More

  ಬಸವಣ್ಣ ಬಿತ್ತಿದ ಮೌಲ್ಯ ಪಾಲನೆ ಅಗತ್ಯ

  ಅಥಣಿ ಗ್ರಾಮೀಣ: ಬಸವಣ್ಣ ಬಿತ್ತಿದ ಮೌಲ್ಯಗಳನ್ನು ಮಾನವಕುಲ ಕಲಿಯಬೇಕಿದೆ ಎಂದು ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

  ಅಥಣಿ ತಾಲೂಕಿನ ಸವದಿ ಗ್ರಾಮದ ಶ್ರೀ ಸಂಗನಬಸವ ಮಠದಲ್ಲಿ ಸಂಗನಬಸವ ಶಿವಯೋಗಿಗಳು ಹಾಗೂ ಮಹಾಂತ ಶಿವಯೋಗಿಗಳ ಸ್ಮರಣೋತ್ಸವ ಅಂಗವಾಗಿ ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಈಚೆಗೆ ಏರ್ಪಡಿಸಿದ್ದ ವಿಶ್ವಧರ್ಮಿ ಬಸವಣ್ಣ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಬಸವಣ್ಣನವರು ಕನ್ನಡ ನಾಡಿನಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ. ಇಂತಹ ಮಹಾನ್ ಇತಿಹಾಸ ಪುರುಷರ ಜೀವನ ವೃತ್ತಾಂತವನ್ನು ನಾಟಕದ ಮೂಲಕ ತಿಳಿಸಿದ ಮಹಾಂತೇಶ್ವರ ನಾಟ್ಯ ಸಂಘದ ಕಾರ್ಯ ಶ್ಲಾಘನೀಯ ಎಂದರು. ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ನಾಟಕದಲ್ಲಿ ಸಂಗೀತ ಮತ್ತು ಕಲಾವಿದರ ಅಭಿನಯ ಪ್ರಧಾನವಾಗಿರುತ್ತದೆ. ನಾಟಕ ಅತ್ಯಂತ ಪ್ರಭಾವಶಾಲಿ ಮಾಧ್ಯಮ ಎಂದರು. ಶಿರೂರ ಬಸವಲಿಂಗ ಸ್ವಾಮೀಜಿ, ನವಲಿಂಗ ಶರಣರು, ಡಾ.ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಸವದಿ-ಇಳಕಲ್ಲ ಗುರುಮಹಾಂತ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಪುಷ್ಪಕುಮಾರ ಪಾಟೀಲ, ಬಸವರಾಜ ಬಿಸನಕೊಪ್ಪ, ಸಂತೋಷ ಸಾವಡಕರ, ಕುಮಾರ ಗಲಗಲಿ, ಮಹಾಂತೇಶ ಠಕ್ಕಣ್ಣವರ, ರಾಚುಗೌಡ ಪಾಟೀಲ, ಸಿದ್ದಪ್ಪ ಸೂರಗೋಣ, ಅಶೋಕ ಸನಾಳ, ಡಿ.ಬಿ.ಠಕ್ಕಣ್ಣವರ, ಮಹಾಂತೇಶ ಬಾಗೇಣ್ಣವರ, ಪ್ರಕಾಶ ಬಾಳಿಕಾಯಿ, ಮಹಾತೇಶ ಬಾದವಾಡಗಿ, ಮಲ್ಲನಗೌಡ ಪಾಟೀಲ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts