ಬದ್ಲಾ ಗೆದ್ದಿದೆ ಬೋನಸ್ ಕೊಡಿ!

ಶಾರುಖ್ ಖಾನ್ ಒಡೆತನದ ರೆಡ್​ಚಿಲ್ಲಿಸ್ ಎಂಟರ್​ಟೈನ್​ವೆುಂಟ್ ಬ್ಯಾನರ್​ನಡಿಯಲ್ಲಿ ನಿರ್ವಣವಾಗಿದ್ದ ‘ಬದ್ಲಾ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡುತ್ತಿದೆ. 10 ಕೋಟಿ ರೂ. ಬಂಡವಾಳದಲ್ಲಿ ನಿರ್ವಣಗೊಂಡಿದ್ದ ಈ ಚಿತ್ರ ವಿಶ್ವಾದ್ಯಂತ ಬರೋಬ್ಬರಿ 137 ಕೋಟಿ ರೂ. ಕಮಾಯಿ ಮಾಡಿದೆ. ಇದೇ ಖುಷಿಯಲ್ಲಿ ‘ಬದ್ಲಾ’ದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಅಮಿತಾಭ್ ಬಚ್ಚನ್, ಸಿನಿಮಾ ಗೆದ್ದ ಖುಷಿಯಲ್ಲಿ ಶಾರುಖ್​ಗೆ ಬೋನಸ್ ಕೇಳಿದ್ದಾರೆ! ‘ಕಿಂಗ್ ಖಾನ್ ಶಾರುಖ್, ನಿಮ್ಮ ಸಿನಿಮಾ ಕರಿಯರ್​ನಲ್ಲಿ ‘ಬದ್ಲಾ’ ಯಶಸ್ವಿ ಚಿತ್ರಗಳಲ್ಲೊಂದು. ಹಾಗಾಗಿ, ಯಾವಾಗ ಕಂಪನಿಯಲ್ಲಿ ಒಳ್ಳೆಯ ಆದಾಯ ಬರುತ್ತೋ, ಯಾರು ಚೆನ್ನಾಗಿ ಕೆಲಸ ಮಾಡಿರುತ್ತಾರೋ, ಅಂಥವರಿಗೆ ಬಹುಮಾನದ ರೂಪದಲ್ಲಿ ಏನಾದರೂ ಕೊಡುವ ಪದ್ಧತಿ ಇದೆ. ಮತ್ತೆ ನಮ್ಮ ಬೋನಸ್ ಕೊಡಿ’ ಎಂದು ಅಮಿತಾಭ್ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ‘ಸಿನಿಮಾ ಈ ಮಟ್ಟಿಗಿನ ಯಶಸ್ಸು ಗಿಟ್ಟಿಸಿದೆ ಅಂದರೆ ಅದಕ್ಕೆ ಅಮಿತಾಭ್ ಅವರೇ ಕಾರಣ’ ಎಂದಿದ್ದಾರೆ. ಅಲ್ಲದೆ, ಈ ಕುರಿತು ಒಬ್ಬರಿಗೊಬ್ಬರು ಟ್ವೀಟರ್​ನಲ್ಲಿ ತಮಾಷೆಯಾಗಿ ಕಾಲೆಳೆದಿದ್ದಾರೆ . ಈ ಹಿಂದೆ ಶಾರುಖ್ ನಿರ್ವಿುಸಿದ್ದ ‘ಜೀರೋ’, ‘ರಯೀಸ್’, ‘ಜಬ್ ಹ್ಯಾರಿ ಮೆಟ್ ಸೇಜಲ್’, ‘ದಿಲ್ವಾಲೆ’ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಹೀನಾಯ ಸೋಲು ಕಂಡಿದ್ದವು. ಆದರೆ, ಸುಜಯ್ ಘೋಷ್ ನಿರ್ದೇಶನದ ‘ಬದ್ಲಾ’ ದೊಡ್ಡ ಯಶಸ್ಸು ಕಂಡಿದೆ. ಅಮಿತಾಭ್ ಜತೆಗೆ ನಟಿ ತಾಪ್ಸೀ ಪನ್ನು ಸಹ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.-ಏಜೆನ್ಸೀಸ್