ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿ

ಆನೇಕಲ್: ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಜೀಬ್ರಾ ಶನಿವಾರ ಹೆಣ್ಣು ಮರಿಗೆ ಜನ್ಮ ನೀಡಿದೆ.

ವೈದ್ಯಾಧಿಕಾರಿ ಡಾ.ಉಮಾಶಂಕರ್, ವಲಯ ಅರಣ್ಯಾಧಿಕಾರಿ ಚಂದ್ರಗೌಡ ಸ್ಥಳಕ್ಕೆ ಭೇಟಿ ನೀಡಿ ತಾಯಿ, ಮರಿಯನ್ನು ವಿಶೇಷ ಆರೈಕೆ ಮಾಡಲು ಪ್ರಾಣಿ ಪಾಲಕರಿಗೆ ಸೂಚಿಸಿದ್ದಾರೆ.

2015ರಲ್ಲಿ ಉದ್ಯಾನಕ್ಕೆ ವಿಶೇಷ ಅತಿಥಿಗಳಾಗಿ ಇಸ್ರೇಲ್​ನ ಜಿಯೋಲಾಜಿಕಲ್ ಸೆಂಟರ್ ಟೆಲ್ ಅವಿವ್ ರಮಾತ್ ಗನ್ ಸಫಾರಿಯಿಂದ ಎರಡು ಹೆಣ್ಣು, ಎರಡು ಗಂಡು ಜೀಬ್ರಾಗಳನ್ನು ತರಿಸಿಕೊಳ್ಳಲಾಗಿತ್ತು. 2017 ರಂದು ಗರ್ಭಧರಿಸಿದ್ದ ಒಂದು ಹೆಣ್ಣು ಜೀಬ್ರಾ ಮೃತಪಟ್ಟಿತ್ತು. 2018ರಲ್ಲಿ ಕಾವೇರಿ ಹೆಸರಿನ ಜೀಬ್ರಾ ಒಂದು ಮರಿಗೆ ಜನ್ಮ ನೀಡಿತ್ತು. ಈಗ ಜನಿಸಿರುವ ಮರಿ ಹೆಣ್ಣಾಗಿದ್ದು, ಉದ್ಯಾನದಲ್ಲಿ ಈಗ ಎರಡು ಗಂಡು, ಎರಡು ಹೆಣ್ಣು ಜೀಬ್ರಾಗಳಾಗಿವೆ.

ಮುದ್ದು ಮುದ್ದಾಗಿ ಕಾಣುತ್ತಿದ್ದ ಜೀಬ್ರಾ ಮರಿ ಭಾನುವಾರ ಪ್ರವಾಸಿಗರ ಗಮನ ಸೆಳೆಯಿತು.

Leave a Reply

Your email address will not be published. Required fields are marked *