More

  ಬದುಕಿನಲ್ಲಿ ಶರಣರ ವಚನ ಪಾಲಿಸಿ

  ಗೋಕಾಕ: ಶರಣರ ವಚನಗಳು ಬದುಕಿಗೆ ಉತ್ತಮ ಮಾರ್ಗಸೂಚಿಗಳಾಗಿವೆ. ಶರಣರ ಜಯಂತಿ ಆಚರಿಸಿದರೆ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.

  ನಗರದ ಕೆಎಲ್‌ಇ ಸಂಸ್ಥೆಯ ಎಂ.ಬಿ.ಮುನವಳ್ಳಿ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೂಡಲಗಿ ಮತ್ತು ಗೋಕಾಕ ತಾಲೂಕು ಘಟಕದಿಂದ ವಿಶ್ವ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಹಾಗೂ ಮುಕ್ತ ಚರ್ಚಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿಇಒ ಜಿ.ಬಿ.ಬಳಿಗಾರ ಮಾತನಾಡಿ, ಶರಣರ ವಚನಗಳನ್ನು ಅರ್ಥ ಮಾಡಿಕೊಂಡರೆ ಬದುಕು ಸಾರ್ಥಕತೆ ಪಡೆಯುತ್ತದೆ ಎಂದರು. ಸಾಹಿತಿ ಮಹಾಲಿಂಗ ಮಂಗಿ, ಡಾ.ಸಿ.ಕೆ.ನಾವಲಗಿ, ಪ್ರೊ.ಚಂದ್ರಶೇಖರ ಅಕ್ಕಿ, ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಶ್ರೀ, ಬಸವ ಸಮಿತಿ ಅಧ್ಯಕ್ಷ ಮಹಾಂತೇಶ ತಾಂವಶಿ, ಸೋಮಶೇಖರ ಮಗದುಮ್ಮ, ಡಾ. ಸುರೇಶ ಹಣಗಂಡಿ, ಬಾಲಶೇಖರ ಬಂಧಿ, ಭಾರತಿ ಮದಬಾವಿ, ಪ್ರೊ.ಎಂ.ಎನ್.ಮಾವಿನಕಟ್ಟೆ, ಪ್ರೊ. ಸುರೇಶ ವೆಂಕಪ್ಪನವರ, ಪ್ರೊ. ಸುರೇಶ ಮುದ್ದಾರ, ಆರ್.ಎಲ್.ಮಿರ್ಜಿ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts