಾಯಿತು. ನಂತರ ಪಟ್ಟಣದ ವಿವಿಧ ಸಂಘಟನೆ ಹಾಗೂ ಪ್ರಮುಖರು ಪುಪ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಸಾಹಿತಿ ಕವಿ ಮಾಸ್ಕೇರಿ ನಾಯಕ, ವಿಆರ್​ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಬಸವ ಕೇಂದ್ರದ ಅಧ್ಯಕ್ಷ ಚಂದ್ರಕಾಂತ ಅಂಗಡಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಓರ್ವಿಲ್ ಫರ್ನಾಂಡೀಸ್, ಸುಮಂಗಲಾ ಅಂಗಡಿ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ, ತಾಲೂಕು ಕಸಾಪ ಉಪಾಧ್ಯಕ್ಷ ಜಿ.ಡಿ. ಗಂಗಾಧರ, ಅಶೋಕ ಕಣಿಮೆಹಳ್ಳಿ, ಎಸ್.ಜಿ. ಮಾನಗೆ, ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಲಮಾಣಿ, ಜಯ ಕರ್ನಾಟಕ ಸಂಘದ ಅಧ್ಯಕ್ಷ ವಿಲಾಸ ಕಣಗಲಿ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿ, ಮಹೇಶ ಆನೆಗುಂದಿ ಪಾಲ್ಗೊಂಡಿದ್ದರು.

ಸಚಿವ ದೇಶಪಾಂಡೆ ಸಂತಾಪ: ಬಿ.ಎ. ಸನದಿ ಅವರ ಅಗಲಿಕೆಯಿಂದ ಸಾಹಿತ್ಯ ರಂಗ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸುವಂತೆ ಪ್ರಾರ್ಥಿಸುತ್ತೇನೆ ಎಂದು ಸಚಿವ ಆರ್.ವಿ. ದೇಶಪಾಂಡೆ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಡಾ. ಸನದಿ ಸಾಹಿತ್ಯದಲ್ಲಿ ರಾಜಕಾರಣ ಬೆರಸದೆ ಎಲ್ಲರನ್ನೂ ಪ್ರೀತಿಯಿಂದ ಕಂಡವರಾಗಿದ್ದರು. ಇಂತಹ ಅದ್ಭುತವಾದ ಸಾಹಿತಿಯನ್ನು ಕಳೆದುಕೊಂಡಿದ್ದು, ಸಾಹಿತ್ಯ ಕ್ಷೇತ್ರಕ್ಕೆ, ತಾಲೂಕಿಗೆ ಅಲ್ಲದೆ, ಜಿಲ್ಲೆಗೆ ತುಂಬಲಾರದ ನಷ್ಟ.

| ದಿನಕರ ಶೆಟ್ಟಿ ಶಾಸಕ ಕುಮಟಾ

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...