ಬಯಲು ಮುಕ್ತ ಶೌಚ ಗ್ರಾಮಕ್ಕೆ ಸಲಹೆ

blank

ಚಿತ್ರದುರ್ಗ: ನಾವಿರುವ ಊರನ್ನಾದರೂ ಬಯಲು ಮುಕ್ತ ಶೌಚ ಗ್ರಾಮವನ್ನಾಗಿ ಮಾಡೋಣ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಹೇಳಿದರು. ಚಿತ್ರದುರ್ಗ ತಾಲೂಕು ಜೆ.ಎನ್. ಕೋಟೆ ಗ್ರಾಪಂನಲ್ಲಿ ಬುಧವಾರ ಏರ್ಪಡಿಸಿದ್ದ ಮಾಹಿತಿ ಶಿಕ್ಷಣ ಕಾರ್ಯಾಗಾರದಲ್ಲಿ ಮಾತನಾಡಿ, ಬಯಲು ಶೌಚ ಘನತೆ, ಆರೋಗ್ಯಕ್ಕೆ ಧಕ್ಕೆ ತಂದೊಡ್ಡುತ್ತದೆ. ಆರೋಗ್ಯ ಸಮಸ್ಯೆ, ತಾಯಿ-ಶಿಶು ಮರಣ ನಿಯಂತ್ರಣ, ಸಾಂಕ್ರಾಮಿಕವಲ್ಲದ, ಕೀಟಜನ್ಯ ರೋಗ ಹಾಗೂ ಕ್ಷಯ ರೋಗ ನಿಯಂತ್ರಣ, ಮಾನಸಿಕ ಆರೋಗ್ಯದ ಕಾಳಜಿ ನಿರ್ವಹಣೆ ಕುರಿತಂತೆ ಗ್ರಾಪಂ ಮಟ್ಟದಲ್ಲೇ ಯೋಜನೆ ರೂಪಿಸಿಕೊಳ್ಳಬೇಕಾಗಿದೆ ಎಂದರು. ಜಿಲ್ಲಾ ಮಾನಸಿಕ ರೋಗಗಳ ಆಪ್ತ ಸಮಾಲೋಚಕ ಡಾ. ಶ್ರೀಧರ್, ಸಮುದಾಯ ಆರೋಗ್ಯ ಅಧಿಕಾರಿ ರಮೇಶ್, ತಾಲೂಕು ಆಶಾ ಬೋಧಕಿ ತಬಿತಾ, ಪಿಡಿಒ ಮಂಜುಳಾ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷೆ ನಾಗಮ್ಮ, ಸದಸ್ಯರು, ಯೋಗ ಶಿಕ್ಷಕ ರವಿ ಅಂಬೇಕರ್ ಇತರರು ಇದ್ದರು.

blank
Share This Article

ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …