ಸಿನಿಮಾ

ಬಸ್‌ಗಳಿಲ್ಲದೆ ಪ್ರಯಾಣಿಕರ ಪರದಾಟ

ಸುಂಟಿಕೊಪ್ಪ: ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಕೆಲ ಬಸ್‌ಗಳನ್ನು ಚುನಾವಣೆ ಕಾರ್ಯಕ್ಕೆ ಬಳಸಿದ್ದರಿಂದ ಮತದಾನಕ್ಕೆ ದೂರದಿಂದ ಬರಬೇಕಾದ ಮತದಾರರು ಬಸ್‌ಗಳಿಲ್ಲದೆ ಪರದಾಡುವಂತಾಯಿತು.

ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ನೂರಾರು ಬಸ್‌ಗಳು ಸಂಚರಿಸುತ್ತಿದ್ದವು. ಮತದಾನ ಹಬ್ಬದ ಹಿನ್ನೆಲೆಯಲ್ಲಿ ಬಸ್‌ಗಳನ್ನು ಮತದಾನ ಯಂತ್ರ ಹಾಗೂ ಮತಗಟ್ಟೆ ಅಧಿಕಾರಿಗಳನ್ನು ಕರೆದೊಯ್ಯಲು ನಿಯೋಜಿಸಿದ್ದರಿಂದ ಆಗೊಮ್ಮೆ ಈಗೊಮ್ಮೆ ಸಂಚರಿಸುತ್ತಿದ್ದ ಬಸ್‌ಗಳಲ್ಲಿ ಸಂಚರಿಸಬೇಕಾದ ಸಂಕಷ್ಟವನ್ನು ಮತದಾರರು ಎದುರಿಸಬೇಕಾಯಿತು.

ನಮ್ಮ ಪವಿತ್ರ ಹಕ್ಕನ್ನು ಚಲಾಯಿಸಲು ಬಂದಿದ್ದೇವೆ. ಆದರೆ ಬಸ್ಸುಗಳು ಸಿಗದೆ ಗಂಟೆಗಟ್ಟಲೆ ಕಾಯಬೇಕಾಯಿತು. ಮತದಾನ ಮಾಡಿ ಹಿಂದಿರುಗಲು ಬಸ್ ಇದೆಯೋ ಇಲ್ಲವೋ ಎಂಬ ಅಂತಕದಲ್ಲಿದ್ದೇವೆ ಎಂದು ಮತ ಚಲಾಯಿಸಲು ಬೆಂಗಳೂರಿನಿಂದ ಬಂದಿದ್ದ ಕಾವೇರಪ್ಪ, ಬೀನಾ, ಸೋಮಯ್ಯ, ನೀನಾ ಆತಂಕವ್ಯಕ್ತಪಡಿಸಿದರು.

Latest Posts

ಲೈಫ್‌ಸ್ಟೈಲ್