ಎನ್.ಆರ್.ಪುರ: ಹೆಬ್ಬೆಯ ದೋಣಿಗಂಡಿ ಸಮೀಪದ ಭದ್ರಾ ಹಿನ್ನೀರಿನಲ್ಲಿ ಶನಿವಾರ ಮೀನುಗಾರರ ಬಲೆಗೆ 25 ಕೆ.ಜಿ. ತೂಕದ ಹದ್ದುಮೀನು ಸಿಕ್ಕಿದ್ದು, ಸಿಂಸೆಯ ಮೀನು ವ್ಯಾಪಾರಿ ಬಷೀರ್ ಅವರ ಅಂಗಡಿಯಲ್ಲಿ ಮಾರಾಟವಾಗಿದೆ.
ಹದ್ದುಮೀನಿಗೆ ಇಲ್ಲಿನ ಆಡು ಭಾಷೆಯಲ್ಲಿ ಕಲ್ಲುಸುರ್ಗಿ ಎಂದು ಕರೆಯುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಭದ್ರಾ ಹಿನ್ನೀರು ಅಥವಾ ಯಾವುದೇ ಹೊಳೆ, ನದಿಯಲ್ಲೂ ಹದ್ದುಮೀನು ಹೆಚ್ಚಾಗಿ ಸಿಗುತ್ತಿಲ್ಲ. ಹೊಸಪೇಟೆ ಡ್ಯಾಂನಿಂದ ಮೀನುಗಳನ್ನು ಎನ್.ಆರ್.ಪುರಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ. ಈಗ ದೊಡ್ಡ ಗಾತ್ರದ ಅಪರೂಪವಾದ ಹದ್ದುಮೀನು ಸಿಕ್ಕಿದ್ದು ಮೀನುಗಾರರಿಗೆ ಹರ್ಷ ತಂದಿದೆ.