ಬಸ್ ಹಾಯ್ದು ವ್ಯಕ್ತಿಗೆ ಗಾಯ

ಮುದ್ದೇಬಿಹಾಳ: ಪಾದಚಾರಿಗೆ ಬಸ್ ಹಾಯ್ದು ಕಾಲಿನ ಪಾದದ ಮಾಂಸಖಂಡಗಳೆಲ್ಲ ಹೊರ ಬಿದ್ದು ನರಳಾಡುತ್ತಿದ್ದರೂ ಸಾರ್ವಜನಿಕರು ಆತನನ್ನು ಆಸ್ಪತ್ರೆಗೆ ಸೇರಿಸಿದೆ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡು ಅಮಾನವೀಯತೆಯಿಂದ ಶುಕ್ರವಾರ ನಡೆದುಕೊಂಡರು.

ತಾಳಿಕೋಟೆಯಿಂದ ವಾಸ್ಕೋಗೆ ತೆರಳುವ ಬಸ್ ನಿಲ್ದಾಣದೊಳಕ್ಕೆ ಬರುವಾಗ ರಸ್ತೆ ಮೇಲೆ ಹೋಗುತ್ತಿದ್ದ ತಾಲೂಕಿನ ಯರಝರಿ ಗ್ರಾಮದ ಲಕ್ಷಣ್ಣ ಗುರಿಕಾರ (55) ಎಂಬುವರಿಗೆ ದಿಢೀರನೆ ಬಸ್ ಹಾಯ್ದಿದೆ. ಬಸ್ ಹಾಯ್ದ ರಭಸಕ್ಕೆ ಗುರಿಕಾರನ ಕಾಲಿಗೆ ಗಂಭೀರ ಗಾಯವಾಗಿದೆ. ಈ ವೇಳೆ ಜನರು ಗುಂಪಾಗಿ ಸೇರಿ ಗಾಯಾಳುವನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸದೆ ಆತನ ನರಳಾಡುವುದನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡು ಸಂವೇದನಾ ಶೂನ್ಯರಂತೆ ವರ್ತಿಸಿದರು.

ಬಳಿಕ ಕೆಲವರು ಗಾಯಾಳುವನ್ನು ಸರ್ಕಾರಿ ಆಸ್ಪತ್ರೆ ದಾಖಲಿಸಿದರು. ಮುುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.