ಬದಲಾವಣೆಗೆ ಐಒಟಿ ಪರಿಕಲ್ಪನೆ ಪೂರಕ

 ಕಲಬುರಗಿ: ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಲ್ ಆಫ್ ಐಒಟಿ ಇನ್ ರಿಸರ್ಚ ಮತ್ತು ಇಂಡಸ್ಟ್ರಿಯಲ್ ಅಪ್ಲಿಕೇಷನ್ ರಿಸರ್ಚ ಕಾರ್ಯಾಗಾರ ಶುಕ್ರವಾರ ನಡೆಯಿತು.
ಕಾಲೇಜಿನ ವಿದ್ಯುನ್ಮಾನ ಹಾಗೂ ದೂರಸಂಪರ್ಕ ವಿಭಾಗವು ಝಾನ್ಸಿ, ಉತ್ತರಪ್ರದೇಶದ ಬುಂದೇಲಖಂಡ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ ಟೆಕ್ಯೂಪ್ ಫೇಸ್-3 ಅಡಿ ಆಯೋಜಿಸಿದ್ದ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಸತೀಶಚಂದ್ರ ಹಡಗಲಿಮಠ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಸ್. ಹೆಬ್ಬಾಳ ಮಾತನಾಡಿ, ಅಂತರ್ಜಾಲ ವ್ಯಾಪ್ತಿ ಅಂಕೆಗೂ ಮೀರಿ ವಿಸ್ತರಿಸುತ್ತ ಎಲ್ಲವೂ ಅಂತರ್ಜಾಲಮಯ ಆಗುತ್ತಿರುವ ಈ ಹೊತ್ತಿನಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಪರಿಕಲ್ಪನೆ ನಮ್ಮೆಲ್ಲರ ಜೀವನದಲ್ಲಿ ಅಪಾರ ಬದಲಾವಣೆ ತರುತ್ತಿದೆ. ನಿತ್ಯ ಬಳಕೆ ವಸ್ತುಗಳೆಲ್ಲ ಅಂತಜರ್ಾಲ ವ್ಯಾಪ್ತಿಗೆ ತಂದು ಮಾಹಿತಿ ವಿನಿಮಯ ಸಾಧ್ಯವಾಗಿಸುವ ಐಒಟಿ ಪರಿಕಲ್ಪನೆಯು ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪನ್ನ ತಯಾರಿಕೆಯಲ್ಲಿ ಬಳಕೆಯಾದಾಗ ಇಂಡಸ್ಟ್ರಿಯಲ್ ಐಒಟಿ ಎಂದೆನಿಸಿಕೊಳ್ಳುತ್ತದೆ ಎಂದರು. ವಿಭಾಗದ ಮುಖ್ಯಸ್ಥ ಡಾ.ರಾಜುಯಾನ ಮಶೆಟ್ಟಿ ಹಾಗೂ ಡಾ.ಜಿ.ಎಸ್ ಬಿರಾದಾರ ನೇತೃತ್ವದ ಕಾರ್ಯಾಗಾರದಲ್ಲಿ ಸ್ಥಳೀಯ, ಸುತ್ತಮುತ್ತಲಿನ ಹಾಗೂ ಹೊರರಾಜ್ಯದ ಕಾಲೇಜುಗಳ ಉಪನ್ಯಾಸಕರು, ಸಂಶೋಧನಾನಿರತ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಇ ಆ್ಯಂಡ್ ಸಿ ವಿಭಾಗದ ಮುಖ್ಯಸ್ಥ ಡಾ.ರಾಜುಯಾನ ಮಶೆಟ್ಟಿ ಕಾರ್ಯಾಗಾರದ ಉದ್ದೇಶ ವಿವರಿಸಿದರು. ಮಹಾವಿದ್ಯಾಲಯದ ಟೆಕ್ಯೂಪ್-3 ಸಂಯೋಜಕ ಪ್ರೊ.ಶರಣ ಪಡಶೆಟ್ಟಿ ಮಾತನಾಡಿ, ನುರಿತ, ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಇವರ ಅನುಭವದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಿಯಾಂಕ ಪ್ರಾರ್ಥಿಸಿದರು. ಡಾ.ಜಿ.ಎಸ್. ಬಿರಾದಾರ ಸ್ವಾಗತಿಸಿದರು. ಡಾ.ಗೀತಾ ಪಾಟೀಲ್ ನಿರೂಪಣೆ ಮಾಡಿದರು. ವೀಣಾ ಸರಾಫ್ ವಂದಿಸಿದರು. 


ಕೈಗಾರಿಕಾ ಘಟಕಗಳಲ್ಲಿ ಐಒಟಿ ಬಳಕೆ
ಉತ್ಪನ್ನ ತಯಾರಿಕಾ ಘಟಕದಲ್ಲಿ ಬಳಸುವ ಸಂವೇದಕ (ಸೆನ್ಸರ್ಸ್), ಯಂತ್ರ, ರೋಬೋಟ್ಗಳು ಅಂತರ್ಜಾಲಕ್ಕೆ ಸಂಪರ್ಕಗೊಂಡಿರುತ್ತವೆ. ನಮ್ಮ ರಾಜ್ಯದ ಹಲವಾರು ಕೈಗಾರಿಕಾ ಘಟಕಗಳಲ್ಲಿ ಐಒಟಿ ಬಳಕೆ ಆರಂಭವಾಗಿದೆ. ಅನೇಕ ಕಂಪನಿಗಳು ಐಒಟಿ ಸಾಧನ ಸೇವೆ ಮತ್ತು ಸೌಲಭ್ಯ ನೀಡುತ್ತಿರುವುದು ವಿಶೇಷ. ಸಂವಹನ ಮಾಧ್ಯಮಗಳನ್ನು ಪೂರಕವಾಗಿ ಬಳಸುವುದರಿಂದ ಈ ಕ್ಷೇತ್ರ ಇನ್ನೂ ಹೆಚ್ಚು ಪರಿಣಾಮಕಾರಿ ಆಗಬಹುದಾಗಿದೆ. ಈ ದಿಸೆಯಲ್ಲಿ 2 ದಿನದ ತರಬೇತಿ ಕಾರ್ಯಾಗಾರ ಮಹತ್ತರ ಪಾತ್ರ ವಹಿಸಲಿದೆ.


ಟೆಕ್ಯೂಪ್-3 ಅಡಿ ಕಾಲೇಜಿನಲ್ಲಿ ಆಯೋಜಿಸಿರುವ ಈ ಕಾರ್ಯಾಗಾರ ತುಂಬ ಮಹತ್ವದ್ದಾಗಿದೆ. ಶಿಕ್ಷಕರು, ಸಂಶೋಧಕರು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು.
| ಡಾ.ಎಸ್.ಎಸ್.ಹೆಬ್ಬಾಳ
ಪ್ರಾಚಾರ್ಯ, ಪಿಡಿಎ ತಾಂತ್ರಿಕ ಕಾಲೇಜು

Leave a Reply

Your email address will not be published. Required fields are marked *