ಬಸವನಬಾಗೇವಾಡಿಯಲ್ಲಿ ಮರಗಮ್ಮದೇವಿ ಜಾತ್ರೋತ್ಸವ

1 Min Read
Basavanbagewadi, Maragammadevi Festival, Palankki Festival,
ಬಸವನಬಾಗೇವಾಡಿ ಪಟ್ಟಣದಲ್ಲಿ ಮರಗಮ್ಮದೇವಿ ಪಲ್ಲಕ್ಕಿ ಉತ್ಸವ ಜರುಗಿತು.

ಬಸವನಬಾಗೇವಾಡಿ: ಪಟ್ಟಣದ ಚಿಂಚೋಳಿ ಗಲ್ಲಿಯ ಮರಗಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಮಂಗಳವಾರ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.

ಮರಗಮ್ಮದೇವಿ ದೇವಸ್ಥಾನದಿಂದ ಬೆಳಗ್ಗೆ 8ಕ್ಕೆ ಸಕಲ ವಾದ್ಯ ವೈಭವದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪಲ್ಲಕ್ಕಿ ಉತ್ಸವ ಜರುಗಿತು. ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಬಸವತೀರ್ಥದಲ್ಲಿ ಗಂಗಸ್ಥಳ ಕಾರ್ಯ ನಡೆಯಿತು. ದೇವಸ್ಥಾನಕ್ಕೆ ಮಧ್ಯಾಹ್ನ 12ಕ್ಕೆ ನೂರಾರು ಸುಮಂಗಲೆಯರೊಂದಿಗೆ ಪಲ್ಲಕ್ಕಿ ಉತ್ಸವ ಗಂಗಸ್ಥಳದಿಂದ ತೆರಳಿತು.

ಮಧ್ಯಾಹ್ನ 1ಕ್ಕೆ ಮರಗಮ್ಮದೇವಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು. ಭಕ್ತರು ದೇವಿಗೆ ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿದರು. ದೇವಸ್ಥಾನದ ಕಮಿಟಿಯವರು ಅನ್ನಪ್ರಸಾದದ ವ್ಯವಸ್ಥೆ ಮಾಡಿದ್ದರು.

ಪಲ್ಲಕ್ಕಿ ಉತ್ಸವದಲ್ಲಿ ಸುರೇಶ ಪಡಶೆಟ್ಟಿ, ಅರ್ಜುನ ಜಾಧವ, ಸಂಗಪ್ಪ ಕುಂಬಾರ, ಗಣಪತಿ ಬಡಿಗೇರ, ಲಕ್ಷ್ಮಣ ಅಂಬಗೇರ, ರಾಜು ಹಾರಿವಾಳ, ಶಿವಾನಂದ ಮಡಿಕೇಶ್ವರ, ಬಸವರಾಜ ಚಿಂಚೋಳಿ, ಶರಣಬಸು ಮಿಣಜಗಿ, ಗಿರೀಶ ಮೇಟಿ, ಸಂಗಯ್ಯ ಕಾಳಹಸ್ತೇಶ್ವರಮಠ, ಮಲ್ಲು ಪೂಜಾರಿ, ಲಕ್ಷ್ಮಣ ಪವಾರ, ಮಹಾಂತೇಶ ಚಿಂಚೋಳಿ, ಸಂತೋಷ ಚಿಂಚೋಳಿ, ಮಲ್ಲು ಕುಂಬಾರ, ಪ್ರಶಾಂತ ಬಿಜಾಪುರ, ಆನಂದ ನಾಯ್ಕೋಡಿ, ಸಂಗು ಪಡಶೆಟ್ಟಿ, ಅಣ್ಣಕ್ಕ ಚಿಂಚೋಳಿ, ಲಕ್ಷ್ಮೀಬಾಯಿ ಮೇಟಿ, ನಿರ್ಮಲಾ ಪಡಶೆಟ್ಟಿ, ನೀಲಮ್ಮ ಚಿಂಚೋಳಿ, ಗೀತಾ ಪಡಶೆಟ್ಟಿ, ಬಸಮ್ಮ ಆದಿಗೊಂಡ, ಗಂಗವ್ವ ದಂಡಿನ, ಲಕ್ಷ್ಮೀ ಸಾರವಾಡ, ಕಲ್ಲವ್ವ ಸಾರವಾಡ ಇತರರಿದ್ದರು.

See also  ಪ್ರತಿಯೊಬ್ಬರೂ ರಸ್ತೆ ನಿಯಮ ಪಾಲಿಸಿ
Share This Article