ಬರಗಾಲ ಕಾಮಗಾರಿ ಆರಂಭಿಸಲು ಒತ್ತಾಯ

ಮುಂಡರಗಿ: ಸರ್ಕಾರ ಬರಗಾಲ ಕಾಮಗಾರಿ ಆರಂಭಿಸಿ ಜನರಿಗೆ ದಿನಗೂಲಿ ಕೆಲಸ ನೀಡುವುದರ ಮೂಲಕ ಬರಗಾಲದ ಬವಣೆಯಿಂದ ಬಳಲುತ್ತಿರುವವರಿಗೆ ನೆರವಾಗಬೇಕು ಎಂದು ಒತ್ತಾಯಿಸಿ ತಾಲೂಕಿನ ಹೆಸರೂರು ಗ್ರಾಮದ ರೈತರು ಮತ್ತು ಮಹಿಳಾ ಕೂಲಿಕಾರ್ವಿುಕರು ಶನಿವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

ಬಹುತೇಕ ಗ್ರಾ.ಪಂ.ವ್ಯಾಪ್ತಿಯಲ್ಲಿ ಯಂತ್ರಗಳ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ. ಬರಗಾಲ ಹಿನ್ನೆಲೆಯಲ್ಲಿ ಮಳೆ ಬೆಳೆ ಇಲ್ಲದೇ ರೈತರಿಗೆ ಕೂಲಿ ಕಾರ್ವಿುಕರಿಗೆ ಉದ್ಯೋಗ ಇಲ್ಲದಂತಾಗಿದೆ. ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನೇ ಬರಗಾಲ ಕಾಮಗಾರಿ ಎಂದು ಹೇಳುತ್ತಿದೆ, ಇದರ ಬದಲಾಗಿ ಪ್ರತ್ಯೇಕವಾಗಿ ಬರಗಾಲ ಕಾಮಗಾರಿ ಕೆಲಸ ನೀಡಬೇಕು. ಬಡ ಕೂಲಿ ಕಾರ್ವಿುಕರು ಉದ್ಯೋಗವಿಲ್ಲದೆ ಗೋವಾ, ಮಂಗಳೂರು ಸೇರಿ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರಗಾಲ ಕಾಮಗಾರಿ ಕೈಗೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.

ಶಿರಸ್ತೇದಾರ ರಮೇಶ ಬಾಲೆಹೊಸೂರ ಮನವಿ ಸ್ವೀಕರಿಸಿದರು. ನಂತರ ತಾ.ಪಂ. ಕಾರ್ಯಾಲಯಕ್ಕೆ ತೆರಳಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಕಲ್ಮನಿ ಅವರಿಗೆ ಈ ಕುರಿತು ಪ್ರತ್ಯೇಕ ಮನವಿ ಸಲ್ಲಿಸಿದರು. ವೈ.ಎನ್. ಗೌಡರ, ಸುಭಾಸ ಗುಡಿಮನಿ, ಪ್ರೇಮಾ ಪವಾರ, ಚನ್ನಮ್ಮ ತಳವಾರ, ವೀರಯ್ಯ ಶರಣಯ್ಯ, ಕೊಟ್ರವ್ವ ಶಾಸ್ತ್ರಿಮಠ, ಕರಿಯವ್ವ ತಳವಾರ, ಲಕ್ಷ್ಮವ್ವ ಕುರಿ, ಸುಶೀಲವ್ವ ಕುರಿ, ಬೀಬಿಜಾನ ನದಾಫ್, ವಿಜಯಲಕ್ಷ್ಮಿ ಕದಡಿ, ಸಿದ್ದಪ್ಪ ಮ್ಯಾಗೇರಿ, ಹುಲಗೆವ್ವ ಮ್ಯಾಗೇರಿ, ವನಜವ್ವ ಗುಡಿಸಲ, ಹನುಮವ್ವ ಬಂಗಿ, ಅನಸವ್ವ ಕಲಕೇರಿ, ಇತರರು ಇದ್ದರು.

Leave a Reply

Your email address will not be published. Required fields are marked *