ಚಿತ್ರದುರ್ಗ: ಬನದ ಹುಣ್ಣಿಮೆ ಅಂಗವಾಗಿ ಸಾವಂತನಹಟ್ಟಿಯ ಬನಶಂಕರಿ ದೇವಿ ದೇಗುಲದಲ್ಲಿ ಸೋಮವಾರ ದೇವಿಗೆ ಭಕ್ತರ ಸಹಕಾರದಿಂದ ನೂತನ ಬೆಳ್ಳಿ ಕಿರೀಟ, ಬಂಗಾರದ ಗುಂಡಿನ ಸರ ಸಮರ್ಪಿಸಲಾಯಿತು.
ದೇವಿಗೆ ಗಂಗಾ ಪೂಜೆ, ಪಂಚಾಮೃತ ಅಭಿಷೇಕದ ಬಳಿಕ ವಿಶೇಷ ಪುಷ್ಪಾಲಂಕಾರ ಸೇವೆ ನೆರವೇರಿತು. ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು.