ಬರ್ಗದ್ದೆ ಸೊಸೈಟಿಯಲ್ಲಿ ಮುಂದುವರಿದ ಧರಣಿ

ಕುಮಟಾ: ಬರ್ಗದ್ದೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ರೈತರು ಪಟ್ಟಣದ ಕೆಡಿಸಿಸಿ ಬ್ಯಾಂಕ್ ಆವಾರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರಿಯಿತು.

ಬ್ಯಾಂಕ್ ವ್ಯವಹಾರ ನಡೆಸದಂತೆ ತಾಕೀತು ಮಾಡಿದರು. ಮೊದಲು ನಮ್ಮ ಸಮಸ್ಯೆ ಪರಿಹರಿಸಿ ಬಳಿಕ ನಿಮ್ಮ ವ್ಯವಹಾರ ನಡೆಸಿ ಎಂದು ರೈತರು ಪಟ್ಟು ಹಿಡಿದರು.

ರೈತರಾದ ಎನ್.ಎಸ್. ಹೆಗಡೆ, ಎಸ್.ಪಿ. ಭಟ್ಟ, ಸುಬ್ರಾಯ ಭಟ್ಟ, ಗಣಪತಿ ಹೆಗಡೆ, ಗೀತಾ ಶಾಸ್ತಿ್ರ ನಾರಾಯಣ ಮಡಿವಾಳ, ಗಣಪತಿ ಭಟ್ಟ, ಶಂಕರ ಗೌಡ, ಬೀರಾ ಗೌಡ, ಎಂ.ಆರ್. ಹೆಗಡೆ, ಭಾಗೀರಥಿ ಗಣಪತಿ ಹೆಗಡೆ, ನಾಗೇಶ ಮಡಿವಾಳ ಹಾಗೂ ನೂರಾರು ರೈತರು ಹಾಜರಿದ್ದರು. ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿ ತಾರಾ ಗೌಡ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಸಭೆ: ಮಧ್ಯಾಹ್ನದ ಬಳಿಕ ಕೆಡಿಸಿಸಿ ಬ್ಯಾಂಕ್​ಗೆ ಆಗಮಿಸಿದ ಸಹಕಾರಿ ಸಹಾಯಕ ನಿಬಂಧಕ ಎನ್.ಎನ್. ಹೆಗಡೆ ಅವರು ಬರ್ಗದ್ದೆ ಸೊಸೈಟಿ ಸದಸ್ಯರೊಂದಿಗೆ ಸಭೆ ನಡೆಸಿದರು

ಬಳಿಕ ಮಾತನಾಡಿ, ಬರ್ಗದ್ದೆ ಸೊಸೈಟಿಗೆ ಆಡಳಿತ ಮಂಡಳಿಯಿದೆ. ಸಮಿತಿಯವರು ತನಿಖೆಗೆ ಸಹಕಾರ ನೀಡಬೇಕು. ಇಲ್ಲವೆ ಆಡಳಿತ ಕಮಿಟಿಯವರೆಲ್ಲರೂ ರಾಜೀನಾಮೆ ನೀಡಿದರೆ ನಾವೆ ತನಿಖೆ ಮುಂದುವರಿಸುತ್ತೇವೆ ಎಂಸು ಹೇಳಿದರು.

ಬರ್ಗದ್ದೆ ಸೊಸೈಟಿ ಅಧ್ಯಕ್ಷ ಮಾದೇವ ಲಿಂಗು ಗೌಡ ಪ್ರತಿಕ್ರಿಯಿಸಿ, ಸೊಸೈಟಿಯ ಆಡಳಿತ ಮಂಡಳಿಯವರು ಇಲಾಖಾ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಆಗಸ್ಟ್ 29 ರಿಂದ ಸಹಕಾರಿ ಇಲಾಖೆಯ ತನಿಖಾಧಿಖಾರಿಗಳು ಆಗಮಿಸಿ ತನಿಖೆಯನ್ನು ನಡೆಸಬಹುದಾಗಿದೆ. ಆಡಳಿತ ಕಮಿಟಿಯ ಜೊತೆಯಲ್ಲಿ ಮುಖ್ಯ ಕಾರ್ಯನಿರ್ವಾಹಕರೂ ಸಹಕಾರ ನೀಡುವಂತೆ ತಿಳಿಸಲಾಗುವುದು ಎಂದು ಲಿಖಿತವಾಗಿ ಬರೆದುಕೊಟ್ಟರು. ಸಭೆಯಲ್ಲಿ ಜಿ.ಐ. ಹೆಗಡೆ, ವೀಣಾ ನಾಯಕ ತಲಗೇರಿ, ಪಿಎಸ್​ಐ ಇ.ಸಿ.ಸಂಪತ್ ಇತರರು ಇದ್ದರು.

Leave a Reply

Your email address will not be published. Required fields are marked *